Salaar Trailer Review: ಪ್ರಭಾಸ್‌ ನಟನೆಯ ಸಲಾರ್‌ ಟ್ರೈಲರ್‌ನಲ್ಲಿ ಈ 12 ಅಂಶ ಗಮನಿಸಿದ್ದೀರಾ, ಮೂಗುತಿ, ಸ್ನೇಹ, ವಿಮಾನ, ಅಮ್ಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Salaar Trailer Review: ಪ್ರಭಾಸ್‌ ನಟನೆಯ ಸಲಾರ್‌ ಟ್ರೈಲರ್‌ನಲ್ಲಿ ಈ 12 ಅಂಶ ಗಮನಿಸಿದ್ದೀರಾ, ಮೂಗುತಿ, ಸ್ನೇಹ, ವಿಮಾನ, ಅಮ್ಮ

Salaar Trailer Review: ಪ್ರಭಾಸ್‌ ನಟನೆಯ ಸಲಾರ್‌ ಟ್ರೈಲರ್‌ನಲ್ಲಿ ಈ 12 ಅಂಶ ಗಮನಿಸಿದ್ದೀರಾ, ಮೂಗುತಿ, ಸ್ನೇಹ, ವಿಮಾನ, ಅಮ್ಮ

  • Salaar Trailer Review: ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ್‌ ಸಿನಿಮಾ ಇದೇ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ನಿನ್ನೆ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಲಾರ್‌ ಟ್ರೈಲರ್‌ನಲ್ಲಿ ಕೆಜಿಎಫ್‌ ಛಾಯೆ, ಕತ್ತಲು, ಮೂಗುತಿ, ಸ್ನೇಹ, ವಿಮಾನ, ಅಮ್ಮ ಮುಂತಾದ ವಿಶೇಷವೆನಿಸುವ ಹಲವು ಅಂಶಗಳ ವಿವರ ಇಲ್ಲಿದೆ.

ಹೊಂಬಾಳೆ ಫಿಲ್ಮ್ ನಿರ್ಮಾಣದ ಸಲಾರ್‌ ಸಿನಿಮಾ ಇದೇ ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ನಿನ್ನೆ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಲಾರ್‌ ಟ್ರೈಲರ್‌ನಲ್ಲಿ ಕೆಜಿಎಫ್‌ ಛಾಯೆ, ಕತ್ತಲು, ಮೂಗುತಿ, ಸ್ನೇಹ, ವಿಮಾನ, ಅಮ್ಮ ಮುಂತಾದ ವಿಶೇಷವೆನಿಸುವ ಹಲವು ಅಂಶಗಳು ಕಾಣಿಸುತ್ತವೆ. 
icon

(1 / 14)

ಸಲಾರ್‌ ಟ್ರೈಲರ್‌ನಲ್ಲಿ ಕಂಡ ಬಾಲಕರ ಸ್ನೇಹ: ದೂರದೊಂದು ಪ್ರಾಂತ್ಯದಲ್ಲಿ ಬಿಡಿಸಲಾಗದ ಸ್ನೇಹವೊಂದಿದೆ. ಈ ಟ್ರೈಲರ್‌ನ ಆರಂಭದಲ್ಲಿ ಬಾಲಕರಿಬ್ಬರ ಸ್ನೇಹ ಕಾಣಿಸುತ್ತದೆ. ಬಾಲಕನಾಗಿರುವಾಗ ತನ್ನ ಸ್ನೇಹಿತನಿಗೆ ದೇವ ನೀಡಿದ ವಾಗ್ದಾನದಂತೆ ಮುಂದೊಂದು ದಿನ ಸಹಾಯಕ್ಕೆ/ಯುದ್ಧಕ್ಕೆ ಬರುತ್ತಾನೆ. ಈ ಮೂಲಕ ಸ್ನೇಹದ ಒಂದು ಭಾವನಾತ್ಮಕ ಟಚ್‌ ಟ್ರೈಲರ್‌ನಲ್ಲಿ ಕಾಣಿಸುತ್ತದೆ. ನಿನಗೋಸ್ಕರ ಕಾಲನೂ ಆಗುವೆ, ತಿಮಿಂಗಲವೂ ಆಗುವೆ, ನಿನ್ನ ಒಬ್ಬನಿಗೋಸ್ಕರ ಎಂಬ ಬಾಲಕದೇವನ ಡೈಲಾಗ್‌ ಇದೆ. 
icon

(2 / 14)

