ಕನ್ನಡ ಸುದ್ದಿ  /  Photo Gallery  /  Saina Nehwal Records List In Badminton

Saina Nehwal Photos: ಬ್ಯಾಡ್ಮಿಂಟನ್ ತಾರೆ ಸೈನಾ ಹೆಸರಲ್ಲಿರುವ ಈ ವಿಶೇಷ ದಾಖಲೆಗಳ ಬಗ್ಗೆ ನೀವೂ ತಿಳ್ಕೊಳಿ

Saina Nehwal : ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ಅವರು 2009-10ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಅನೇಕ ಉನ್ನತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ಅವರ ಪೋಷಕರು ಕೂಡ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಸೈನಾ ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆದರು.
icon

(1 / 6)

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಎಸ್ ಎಂ ಆರಿಫ್ ಅವರಿಂದ ಸೈನಾ ಬ್ಯಾಡ್ಮಿಂಟನ್ ಪಾಠ  ಕಲಿತರು.
icon

(2 / 6)

ಸೈನಾ 2003ರಲ್ಲಿ ತಮ್ಮ ಮೊದಲ ಟೂರ್ನಿಯನ್ನು ಆಡಿದ್ದರು. ಜೂನಿಯರ್ ಸಿಜೆಕೆ ಓಪನ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗೆದ್ದಿದ್ದರು.
icon

(3 / 6)

ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕವನ್ನು ಗೆದ್ದುಕೊಟ್ಟವರು ಸೈನಾ. ಸೈನಾ ನೆಹ್ವಾಲ್ ಅವರಿಗೆ 2009-10 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
icon

(4 / 6)

2009ರಲ್ಲಿ ಸೈನಾ ಇಂಡೋನೇಷ್ಯಾ ಓಪನ್‌ ಪ್ರಶಸ್ತಿ ಗೆದ್ದಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.
icon

(5 / 6)

ಇದಲ್ಲದೇ 2010ರಲ್ಲಿ ಸಿಂಗಾಪುರ ಓಪನ್, ಇಂಡಿಯಾ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್, ಹಾಂಕಾಂಗ್ ಸೂಪರ್ ಸಿರೀಸ್ ನಂತಹ ಪ್ರಮುಖ ಟೂರ್ನಿಗಳನ್ನು ಸೈನಾ ಗೆದ್ದಿದ್ದಾರೆ.
icon

(6 / 6)

ಇದಲ್ಲದೇ 2010ರಲ್ಲಿ ಸಿಂಗಾಪುರ ಓಪನ್, ಇಂಡಿಯಾ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್, ಹಾಂಕಾಂಗ್ ಸೂಪರ್ ಸಿರೀಸ್ ನಂತಹ ಪ್ರಮುಖ ಟೂರ್ನಿಗಳನ್ನು ಸೈನಾ ಗೆದ್ದಿದ್ದಾರೆ.(photos - Saina Nehwal instagram)

ಇತರ ಗ್ಯಾಲರಿಗಳು