2025ರ ಐಪಿಎಲ್ಗೆ ಒಬ್ಬರನ್ನಷ್ಟೇ ರಿಟೈನ್; ಆರ್ಸಿಬಿ ಉಳಿಸಿಕೊಳ್ಳುವ ಏಕಮಾತ್ರ ಆಟಗಾರ ಯಾರಿರಬಹುದು? ಗೆಸ್ ಮಾಡಿ
- IPL Retain 2025: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳಿಗೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಹಾಗಾದರೆ ಆರ್ಸಿಬಿ ಉಳಿಸಿಕೊಳ್ಳುವ ಆಟಗಾರ ಯಾರಿರಬಹುದು?
- IPL Retain 2025: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳಿಗೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಹಾಗಾದರೆ ಆರ್ಸಿಬಿ ಉಳಿಸಿಕೊಳ್ಳುವ ಆಟಗಾರ ಯಾರಿರಬಹುದು?
(1 / 9)
ಪ್ರಸಕ್ತ ಐಪಿಎಲ್ ಯಶಸ್ವಿ ಸಾಗುತ್ತಿದೆ. ಇದರ ಮಧ್ಯೆ ಮುಂದಿನ ಐಪಿಎಲ್ ಹರಾಜಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಿಟೈನ್ ಮತ್ತು ಆರ್ಟಿಎಂ ಕಾರ್ಡ್ಗಳ ಕುರಿತು ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿ ಮಾಲೀಕರ ನಡುವೆ ಮಾತುಕತೆ ನಡೆಯುತ್ತಿದೆ.
(2 / 9)
2011, 2014, 2018 ಮತ್ತು 2022ರ ಬಳಿಕ 2025ರಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಎಲ್ಲಾ 10 ತಂಡಗಳು ಭರ್ಜರಿ ಸಿದ್ಧತೆ ಪ್ರಾರಂಭಿಸಿವೆ. ನೂತನ ತಂಡಗಳನ್ನು ಕಟ್ಟಲು ತಂಡಗಳು ಸಜ್ಜಾಗಿವೆ. (PTI)
(3 / 9)
ಈ ಹಿಂದೆ ಮೂರರಿಂದ ನಾಲ್ವರನ್ನು ರಿಟೈನ್ ಮಾಡಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಅದರ ನಿಯಮ ಬದಲಿಸಲು ಬಿಸಿಸಿಐ ನಿರ್ಧರಿಸುತ್ತಿದೆ. ತಂಡದಲ್ಲಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಫ್ರಾಂಚೈಸಿಗಳು ಬಿಸಿಸಿಐಗೆ ವಿಶೇಷ ಮನವಿ ಮಾಡಿವೆ. ಆದರೆ ಬಿಗ್ಬಾಸ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.(PTI)
(4 / 9)
ಆ ಮೂಲಕ ರಿಟೆನ್ಶನ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಫ್ರಾಂಚೈಸಿಗಳಿಗೆ ಶಾಕ್ ನೀಡುತ್ತಿದೆ. ಬದಲಾಗಿ ಬೇರೆ ಆಫರ್ ನೀಡಲು ಮುಂದಾಗಿದೆ. ರೈಟ್ ಟು ಮ್ಯಾಚ್ ಕಾರ್ಡ್ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ ಅಂತಿಮಗೊಂಡಿಲ್ಲ.(PTI)
(5 / 9)
ಪ್ರತಿ ಫ್ರಾಂಚೈಸಿ ಒಬ್ಬರನ್ನಷ್ಟೇ ತಂಡದಲ್ಲಿ ಉಳಿಸಿಕೊಳ್ಳಬೇಕೆಂದು ಬಿಸಿಸಿಐ ಸೂಚಿಸಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಆದರೆ 7 ಆರ್ಟಿಎಂ ಕಾರ್ಡ್ ಬಳಕೆಗೆ ಅನುಮತಿ ನೀಡಬೇಕೇ ಎಂಬ ಬಗ್ಗೆ ಫ್ರಾಂಚೈಸಿ ಮತ್ತು ಬಿಸಿಸಿಐ ನಡುವೆ ಚರ್ಚೆಗಳು ನಡೆಯುತ್ತಿವೆ. ಆರ್ಟಿಎಂ ಕಾರ್ಡ್ ಎಂದರೆ ತಂಡವು ಹಿಂದಿನ ಆವೃತ್ತಿಯ ಹರಾಜಿನಲ್ಲಿ ಖರೀದಿಸಿದ ಬೆಲೆಗೆ ಮರಳಿ ಖರೀದಿಸಬಹುದು.(PTI)
(6 / 9)
ಒಬ್ಬರನ್ನಷ್ಟೇ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಬಿಸಿಸಿಐ ನಿಮಯ ಜಾರಿಗೆ ತಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಆತ ಬೇರೆ ಯಾರೂ ಅಲ್ಲ, ವಿರಾಟ್ ಕೊಹ್ಲಿ.(PTI)
(7 / 9)
ವಿರಾಟ್ರನ್ನು ಉಳಿಸಿಕೊಂಡು ಉಳಿದಂತೆ ಎಲ್ಲಾ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗುತ್ತದೆ. 17 ವರ್ಷಗಳ ಕಾಲ ಆರ್ಸಿಬಿ ಪರ ಆಡಿರುವ ಕೊಹ್ಲಿ, ಮುಂದಿನ ವರ್ಷಗಳಲ್ಲೂ ಆರ್ಸಿಬಿ ತಂಡವನ್ನೇ ಪ್ರತಿನಿಧಿಸುವುದಾಗಿ ಹೇಳಿದ್ದಾರೆ. ಯಾವೊಬ್ಬ ಆಟಗಾರ ಸಹ ಒಂದೇ ಫ್ರಾಂಚೈಸಿ ಪರ 17 ವರ್ಷಗಳ ಕಾಲ ಆಡಿಲ್ಲ. ಆರ್ಸಿಬಿ ಬಿಟ್ಟು ಹೋಗಲ್ಲ ಎಂದು ಕೊಹ್ಲಿ ಹೇಳಿದ್ದರೆ, ಬ್ರಾಂಡಿಂಗ್ ವಿಷಯವಾಗಿಯೂ ವಿರಾಟ್ರನ್ನು ಆರ್ಸಿಬಿ ಬಿಟ್ಟುಕೊಡುವುದಿಲ್ಲ.(ANI)
(8 / 9)
ಈ ಹಿಂದೆ 2014 ಮತ್ತು 2018ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್ಟಿಎಂ ಕಾರ್ಡ್ಗಳನ್ನು ಬಳಸಲಾಗಿತ್ತು. 2014ರಲ್ಲಿ ಉಳಿಸಿಕೊಂಡ ಆಟಗಾರರ ಸಂಖ್ಯೆಯನ್ನು ಅವಲಂಬಿಸಿ ತಂಡಗಳಿಗೆ ಒಂದು ಅಥವಾ 2 ಆರ್ಟಿಎಂ ಕಾರ್ಡ್ ಬಳಸಲು ಅವಕಾಶ ನೀಡಲಾಯಿತು. 2018ರಲ್ಲಿ ತಂಡಗಳು ಕನಿಷ್ಠ 2 ಮತ್ತು ಗರಿಷ್ಠ 3 ಕಾರ್ಡ್ಗಳನ್ನು ಬಳಸಲು ಸಾಧ್ಯವಾಯಿತು. ಆದಾಗ್ಯೂ, 2022ರಲ್ಲಿ ಈ ಆರ್ಟಿಎಂ ಕಾರ್ಡ್ ಬಳಕೆ ಇರಲಿಲ್ಲ.(PTI)
ಇತರ ಗ್ಯಾಲರಿಗಳು