Theatrical Releases: ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು; ಈ ವಾರದ ಟಾಪ್ 5 ಚಿತ್ರಗಳಿವು
- ಚಿತ್ರಮಂದಿರಗಳಲ್ಲಿ ಈ ಮೂರು ದಿನಗಳ ಕಾಲ ಸೂಪರ್‌ಸ್ಟಾರ್‌ಗಳ ಸಿನಿಮಾಗಳ ಆಗಮನವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರಲು ರೆಡಿಯಾಗಿದ್ದರೆ, ಕನ್ನಡದಲ್ಲಿ ಹೊಸ ಕಲಾವಿದರ ಜತೆಗೆ ಯೋಗರಾಜ್ ಭಟ್ ಚಿತ್ರಮಂದಿರಕ್ಕೆ ಎಂಟ್ರಿಕೊಡುತ್ತಿದ್ದಾರೆ. ಹೀಗಿವೆ ಟಾಪ್ 5 ಸಿನಿಮಾಗಳ ವಿವರ.
- ಚಿತ್ರಮಂದಿರಗಳಲ್ಲಿ ಈ ಮೂರು ದಿನಗಳ ಕಾಲ ಸೂಪರ್‌ಸ್ಟಾರ್‌ಗಳ ಸಿನಿಮಾಗಳ ಆಗಮನವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರಲು ರೆಡಿಯಾಗಿದ್ದರೆ, ಕನ್ನಡದಲ್ಲಿ ಹೊಸ ಕಲಾವಿದರ ಜತೆಗೆ ಯೋಗರಾಜ್ ಭಟ್ ಚಿತ್ರಮಂದಿರಕ್ಕೆ ಎಂಟ್ರಿಕೊಡುತ್ತಿದ್ದಾರೆ. ಹೀಗಿವೆ ಟಾಪ್ 5 ಸಿನಿಮಾಗಳ ವಿವರ.
(1 / 6)
ಚಿತ್ರಮಂದಿರಗಳಲ್ಲಿ ಈ ಮೂರು ದಿನಗಳ ಕಾಲ ಸೂಪರ್‌ಸ್ಟಾರ್‌ಗಳ ಸಿನಿಮಾಗಳ ಆಗಮನವಾಗುತ್ತಿವೆ. ಮಲಯಾಳಂ, ತಮಿಳು, ಹಿಂದಿಯಲ್ಲಿ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ.
(2 / 6)
ರಾಬಿನ್ ಹುಡ್: ಟಾಲಿವುಡ್ ನಟ ನಿತಿನ್ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʻರಾಬಿನ್ ಹುಡ್ʼ ಸಿನಿಮಾ ಮಾ. 28ರಂದು ಬಿಡುಗಡೆ ಆಗಲಿದೆ. ಮಾರ್ಚ್ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರವನ್ನು ವಿಕೆ ಫಿಲಂಸ್ ವಿತರಣೆ ಮಾಡುತ್ತಿದೆ.
(3 / 6)
ಸಿಕಂದರ್: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿರುವ ಈ ಸಿನಿಮಾ ಸಿಕಂದರ್. ಮಾರ್ಚ್ 30ರ ಈದ್ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಈ ಸಿನಿಮಾ ಬಿಡುಗಡೆ ಆಗಲಿದೆ. ಎ.ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣ ಮಾಡಿದ್ದಾರೆ.
(4 / 6)
ಮನದ ಮಾತು: ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಇದೇ ಮಾರ್ಚ್ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಮತ್ತೆ ಹೊಸ ಮುಖಗಳ ಜತೆಗೆ ಹೊಸ ಕಥೆಯೊಂದಿಗೆ ಆಗಮಿಸಿದ ಭಟ್ರು, ಮತ್ತೊಂದು ಯುವ ಪೀಳಿಗೆಗೆ ಹತ್ತಿರ ಎನಿಸುವ ಕಥೆಯ ಜತೆಗೆ ಆಗಮಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ಸುಮುಖ ಅಭಿನಯಿಸಿದರೆ, ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ.
(5 / 6)
ಎಲ್ 2: ಎಂಪುರನ್: ಮಲಯಾಳಂ ನಟ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಎಲ್-2: ಎಂಪುರಾನ್. ನಾಳೆ (ಮಾರ್ಚ್ 27) ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ತಾರಾಬಳಗದಲ್ಲಿದ್ದಾರೆ.
ಇತರ ಗ್ಯಾಲರಿಗಳು