2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

  • last ODI World Cup for these players: ವಿಶ್ವ ಕ್ರಿಕೆಟ್​ನ  ಈ10 ಆಟಗಾರರಿಗೆ ಬಹುಶಃ ಇದುವೇ ಕೊನೆಯ ಏಕದಿನ ವಿಶ್ವಕಪ್ ಆಗಲಿದೆ ಎನ್ನಲಾಗುತ್ತಿದೆ. ಮುಂದಿನ ವಿಶ್ವಕಪ್ 2027ರಲ್ಲಿ ನಡೆಯಲಿದ್ದು, ವಯಸ್ಸು, ಫಿಟ್​ನೆಸ್ ಆಧರಿಸಿ ಅಷ್ಟರೊಳಗೆ 10 ಆಟಗಾರರು ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.

2023ರ ವಿಶ್ವಕಪ್​ನಲ್ಲಿ ಕೆಲವರು ನಗುತ್ತಾ ಮೈದಾನ ತೊರೆದಿದ್ದಾರೆ. ಇನ್ನೂ ಕೆಲವರು ಕಣ್ಣೀರಿನೊಂದಿಗೆ ಹೊರ ನಡೆದರು. ಆದರೆ ಈ ವರ್ಷ ಆಡಿದ ಹಲವು ಸ್ಟಾರ್ ಆಟಗಾರರು 2027ರ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆ ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್​ ಎಂದರೂ ಅಚ್ಚರಿ ಇಲ್ಲ. ಅಂತಹ 11 ಆಟಗಾರರ ಪಟ್ಟಿ ಇಲ್ಲಿದೆ.
icon

(1 / 12)

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ. 
icon

(2 / 12)

ವಿರಾಟ್ ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ರೋಹಿತ್ ಶರ್ಮಾ ತಮ್ಮ ದೈನಂದಿನ ಜೀವನದ ಬಹುಪಾಲು ಜಿಮ್‌ನಲ್ಲಿ ಕಳೆಯುವ ಕ್ರಿಕೆಟಿಗರಿಗೆ ಸೇರಿದವರಲ್ಲ. 2027ರ ವಿಶ್ವಕಪ್ ವೇಳೆಗೆ ರೋಹಿತ್ 40 ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ಅಲ್ಲಿಯವರೆಗೆ ಹಿಟ್​ಮ್ಯಾನ್ ಆಡಲು ದೇಹ ಸ್ಪಂದಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಇದೇ ಅವರಿಗೆ ಕೊನೆಯ ವಿಶ್ವಕಪ್.
icon

(3 / 12)

ಡೇವಿಡ್ ವಾರ್ನರ್ ಈ ಹಿಂದೆಯೇ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು ಹೆಚ್ಚು ಮುಂದುವರೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಉತ್ತಮ ಲಯದಲ್ಲಿದ್ದವರಿಗಷ್ಟೇ ಅವಕಾಶ ಸಿಗುತ್ತದೆ ಎಂಬುದನ್ನು ಮರೆಯಬಾರದು. ಈಗ ಅವರು ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಹೀಗೆಯೇ ಇರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದು ಅಲ್ಲದೆ, ಈಗವರಿಗೆ 37 ವರ್ಷ. 2027ರ ವಿಶ್ವಕಪ್​ಗೆ 41 ವರ್ಷ ತುಂಬುತ್ತದೆ. ಹೀಗಾಗಿ ಬಹುತೇಕ ಇದೇ ವಿಶ್ವಕಪ್​ ಅವರಿಗೆ ಕೊನೆಯದ್ದು. 
icon

(4 / 12)

ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವುದಾಗಿ ಈಗಾಗಲೇ ಘೋಷಿಸಿದ್ದಾರೆ. ವಿಶ್ವಕಪ್​ಗೂ ಮುನ್ನವೇ ಈ ನಿರ್ಧಾರ ಪ್ರಕಟಿಸಿದ್ದರು. ಒಂದು ವೇಳೆ ಅವರು ನಿವೃತ್ತಿ ಘೋಷಿಸದೆ ಇದ್ದಿದ್ದರೆ ಮತ್ತೊಂದು ವಿಶ್ವಕಪ್ ಆಡುವ ಅವಕಾಶ ಇರುತ್ತಿತ್ತು. ಏಕೆಂದರೆ ಅವರಿಗೆ ಈಗ ಕೇವಲ 30 ವರ್ಷ. 2027ರ ವಿಶ್ವಕಪ್​ಗೆ 34 ವರ್ಷ ತುಂಬುತ್ತಿತ್ತು. ಹಾಗಾಗಿ ತಂಡದಲ್ಲಿ ಆಡುವ ಅವಕಾಶ ಹೆಚ್ಚಿತ್ತು. ಆದರೆ ದುರಾದೃಷ್ಟವಶಾತ್ ನಿವೃತ್ತಿ ಘೋಷಿಸಿದ್ದಾರೆ.
icon

(5 / 12)

33 ವರ್ಷದ ಕೇನ್ ವಿಲಿಯಮ್ಸನ್ 2027ರ ವಿಶ್ವಕಪ್‌ಗೆ 37 ವರ್ಷ ತುಂಬಲಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿದರೆ ಅವರಿಗೆ ಇನ್ನೊಂದು ಏಕದಿನ ವಿಶ್ವಕಪ್ ಅಸಾಧ್ಯವೇನಲ್ಲ. ಆದರೆ ಗಾಯದಿಂದ ಬಳಲುತ್ತಿರುವ ಕಿವೀಸ್ ತಾರೆ ತಮ್ಮ ಏಕದಿನ ವೃತ್ತಿಜೀವನವನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸುವ ಸಾಧ್ಯತೆಯಿಲ್ಲ. ಹಾಗಾಗಿ ಇದು ಬಹುಶಃ ಅವರ ಕೊನೆಯ ವಿಶ್ವಕಪ್ ಆಗಬಹುದು.
icon

(6 / 12)

ವಿಶ್ವಕಪ್​ ಟೂರ್ನಿ ಮುನ್ನ ಬೆನ್ ಸ್ಟೋಕ್ಸ್​ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮನವೊಲಿಕೆ ನಂತರ ಒಂದು ವರ್ಷದ ಬಳಿಕ ನಿವೃತ್ತಿ ಹಿಂಪಡೆದರು. ಆದರೆ ಅವರಿಗೆ ಟೆಸ್ಟ್​ ಕ್ರಿಕೆಟ್​ ಮೇಲಿರುವಷ್ಟು ಉತ್ಸಾಹ ಏಕದಿನದ ಮೇಲಿಲ್ಲ. ಶೀಘ್ರದಲ್ಲೇ ಮತ್ತೊಮ್ಮೆ ಏಕದಿನಕ್ಕೆ ವಿದಾಯ ಘೋಷಿಸುವ ಸಾಧ್ಯತೆ ಇದೆ. ಹಾಗಾಗಿ, 2027ರವರೆಗೆ ಏಕದಿನದಲ್ಲಿ ಮುಂದುವರಿಯುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗಿದೆ. ಇದೇ ಅವರಿಗೂ ಕೊನೆಯ ವಿಶ್ವಕಪ್.
icon

(7 / 12)

36 ವರ್ಷದ ಶಕೀಬ್ ಅಲ್ ಹಸನ್ 2027ರಲ್ಲಿ 40 ವರ್ಷಕ್ಕೆ ಕಾಲಿಡಲಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಎಳೆಯಲು ಎಷ್ಟೇ ಪ್ರಯತ್ನಿಸಿದರೂ, ಮುಂದಿನ ವಿಶ್ವಕಪ್‌ವರೆಗೆ ಬಾಂಗ್ಲಾದೇಶದ ಏಕದಿನ ತಂಡದಲ್ಲಿ ಅವರನ್ನು ನೋಡುವುದು ಅಸಂಭವವಾಗಿದೆ. ಈಗಾಗಲೇ ಪರ್ಯಾಯ ವೃತ್ತಿಜೀವನದತ್ತ ಮುಖ ಮಾಡಿರುವ ಸ್ಟಾರ್ ಆಲ್ ರೌಂಡರ್​ಗೆ ಇದು ಕೊನೆಯ ಏಕದಿನ ವಿಶ್ವಕಪ್ ಎಂದು ಹೇಳಿದರೆ ತಪ್ಪಾಗಲಾರದು. 
icon

(8 / 12)

