ಸಾಯಿ ಸುದರ್ಶನ್ ಶತಕ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಲಯ ಕಂಡುಕೊಂಡ ರಿಂಕು ಸಿಂಗ್, ಮುನ್ನಡೆಯಲ್ಲಿ ಭಾರತ ಎ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾಯಿ ಸುದರ್ಶನ್ ಶತಕ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಲಯ ಕಂಡುಕೊಂಡ ರಿಂಕು ಸಿಂಗ್, ಮುನ್ನಡೆಯಲ್ಲಿ ಭಾರತ ಎ

ಸಾಯಿ ಸುದರ್ಶನ್ ಶತಕ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಲಯ ಕಂಡುಕೊಂಡ ರಿಂಕು ಸಿಂಗ್, ಮುನ್ನಡೆಯಲ್ಲಿ ಭಾರತ ಎ

  • India A vs England Lions 3rd Unofficial Test: ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ 3ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಮುನ್ನಡೆ ಸಾಧಿಸಿದೆ. ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸರನ್ಶ್ ಜೈನ್ ಅರ್ಧಶತಕ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸಾಯಿ ಸುದರ್ಶನ್‌ ಶತಕ ಬಾರಿಸಿದರು.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಮೂರನೇ ಅನಧಿಕೃತ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 7 ರನ್‌ಗಳಿಗೆ ಔಟಾದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಸಾಯಿ ಸುದರ್ಶನ್ ಅದ್ಭುತ ಶತಕ ಗಳಿಸಿದರು. 240 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ 117 ರನ್‌ ರನ್ ಕಲೆ ಹಾಕಿದರು. ಸರಣಿಯ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಸುದರ್ಶನ್ ಶತಕ ವಂಚಿತರಾಗಿದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು 97 ರನ್‌ಗಳಿಗೆ ಔಟಾದರು. 
icon

(1 / 5)

ವಾಷಿಂಗ್ಟನ್ ಸುಂದರ್‌ ಭಾರತದ ಟೆಸ್ಟ್ ತಂಡ ಸೇರಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆಗಾರರು ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಮೂರನೇ ಟೆಸ್ಟ್‌ಗೆ ಭಾರತೀಯ ಎ ತಂಡಕ್ಕೆ ಸರನ್ಶ್ ಜೈನ್ ಅವರನ್ನು ಕರೆಸಿಕೊಂಡರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸರನ್ಶ್, ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 64 ರನ್ ಗಳಿಸಿದ್ದ ಸರನ್ಶ್ ಎರಡನೇ ಇನಿಂಗ್ಸ್‌ನಲ್ಲಿ 102 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿ ಔಟಾದರು. 
icon

(2 / 5)

ವಾಷಿಂಗ್ಟನ್ ಸುಂದರ್‌ ಭಾರತದ ಟೆಸ್ಟ್ ತಂಡ ಸೇರಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆಗಾರರು ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಮೂರನೇ ಟೆಸ್ಟ್‌ಗೆ ಭಾರತೀಯ ಎ ತಂಡಕ್ಕೆ ಸರನ್ಶ್ ಜೈನ್ ಅವರನ್ನು ಕರೆಸಿಕೊಂಡರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸರನ್ಶ್, ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 64 ರನ್ ಗಳಿಸಿದ್ದ ಸರನ್ಶ್ ಎರಡನೇ ಇನಿಂಗ್ಸ್‌ನಲ್ಲಿ 102 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿ ಔಟಾದರು. (PTI)

ಭಾರತ ಎ ಪರ ಸತತ 2 ಇನ್ನಿಂಗ್ಸ್‌ಗಳಲ್ಲಿ ರಿಂಕು ರನ್‌ ಗಳಿಸುವಲ್ಲಿ ವಿಫಲರಾಗಿದ್ದರು. ಅಂತಿಮವಾಗಿ ಮೂರನೇ ಪಂದ್ಯದಲ್ಲಿ ಅವರು ಲಯ ಕಂಡುಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 25 ಎಸೆತಗಳಲ್ಲಿ 38 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್‌ ಆಡಿ ಮೈದಾನ ತೊರೆದರು. ರಿಂಕು 5 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. 
icon

(3 / 5)

ಎರಡನೇ ಇನ್ನಿಂಗ್ಸ್‌ನಲ್ಲಿ ತಿಲಕ್ ವರ್ಮಾ ಅರ್ಧಶತಕ ಮಿಸ್‌ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 22 ರನ್‌ಗಳಿಗೆ ಔಟಾದ ತಿಲಕ್, ಎರಡನೇ ಇನ್ನಿಂಗ್ಸ್‌ನಲ್ಲಿ 85 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ಅತ್ತ ಅಭಿಮನ್ಯು ಈಶ್ವರನ್ 22 ಮತ್ತು ದೇವದತ್ ಪಡಿಕ್ಕಲ್ 21 ರನ್ ಗಳಿಸಿ ಔಟಾದರು. 
icon

(4 / 5)

ಎರಡನೇ ಇನ್ನಿಂಗ್ಸ್‌ನಲ್ಲಿ ತಿಲಕ್ ವರ್ಮಾ ಅರ್ಧಶತಕ ಮಿಸ್‌ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 22 ರನ್‌ಗಳಿಗೆ ಔಟಾದ ತಿಲಕ್, ಎರಡನೇ ಇನ್ನಿಂಗ್ಸ್‌ನಲ್ಲಿ 85 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ಅತ್ತ ಅಭಿಮನ್ಯು ಈಶ್ವರನ್ 22 ಮತ್ತು ದೇವದತ್ ಪಡಿಕ್ಕಲ್ 21 ರನ್ ಗಳಿಸಿ ಔಟಾದರು. (PTI)

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ ಗಳಿಸಿ ಔಟಾಗಿದ್ದ ಕುಮಾರ ಕುಶಾಗ್ರಾ‌, ಎರಡನೇ ಇನ್ನಿಂಗ್ಸ್‌ನಲ್ಲಿ 40 ಎಸೆತಗಳಲ್ಲಿ 40 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್‌ ಆಡಿದರು. ಶಮ್ಸ್ ಮುಲಾನಿ 2, ಆಕಾಶ್ ದೀಪ್ 31 ಮತ್ತು ಅರ್ಷದೀಪ್ ಸಿಂಗ್ 5 ರನ್ ಗಳಿಸಿದರು. ಯಶ್ ದಯಾಳ್ 12 ರನ್ ಗಳಿಸಿ ಔಟಾಗದೆ ಉಳಿದರು. ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳ ಹಿನ್ನಡೆಯಲ್ಲಿದ್ದ ಭಾರತ ಎ ಎರಡನೇ ಇನ್ನಿಂಗ್ಸ್‌ನಲ್ಲಿ 409 ರನ್ ಗಳಿಸಿತು. ಹೀಗಾಗಿ ಇಂಗ್ಲೆಂಡ್ ಲಯನ್ಸ್ ಗೆಲುವಿಗೆ 403 ರನ್ ಗಳ ಗುರಿ ಸಿಕ್ಕಿದೆ. ಮೂರನೇ ಖಾಸಗಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 192 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ಲಯನ್ಸ್ 199 ರನ್‌ಗಳಿಗೆ ಆಲೌಟ್ ಆಗಿದ್ದು. 
icon

(5 / 5)

ಇತರ ಗ್ಯಾಲರಿಗಳು