ಇಂಗ್ಲಿಷ್‌ ಡೈಲಾಗ್‌: ಈ ಟ್ರೈಲರ್‌ನ ಕೊನೆಗೆ ಕೈಂಡ್ಲಿ ರಿಕ್ವೆಸ್ಟ್‌ ಎಂಬ ಡೈಲಾಗ್‌ ಇದೆ. ಕೆಜಿಎಫ್‌ನಲ್ಲೂ ಇದೇ ರೀತಿಯ ಜನಪ್ರಿಯ ಇಂಗ್ಲಿಷ್‌ ಡೈಲಾಗ್‌ ಇದೆ ನೆನಪಿದೆಯೇ? ಇಫ್‌ ಯು ಥಿಂಕ್‌ ಯು ಆರ್‌ ಬ್ಯಾಡ್‌, ಐ ಆಮ್‌ ಯುವರ್‌ ಡ್ಯಾಡ್‌ ಎಂಬ ಡೈಲಾಗ್‌ ಇದೆ. ಇದೇ ರೀತಿ ಇಲ್ಲೂ ಕೈಂಡ್ಲಿ ರಿಕ್ವೆಸ್ಟ್‌ ಡೈಲಾಗ್‌ ಇದೆ.  
icon

(3 / 14)

ಮೂಗುತಿ: ಬಾಲಕನಾಗಿರುವಾಗಲೇ ದೇವ ನೀಡಿದ ಮೂಗುತಿ ಈ ಟ್ರೈಲರ್‌ನಲ್ಲಿ ಒಂದು ರೂಪಕವಾಗಿ ಕಾಣಿಸುತ್ತದೆ. ಅದು ಸ್ನೇಹದ ಸಂಕೇತವೂ ಹೌದು. ಆ ಮೂಗುತಿ ಕಿತ್ತು ತೆಗೆಯುವ ಪರಿಸ್ಥಿತಿ ಎದುರಾದಗ ದೇವನ ಎಂಟ್ರಿ ಆಗುತ್ತದೆ. 
icon

(4 / 14)

 ಡಕಾಯಿತರು, ವೈರಿಗಳ ಹೊಸ ಅವತಾರವನ್ನು ಇಲ್ಲಿ ಗಮನಿಸಬಹುದು. ಅಜಾನುಬಾಹು ದೇಹದ ವ್ಯಕ್ತಿಗಳು ಮುಖ ಕಾಣದಂತೆ ಪ್ರಾಣಿಯ ಮುಖದ ಮುಖವಾಡ ಧರಿಸಿದ್ದಾರೆ.  ಬಾಹುಬಾಲಿಯಲ್ಲಿ ಕಾಕತೇಯರ ರೂಪ ನೋಡಿದವರಿಗೆ ಇಲ್ಲಿ ಅದೇ ಮಾದರಿಯ ಆದರೆ ಇನ್ನಷ್ಟು ಭರ್ಜರಿ ಅವತಾರಗಳನ್ನು ನೋಡಬಹುದು.
icon

(5 / 14)

ಸಿಟಿ ಆಫ್‌ ಕಾನ್ಸರ್‌: ಇದೊಂದು ಕಾಲ್ಪನಿಕ ನಗರ. ಇಲ್ಲಿ ಆಧುನಿಕತೆ, ಅತ್ಯಾಧುನಿಕತೆಯ ಜತೆ ಪುರಾತನ ವ್ಯಕ್ತಿತ್ವಗಳೂ ಕಾಣಿಸುತ್ತವೆ. ಸುಧಾರಿತ ಶಸ್ತ್ರಾಸ್ತ್ರಗಳನ್ನೂ ಇಲ್ಲಿ ನೋಡಬಹುದು.
icon

(6 / 14)

ಪೃಥ್ವಿರಾಜ್‌ ಪಾತ್ರ: ಈ ಸಿನಿಮಾದಲ್ಲಿ ಪ್ರಭಾಸ್‌ ನಟನೆ ಮಾತ್ರವಲ್ಲದೆ ಮಲಯಾಳಂ ನಟ ಪೃಥ್ವಿರಾಜ್‌ ಅವರೂ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಹಳೆಯ ಸ್ನೇಹದ ಸಂಕೇತವಾದ ಅದೇ ಮೂಗುತಿ ಧರಿಸಿ ಪೃಥ್ವಿರಾಜ್‌ ಇಲ್ಲಿ ಇದ್ದಾರೆ.
icon

(7 / 14)

ಭದ್ರಕೋಟೆಯ ಸೆಟ್‌: ಬಾಹುಬಲಿಯಲ್ಲಿ ವಿಶೇಷ ಅರಮನೆ ನೋಡಿದ್ದೀರಿ, ಕೆಜಿಎಫ್‌ ಸಾಮ್ರಾಜ್ಯ ನೋಡಿದ್ದೀರಿ.  ಸಲಾರ್‌ನ ಈ ಕೋಟೆ, ಅರಮನೆಯೂ ಭರ್ಜರಿಯಾಗಿದೆ. ಈ ಸೆಟ್‌ ಕೂಡ ಇಷ್ಟವಾಗುತ್ತದೆ.  
icon

(8 / 14)