ಕೆಲವೇ ದಿನಗಳಲ್ಲಿ ಮೊಹಮ್ಮದ್ ನಬಿ, 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ 2027ರ ವಿಶ್ವಕಪ್ ವೇಳೆಗೆ 43 ವರ್ಷಗಳ ಹೊಸ್ತಿಲನ್ನು ತಲುಪಲಿದ್ದಾರೆ. ಕೇವಲ ಏಕದಿನ ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ರೀತಿಯ ಕ್ರಿಕೆಟ್​ನಿಂದ ಶೀಘ್ರವೇ ಅಫ್ಘಾನಿಸ್ತಾನ ತಂಡ ತೊರೆಯುವ ಸಾಧ್ಯತೆ ಇದೆ. ಇದು ನಬಿ ಅವರ ಕೊನೆಯ ಏಕದಿನ ವಿಶ್ವಕಪ್ ಎಂಬುದು ಖಚಿತವಾಗಿದೆ.
icon

(9 / 12)

ಟ್ರೆಂಟ್ ಬೌಲ್ಟ್ ಈಗ ಟಿ20 ಲೀಗ್ ಫ್ರಾಂಚೈಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ನ್ಯೂಜಿಲೆಂಡ್ ಮಂಡಳಿ ಜೊತೆ ಗುತ್ತಿಗೆ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. 34 ವರ್ಷದ ಬೋಲ್ಟ್ 2027ರ ವಿಶ್ವಕಪ್ ವೇಳೆಗೆ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆ ವಯಸ್ಸಿನಲ್ಲಿ ವೇಗಿಗಳಿಗೆ ಅತ್ಯುತ್ತಮ ಲಯದಲ್ಲಿ ಇರುವುದು ಕಷ್ಟ. ಹಾಗಾಗಿ ಈ ಬಾರಿ ಅವರು ತಮ್ಮ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಡಿದ್ದಾರೆ ಎಂದು ಹೇಳಬಹುದು.
icon

(10 / 12)

ಈ ಬಾರಿ ಶ್ರೀಲಂಕಾದ ಆರಂಭದಲ್ಲಿ ಘೋಷಿಸಲಾದ ವಿಶ್ವಕಪ್ ತಂಡದಲ್ಲಿ ಏಂಜೆಲ್ ಮ್ಯಾಥ್ಯೂಸ್ ಇರಲಿಲ್ಲ. ಅವರು ಬದಲಿ ಆಟಗಾರನಾಗಿ ತಂಡವನ್ನು ಪ್ರವೇಶಿಸಿದರು. 36ರ ಹರೆಯದ ಏಂಜೆಲೊ 2027ರ ವಿಶ್ವಕಪ್‌ನಲ್ಲಿ 40 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಅಲ್ಲಿಯವರೆಗೂ ಮೈದಾನಕ್ಕಿಳಿಯುತ್ತಾರೆ ಎಂದು ಯಾರಿಂದಲೂ ಯೋಚಿಸಲು ಸಾಧ್ಯವಿಲ್ಲ. ಹಾಗಾಗಿ ಅವರ ಏಕದಿನ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ.
icon

(11 / 12)

ಅಲ್ಲದೆ, ಭಾರತದ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಆಸೀಸ್​ನ ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ನ್ಯೂಜಿಲೆಂಡ್‌ನ ಟಿಮ್ ಸೌಥಿ, ಇಂಗ್ಲೆಂಡ್‌ನ ಮೊಯೀನ್ ಅಲಿ, ಜೋ ರೂಟ್, ನೆದರ್ಲೆಂಡ್ಸ್​ನ ವ್ಯಾನ್ ಡೆರ್ ಮೆರ್ವಿ, ಪಾಕಿಸ್ತಾನದ ಇಫ್ತಿಕರ್ ಅಹ್ಮದ್ ಸೇರಿದಂತೆ ಹಲವು ಸ್ಟಾರ್​ ಆಟಗಾರರಿಗೆ ಇದೇ ಕೊನೆಯ ಏಕದಿನ ವಿಶ್ವಕಪ್ ಎಂದರೂ ಅಚ್ಚರಿ ಇಲ್ಲ.
icon

(12 / 12)

ಇತರ ಗ್ಯಾಲರಿಗಳು