ಏಕದಿನ ಕ್ರಿಕೆಟ್: ಟಾಸ್ ವೇಳೆಯೇ ಅರ್ಧಶತಕ ಪೂರೈಸಿದ ರೋಹಿತ್​ ಶರ್ಮಾ; ನಾಯಕನಾಗಿ ದಿಗ್ಗಜರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಕದಿನ ಕ್ರಿಕೆಟ್: ಟಾಸ್ ವೇಳೆಯೇ ಅರ್ಧಶತಕ ಪೂರೈಸಿದ ರೋಹಿತ್​ ಶರ್ಮಾ; ನಾಯಕನಾಗಿ ದಿಗ್ಗಜರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್

ಏಕದಿನ ಕ್ರಿಕೆಟ್: ಟಾಸ್ ವೇಳೆಯೇ ಅರ್ಧಶತಕ ಪೂರೈಸಿದ ರೋಹಿತ್​ ಶರ್ಮಾ; ನಾಯಕನಾಗಿ ದಿಗ್ಗಜರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಪರೂಪದ ಸಾಧನೆ ಮಾಡಿದ್ದಾರೆ. 50 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ 8 ನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಗಿಂತ ಕೊಹ್ಲಿ ಮುಂದಿದ್ದಾರೆ.

ಕಟಕ್​ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ (ಫೆ 9) ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಕಣಕ್ಕಿಳಿಯುತ್ತಿದ್ದಂತೆ ದಾಖಲೆ ಬರೆದಿದ್ದಾರೆ.
icon

(1 / 6)

(AP)

ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ರೋಹಿತ್​ ಶರ್ಮಾ 50ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 8ನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
icon

(2 / 6)

(REUTERS)

ರೋಹಿತ್ ತನ್ನ ನಾಯಕತ್ವದಲ್ಲಿ ಭಾರತ 50ನೇ ಏಕದಿನ ಪಂದ್ಯ ಆಡುತ್ತಿದೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 49 ಏಕದಿನ ಪಂದ್ಯಗಳಲ್ಲಿ 35ರಲ್ಲಿ ಗೆದ್ದಿದೆ. ಗೆಲುವಿನ ಶೇಕಡಾವಾರು 70 ಆಗಿದೆ. ಕನಿಷ್ಠ 10 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವವರಲ್ಲಿ ರೋಹಿತ್ ಅತ್ಯುತ್ತಮ ಶೇಕಡಾವಾರು ಹೊಂದಿದ್ದಾರೆ.
icon

(3 / 6)

(AFP)

ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ದಾಖಲೆ ಮಿಸ್ಟರ್ ಕೂಲ್ ಎಂಎಸ್ ಧೋನಿ ಹೆಸರಿನಲ್ಲಿದೆ. 200 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 2011ರ ಏಕದಿನ ವಿಶ್ವಕಪ್ ಗೆದ್ದಿತ್ತು.
icon

(4 / 6)

(@WorshipDhoni)

ರೋಹಿತ್​ಗಿಂತ ಮೊದಲು ಭಾರತ ತಂಡಕ್ಕೆ ಸಾರಥ್ಯ ವಹಿಸಿದ್ದ ಕೊಹ್ಲಿ 95 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಲ್ಕನೇ ನಾಯಕ ಕೊಹ್ಲಿ. ಧೋನಿ (200), ಅಜರುದ್ದೀನ್ (174) ಮತ್ತು ಸೌರವ್ ಗಂಗೂಲಿ (146) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
icon

(5 / 6)

ಕಳೆದ ವರ್ಷ ಟಿ20 ನಾಯಕನಾಗಿ ಭಾರತವನ್ನು ಟಿ20 ವಿಶ್ವಕಪ್​ಗೆ ಮುನ್ನಡೆಸಿದ ರೋಹಿತ್ ಈಗ ಏಕದಿನ ನಾಯಕನಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿಜವಾದ ಸವಾಲನ್ನು ಎದುರಿಸಲಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು