ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

  • IPL 2025 Mega Auction: ಐಪಿಎಲ್​ 2025ರ ಮೆಗಾ ಹರಾಜಿಗೂ ಮುನ್ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ವರದಿಯಾಗಿದೆ.

2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್​​ ಆಟಗಾರರು ತಮ್ಮ ತಂಡಗಳನ್ನು ತೊರೆಯುತ್ತಾರೆ ಎಂದು ವರದಿಯಾಗಿದೆ. ಐಪಿಎಲ್​​ನ ಮೆಗಾ ಹರಾಜಿಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಡೆಲ್ಲಿ ಮ್ಯಾನೇಜ್ಮೆಂಟ್ ಮತ್ತು ಪಂತ್ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಅವರನ್ನು ಕೈಬಿಡಲು ಚಿಂತಿಸುತ್ತಿದೆ.
icon

(1 / 5)

ಮೂಲಗಳ ಪ್ರಕಾರ, ಡೆಲ್ಲಿ ಪಂತ್ ಅವರನ್ನು ಬಿಡುಗಡೆ ಮಾಡಿದರೆ, ಸಿಎಸ್​ಕೆ ತಂಡವು ಅವರನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗದೆ. ಧೋನಿ ಮುಂದಿನ ಸೀಸನ್​ನಲ್ಲಿ ನಿವೃತ್ತಿ ಆಗುವ ಸಾಧ್ಯತೆ ಇದ್ದು ಪಂತ್ ಅವರನ್ನು ಧೋನಿ ಸ್ಥಾನಕ್ಕೆ ಖರೀದಿಸಲು ಯೋಚನೆ ನಡೆಸುತ್ತಿದೆ. ಒಂದು ವೇಳೆ ಪಂತ್ ಚೆನ್ನೈ ಸೇರಿದರೆ, ನಾಯಕನಾಗಿ ಯಾರು ಆಯ್ಕೆಯಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಪ್ರಸ್ತುತ ಋತುರಾಜ್ ಗಾಯಕ್ವಾಡ್ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ.
icon

(2 / 5)

ಡೆಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ರಿಕಿ ಪಾಂಟಿಂಗ್ ಅವರು  ಕೋಚ್ ಸ್ಥಾನದಿಂದ ಕೆಳಗಿಳಿದ್ದಾರೆ. ಗಂಗೂಲಿಯೇ ಈ ಪಾತ್ರ ವಹಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಡೆಲ್ಲಿ ತಂಡವು ಗೌತಮ್ ಗಂಭೀರ್ ಅವರಂತಹ ವ್ಯಕ್ತಿಯನ್ನು ಪಾಂಟಿಂಗ್ ಸ್ಥಾನ ತುಂಬಲು ಚಿಂತನೆ ನಡಡೆಸುತ್ತದೆ,
icon

(3 / 5)

ಮತ್ತೊಂದು ವರದಿಯಲ್ಲಿ ರೋಹಿತ್​ ಶರ್ಮಾ ಹಾಗೂ ಸೂರ್ಯಕುಮಾರ್​ ಯಾದವ್ ಮುಂಬೈ ತಂಡವನ್ನು ತೊರೆಯಲಿದ್ದು, ಕೋಲ್ಕತಾ ನೈಟ್ ರೈಡರ್ಸ್ ಅಥವಾ ಲಕ್ನೋ ಸೂಪರ್​​ ಜೈಂಟ್ಸ್​ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮುಂಬೈ ರೋಹಿತ್​​ರನ್ನು ಬಿಡುಗಡೆ ಮಾಡಿದರೂ ಸೂರ್ಯನನ್ನು ಉಳಿಸಿಕೊಳ್ಳಬಹುದು.
icon

(4 / 5)

ಕೆಎಲ್ ರಾಹುಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ಲಕ್ನೋ ಚಿಂತನೆ ನಡೆಸಿದೆ. ಏಕೆಂದರೆ ಕಳೆದ ವರ್ಷ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಹಾಗಾಗಿ ಬದಲಾವಣೆಗೆ ಎಲ್​ಎಸ್​ಜಿ ಮುಂದಾಗಿದೆ. ಒಂದು ವೇಳೆ ರೋಹಿತ್​ ಎಲ್​ಎಸ್​ಜಿ ತಂಡಕ್ಕೆ ಸೇರಿದರೆ, ರಾಹುಲ್​ರನ್ನು ನಾಯಕತ್ವದಿಂದ ತೆಗೆದುಹಾಕಬಹುದು.
icon

(5 / 5)

ಇತರ ಗ್ಯಾಲರಿಗಳು