ಜನರಿಗಾಗಿ ಬದುಕುವ ವ್ಯಕ್ತಿ: ಈ ಸಾಮ್ರಾಜ್ಯದಲ್ಲಿ ಜನರ ಕಷ್ಟ ಬಗೆಹರಿಸುವ ವ್ಯಕ್ತಿಯಾಗಿಯೂ ಪೃಥ್ವಿರಾಜ್‌ ಕಾಣಿಸುತ್ತಾರೆ. ಇದರಲ್ಲಿರುವ ಜನರು, ಹಿರಿಯರನ್ನು ನೋಡಿದಾಗ ಕೆಜಿಎಫ್‌ ನೆನಪಿಗೆ ಬರಬಹುದು.
icon

(9 / 14)

ವಿಲನ್‌ಗಳು : ಈ ಗಡ್ಡದಾರಿಗಳನ್ನು ನೋಡುವಾಗ ಕೆಜಿಎಫ್‌ ನೆನಪಿಗೆ ಬರಬಹುದು. ಈ ಸಿನಿಮಾದಲ್ಲಿ ವಿಲನ್‌ ಪಾತ್ರಗಳೂ ಭರ್ಜರಿಯಾಗಿವೆ. 
icon

(10 / 14)

ಸೇನೆ: ಪ್ರಶಾಂತ್‌ ನೀಲ್‌ ಸಿನಿಮಾದಲ್ಲಿ ಯುದ್ಧ ಬೇಕು. ಸೇನೆ ಬೇಕು. ಸಲಾರ್‌ನಲ್ಲಿ ರಷ್ಯಾ ಸೇರಿದಂತೆ ವಿವಿಧ ಕಡೆಯ ಸೈನಿಕರು ಕಾಣಿಸುತ್ತಾರೆ. ಒಂದು ದೊಡ್ಡ ಯುದ್ಧ ನಡೆಯುವ ಸೂಚನೆ ಕಾಣಿಸುತ್ತದೆ. 
icon

(11 / 14)

ಧೈರ್ಯಶಾಲಿ ಅಮ್ಮ: ಈ ಚಿತ್ರದಲ್ಲೂ ಅಮ್ಮನ ಪಾತ್ರವೊಂದು ಕಾಣಿಸುತ್ತದೆ. ಬಾಹುಬಲಿ, ಕೆಜಿಎಫ್‌ನಲ್ಲೂ ಈ ರೀತಿಯ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. 
icon

(12 / 14)

ವಿಶೇಷ ವಿಮಾನ: ಈ ಚಿತ್ರದಲ್ಲಿ ಡ್ರೋಣ್‌ ರೀತಿಯ ಹಾರುವ ಯಂತ್ರಗಳು, ವಿಶೇಷ ಯುದ್ಧವಿಮಾನಗಳು ಇದ್ದು, ಪ್ರೇಕ್ಷಕರಿಗೆ ಹೊಸ ಬಗೆಯ ಅನುಭವ ನೀಡುವ ನಿರೀಕ್ಷೆಯಿದೆ. 
icon

(13 / 14)

ಒನ್‌ ಮ್ಯಾನ್‌ ಆರ್ಮಿ : ಕೆಜಿಎಫ್‌ನಲ್ಲಿ ಯಶ್‌ಗೆ ಹೇಗೆ ಪ್ರಾಮುಖ್ಯತೆಯೋ, ಸಲಾರ್‌ನಲ್ಲಿ ಪ್ರಭಾಸ್‌ಗೆ ಪ್ರಾಮುಖ್ಯತೆ ಇದೆ. ದೇವ ಒಬ್ಬ ಇದ್ದರೆ ಸಾಕು, ಬೇರೆ ಯಾವ ಸೇನೆಯೂ ಬೇಡ ಎಂಬ ರೀತಿಯ ಸಾಹಸ ಪ್ರದರ್ಶನವಿದು. ಹೀರೋಯಿಸಂನ ಪರಾಕಾಷ್ಠೆ ಈ ಚಿತ್ರದಲ್ಲೂ ಮುಂದುವರೆಯುವ ರೀತಿ ಕಾಣಿಸುತ್ತಿದೆ.  ಇವು ಒಂದಿಷ್ಟು ಉದಾಹರಣೆಗಳು, ಪ್ರಶಾಂತ್‌ ನೀಲ್‌ ನಿರ್ದೇಶನದ ಚಿತ್ರವಾಗಿರುವುದರಿಂದ ಈ ಸಲಾರ್‌ನಲ್ಲೂ ಹಳೆಯ ಸಿನಿಮಾಗಳ ಒಂದಿಷ್ಟು ಪ್ರಭಾವಳಿ ಕಾಣಿಸಿದರೆ ಅಚ್ಚರಿಯಿಲ್ಲ. 
icon

(14 / 14)

ಇತರ ಗ್ಯಾಲರಿಗಳು