ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಕೆಣಕಿದ್ದರ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಮ್ ಕಾನ್ಸ್ಟಾಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಕೆಣಕಿದ್ದರ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಮ್ ಕಾನ್ಸ್ಟಾಸ್

ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಕೆಣಕಿದ್ದರ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಮ್ ಕಾನ್ಸ್ಟಾಸ್

  • Sam Konstas: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಅವರು ತನಗೆ ಸ್ಲೆಡ್ಜಿಂಗ್ ಮಾಡಿದ್ದರ ಬಗ್ಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಕೊನೆಗೂ ಮೌನ ಮುರಿದಿದ್ದಾರೆ.

ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ 4ನೇ ಟೆಸ್ಟ್​ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ 19 ವರ್ಷದ ಸ್ಯಾಮ್​ ಕಾನ್ಸ್ಟಾಸ್ ಅವರು ಸೂಪರ್​ ಸ್ಟಾರ್ ವಿರಾಟ್ ಕೊಹ್ಲಿ ಜತೆಗಿನ ವಾಗ್ವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
icon

(1 / 9)

ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಆಸ್ಟ್ರೇಲಿಯಾದ 2ನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹದಿಹರೆಯದ ಸ್ಯಾಮ್ ಕಾನ್ಸ್ಟಾಸ್ ಅವರ ಫೇವರಿಟ್ ಕ್ರಿಕೆಟರ್ ಕೊಹ್ಲಿ ಅಂತೆ. ಸ್ಯಾಮ್ 60 ರನ್ (65 ಎಸೆತ, 6 ಫೋರ್, 2 ಸಿಕ್ಸರ್) ಗಳಿಸಿ ಔಟಾದರು.
icon

(2 / 9)

(HT_PRINT)

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 10ನೇ ಓವರ್​​ ವೇಳೆ ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ಗುದ್ದಿ ಕಾನ್ಸ್ಟಾಸ್​ರನ್ನು ಕೆಣಕಿದ್ದರು. ಇದು ಇಬ್ಬರ ನಡುವಿನ ವಾಗ್ವಾದಕ್ಕೂ ಕಾರಣವಾಯಿತು. ಕೊಹ್ಲಿ ನಡೆ ಆಕ್ರೋಶಕ್ಕೆ ಕಾರಣವಾಗಿತ್ತು.
icon

(3 / 9)

(AFP)

ಘಟನೆಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ ದಂಡದ ಶಿಕ್ಷೆ ವಿಧಿಸಿದೆ. ಪಂದ್ಯದ ಶುಲ್ಕದ ಶೇ 20 ರಷ್ಟು ದಂಡದ ಜೊತೆಗೆ ಒಂದು ಡಿಮೆರಿಟ್​ ಅಂಕವನ್ನು ನೀಡಿದೆ. ಅಂಪೈರ್​ಗಳು ಶಿಕ್ಷೆಗೆ ಮ್ಯಾಚ್​ ರೆಫ್ರಿಗೆ ದೂರು ನೀಡಿದ್ದರು.
icon

(4 / 9)

(AP)

ವಿರಾಟ್ ಕೊಹ್ಲಿ ತನ್ನ ಕೆಣಕಿದ್ದರ ನಡುವೆಯೂ ಸ್ಯಾಮ್ ಕಾನ್ಸ್ಟಾಸ್​, ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ. ಅಲ್ಲದೆ, ಕೊಹ್ಲಿ ಮತ್ತು ತನ್ನ ನಡುವಿನ ಏನಾಯಿತು ಎಂಬುದರ ಕುರಿತು ಕಾನ್ಸ್ಟಾಸ್ ವಿವರಣೆ ನೀಡಿದ್ದಾರೆ. ಅದರ ಬಗ್ಗೆ ಇಲ್ಲಿದೆ ನೋಡಿ.
icon

(5 / 9)

ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದರೂ ಯಾವುದೇ ದೂರುಗಳನ್ನು ನೀಡದ ಕಾನ್ಸ್ಟಾಸ್, ಆಟದಲ್ಲಿ ಇದೆಲ್ಲವೂ ಸಹಜ ಎಂದು ಹೇಳಿದ್ದಾರೆ. ಇಬ್ಬರಿಗೂ ಒಂದೇ ರೀತಿಯ ಭಾವನೆಗಳಿವೆ ಎಂದು ಭಾವಿಸುತ್ತೇನೆ. ನನಗೆ ಆ ಕ್ಷಣದಲ್ಲಿ ಏನಾಗ್ತಿದೆ ಎಂದು ಅರ್ಥವಾಗಲಿಲ್ಲ ಎಂದು  ಕಾನ್ಸ್ಟಾಸ್ ಚಾನೆಲ್​-7 ಕ್ರಿಕೆಟ್‌ಗೆ ತಿಳಿಸಿದ್ದಾರೆ. ಈ ವೇಳೆ ನಿರೂಪಕ ನಿಮ್ಮ ಫೇವರಿಟ್ ಕ್ರಿಕೆಟರ್​ ಜೊತೆಗಿನ ವಾಗ್ವಾದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ.
icon

(6 / 9)

ಇದೇ ವೇಳೆ ಬುಮ್ರಾ ವಿರುದ್ಧ ಆಡಿದ್ದರ ಕುರಿತು ಮಾತನಾಡಿದ ಕಾನ್ಸ್ಟಾಸ್, ಖಂಡಿತವಾಗಿಯೂ ಬುಮ್ರಾ ವಿಶ್ವದರ್ಜೆಯ ಬೌಲರ್​ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರ (ಬುಮ್ರಾ) ತಂತ್ರಗಳನ್ನು ಬದಲಿಸಲು ನಾನು ಒತ್ತಡ ಹೇರಲು ಪ್ರಯತ್ನಿಸಿದ್ದು ತುಂಬಾ ಖುಷಿ ಕೊಟ್ಟಿತು ಎಂದು ಪ್ರತಿಕ್ರಿಯಿಸಿದ್ದಾರೆ.
icon

(7 / 9)

ಬುಮ್ರಾರ ಒಂದೇ ಓವರ್​​​ನಲ್ಲಿ ಕಾನ್ಸ್ಟಾಸ್ ಅವರು 18 ರನ್ ಸಿಡಿಸಿದರು. ಕಾನ್ಸ್ಟಾಸ್ ಅವರು ಸಿಡಿಸಿದ 60 ರನ್​ಗಳ ಪೈಕಿ ಬುಮ್ರಾ ಅವರ ಬೌಲಿಂಗ್​​ನಲ್ಲೇ 34 ರನ್ ಬಂದಿರುವುದು ವಿಶೇಷ.
icon

(8 / 9)

4ನೇ ಟೆಸ್ಟ್​​ನ ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 86 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಪೇರಿಸಿದೆ. ಸ್ಯಾಮ್ ಕಾನ್ಸ್ಟಾಸ್ 60, ಉಸ್ಮಾನ್ ಖವಾಜ 57, ಮಾರ್ನಸ್ ಲಬುಶೇನ್ 72 ರನ್ ಗಳಿಸಿದ್ದಾರೆ. ಆದರೆ, ಸ್ಟೀವ್ ಸ್ಮಿತ್ ಅಜೇಯ 68 ರನ್ ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
icon

(9 / 9)

ಇತರ ಗ್ಯಾಲರಿಗಳು