ಕನ್ನಡ ಸುದ್ದಿ  /  Photo Gallery  /  Rose Day: 6 Beautiful Rose Varieties And The Meaning Behind Them

Rose Day: ಯಾವ ಬಣ್ಣದ ಗುಲಾಬಿಗೆ ಏನು ಅರ್ಥ? ನಿಮ್ಮಾಕೆಗೆ ಯಾವುದನ್ನು ನೀಡಬೇಕು?

  • ಪ್ರೇಮಿಗಳ ದಿನವು ಸಮೀಪಿಸುತ್ತಿದೆ. ಇಂದಿನಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನವಾದರೆ, ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಶುರುವಾಗುತ್ತದೆ. ಫೆಬ್ರವರಿ 7 ಅನ್ನು ರೋಸ್​ ಡೇ ಆಗಿ ಆಚರಿಸಲಾಗುತ್ತದೆ. ಗುಲಾಬಿಗಳು ಯಾವಾಗಲೂ ಪ್ರೀತಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಒಂದೊಂದು ಬಣ್ಣದ ಗುಲಾಬಿ ಹೂವಿಗೆ ಒಂದೊಂದು ಅರ್ಥ ಇದೆ. ಇದನ್ನು ತಿಳಿದುಕೊಂಡು ನಿಮ್ಮ ಪ್ರೇಯಸಿಗೆ ರೋಸ್​ ಡೇ ಅಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ.

ಕೆಂಪು ಗುಲಾಬಿ: ಪ್ರಪೋಸ್​ ಮಾಡಲು ಹೊರಟಿರುವವರು ನಿಮ್ಮ ಕನಸಿನ ರಾಣಿಗೆ ಕೆಂಪು ಗುಲಾಬಿಯನ್ನು ನೀಡಿ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿ. ಇದು ಪ್ರೀತಿ, ಪ್ರಣಯ ಮತ್ತು ಉತ್ಸಾಹದ ಸಂಕೇತವಾಗಿದೆ. ಈಗಾಗಲೇ ಇಬ್ಬರು ಒಪ್ಪಿ ಪರಸ್ಪರ ಪ್ರೀತಿಸುತ್ತಿದ್ದರೂ ಸಹ ಕೆಂಪು ಗುಲಾಬಿ ನೀಡಬಹುದು. 
icon

(1 / 7)

ಬಿಳಿ ಗುಲಾಬಿ: ಇದು ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ. ನಿಮ್ಮ ಲವರ್​ ಜೊತೆ ಜಗಳವಾಡಿ ಮನಸ್ತಾಪ ಉಂಟಾಗಿದ್ದರೆ ಬಿಳಿ ಗುಲಾಬಿ ನೀಡಿ ಪುನಃ ನಿಮ್ಮ ಪ್ರೀತಿಯನ್ನು ಆರಂಭಿಸಿ.   
icon

(2 / 7)

ಪೀಚ್​ ಅಥವಾ ಕೋರಲ್​ ಗುಲಾಬಿ: ನೀವು ಇಷ್ಟಪಡುವ ವ್ಯಕ್ತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಷ್ಟಪಡುತ್ತಿದ್ದರೆ ಕಿತ್ತಳೆ ಮತ್ತು ಗುಲಾಬಿ ಬಣ್ಣದ ಮಿಶ್ರಿತ ಪೀಚ್​ ಅಥವಾ ಹವಳದ ಬಣ್ಣದ ಗುಲಾಬಿ ನೀಡಿ ಸುಳಿವು ನೀಡಿ. 
icon

(3 / 7)

ಹಳದಿ ಗುಲಾಬಿ: ಹಳದಿ ಗುಲಾಬಿಗಳು ಸ್ನೇಹ ಮತ್ತು ಸಂತೋಷದ ಸಂಕೇತವಾಗಿದೆ. ನಿಮ್ಮ ಸ್ನೇಹಿತರು, ಪ್ರೀತಿಪಾತ್ರರು ಅಥವಾ ಯಾರೊಂದಿಗೆ ನೀವು ಹೊಸದಾಗಿ ಸ್ನೇಹ ಆರಂಭಿಸಬೇಕೆಂದಿದ್ದೀರೋ ಅವರಿಗೆ ನೀಡಿ. 
icon

(4 / 7)

ಲ್ಯಾವೆಂಡರ್ ಗುಲಾಬಿ: ಲ್ಯಾವೆಂಡರ್ ಅಥವಾ ನೇರಳೆ ಬಣ್ಣದ ಗುಲಾಬಿಗಳನ್ನು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದವರು ಕೊಡಬಹುದು.   
icon

(5 / 7)

ಪಿಂಕ್​ ಗುಲಾಬಿ: ಇದು ಸಂತೋಷ, ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಸಂಕೇತಿಸುತ್ತದೆ. ನೀವು ಗೌರವಿಸುವ ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಈ ಸುಂದರವಾದ ಪಿಂಕ್​ ಗುಲಾಬಿಯನ್ನು ನೀಡಿ. 
icon

(6 / 7)

ಹೀಗೆ ಒಂದೊಂದು ಬಣ್ಣದ ಗುಲಾಬಿ ಹೂವಿಗೆ ಒಂದೊಂದು ಅರ್ಥ ಇದೆ. ಇದನ್ನು ತಿಳಿದುಕೊಂಡು ನಿಮ್ಮ ಪ್ರೇಯಸಿಗೆ ರೋಸ್​ ಡೇ ಅಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ. 
icon

(7 / 7)

IPL_Entry_Point

ಇತರ ಗ್ಯಾಲರಿಗಳು