ಓವರ್​​ನಲ್ಲಿ 33 ರನ್, 14 ಎಸೆತಗಳಲ್ಲಿ 53 ರನ್; ಐಪಿಎಲ್​ನಲ್ಲಿ ವೇಗದ ಅರ್ಧಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ಶೆಫರ್ಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಓವರ್​​ನಲ್ಲಿ 33 ರನ್, 14 ಎಸೆತಗಳಲ್ಲಿ 53 ರನ್; ಐಪಿಎಲ್​ನಲ್ಲಿ ವೇಗದ ಅರ್ಧಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ಶೆಫರ್ಡ್

ಓವರ್​​ನಲ್ಲಿ 33 ರನ್, 14 ಎಸೆತಗಳಲ್ಲಿ 53 ರನ್; ಐಪಿಎಲ್​ನಲ್ಲಿ ವೇಗದ ಅರ್ಧಶತಕ ಸಿಡಿಸಿ ಚರಿತ್ರೆ ಸೃಷ್ಟಿಸಿದ ಶೆಫರ್ಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಅರ್ಧಶತಕವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೆಸ್ಟ್​​ ಇಂಡೀಸ್ ಸ್ಟಾರ್​ ಬ್ಯಾಟರ್ ರೊಮಾರಿಯೊ ಶೆಫಾರ್ಡ್​​ ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಬಾರಿಸಿ ಚರಿತ್ರೆ ಸೃಷ್ಟಿಸಿದ್ದಾರೆ.
icon

(1 / 8)

(REUTERS)

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗುಡುಗಿದ ಶೆಫರ್ಡ್​ ಕೇವಲ 14 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದಾರೆ. ಪರಿಣಾಮ ಕೊನೆಯ ಎರಡು ಓವರ್​ಗಳಲ್ಲಿ 53 ರನ್ ಬಾರಿಸಿದ್ದಾರೆ.
icon

(2 / 8)

14 ಎಸೆತಗಳಲ್ಲಿ 6 ಸಿಕ್ಸರ್, 4 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿ ಕೆಎಲ್ ರಾಹುಲ್, ಪ್ಯಾಟ್ ಕಮಿನ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೀಮಂತ ಲೀಗ್​ನಲ್ಲಿ ಮೂವರು 14 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ್ದಾರೆ.
icon

(3 / 8)

(PTI)

ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಅವರು 2023ರ ಐಪಿಎಲ್​ನಲ್ಲಿ ಕೆಕೆಆರ್​ ವಿರುದ್ಧ ಆರ್​ಆರ್​ ಪರ ಸಾಧನೆ ಮಾಡಿದ್ದರು.
icon

(4 / 8)

ಪಂಜಾಬ್ ಕಿಂಗ್ಸ್ ಪರ ಕೆಎಲ್ ರಾಹುಲ್ 2018ರಲ್ಲಿ ಡೆಲ್ಲಿ ವಿರುದ್ಧ, 2022ರಲ್ಲಿ ಕೆಕೆಆರ್​ ಪರ ಪ್ಯಾಟ್ ಕಮಿನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಇದೀಗ ಈ ಪಟ್ಟಿಗೆ ರೊಮಾರಿಯೊ ಶೆಫರ್ಡ್ ಸೇರ್ಪಡೆಯಾಗಿದ್ದಾರೆ.
icon

(5 / 8)

ರೊಮಾರಿಯೊ ಶೆಫರ್ಡ್ ವೇಗದ ಅರ್ಧಶತಕ ಮಾತ್ರವಲ್ಲ, ಪಂದ್ಯವೊಂದರಲ್ಲಿ ಕೊನೆಯ 2 ಓವರ್​​ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಅವರೇ ಆಗಿದ್ದಾರೆ. ಅಂತಿಮ 2 ಓವರ್​​ಗಳಲ್ಲಿ 54 ರನ್ ಕಲೆಹಾಕಿದ ಮೊದಲ ಆಟಗಾರನಾಗಿದ್ದಾರೆ.
icon

(6 / 8)

19ನೇ ಓವರ್​​ನಲ್ಲಿ 33 ರನ್ ಚಚ್ಚಿದ ಶೆಫರ್ಡ್, 20ನೇ ಓವರ್​​ನಲ್ಲಿ 20 ರನ್ ಕಲೆ ಹಾಕಿದರು. ಆ ಮೂಲಕ ಐಪಿಎಲ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆರ್​ಸಿಬಿ ಮೊದಲ ಆಟಗಾರ ಎನಿಸಿದ್ದಾರೆ.
icon

(7 / 8)

ಐಪಿಎಲ್​ನಲ್ಲಿ ಶೆಫರ್ಡ್​ 19 ಮತ್ತು 20ನೇ ಓವರ್​​ಗಳಲ್ಲಿ ಈವರೆಗೂ 42 ಎಸೆತಗಳಲ್ಲಿ ಬ್ಯಾಟಿಂಗ್ ಮಾಡಿದ್ದು 128 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್​ 304.76 ಇದೆ. 10 ಬೌಂಡರಿ, 13 ಸಿಕ್ಸರ್​ ಸಿಡಿಸಿದ್ದಾರೆ.
icon

(8 / 8)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು