WPL 2023: ಆರ್‌ಸಿಬಿ vs ಗುಜರಾತ್ ಜೈಂಟ್ಸ್ ಪಂದ್ಯದ ಪ್ರಮುಖಾಂಶಗಳು ಹೀಗಿವೆ
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ WPL 2023ರ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ತಂಡವು 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
(1 / 5)
ಗುಜರಾತ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ, ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಡಿವೈನ್ ಕೇವಲ ಒಂದು ರನ್‌ಗಳಿಂದ ಶತಕ ವಂಚಿತರಾದರು.(PTI)
(2 / 5)
189 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಸುಲಭವಾಗಿ ಗೆಲುವನ್ನು ಒಲಿಸಿಕೊಂಡಿತು. ಸೋಫಿ ಡಿವೈನ್ 36 ಎಸೆತಗಳಲ್ಲಿ 99 ರನ್ ಸಿಡಿಸಿದರು. ಹೀಗಾಗಿ ಕೇವಲ 15.3 ಓವರ್‌ಗಳಲ್ಲಿ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.(PTI)
(4 / 5)
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ ಕಲೆ ಹಾಕಿತು. ಲಾರಾ ವೊಲ್ವಾರ್ಡ್ ಸತತ ಎರಡನೇ ಅರ್ಧಶತಕ ಸಿಡಿಸಿದರು.(PTI)
(5 / 5)
ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ ಎರಡು ವಿಕೆಟ್ ಪಡೆದರೆ, ಸೋಫಿ ಡಿವೈನ್ ಮತ್ತು ಪ್ರೀತಿ ಬೋಸ್ ತಲಾ ಒಂದು ವಿಕೆಟ್ ಪಡೆದರು.(PTI)
ಇತರ ಗ್ಯಾಲರಿಗಳು