Rajkumar Heroines: ರಾಜ್‌ಕುಮಾರ್ ಜತೆ ಯಾವ ನಟಿ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ? ಅತ್ಯಧಿಕ ಸಿನಿಮಾಗಳಲ್ಲಿ ನಟಿಸಿದ್ದು ಲೀಲಾವತಿ ಅಲ್ಲ
- Dr Rajukumar Heroines list: ಕನ್ನಡದ ಮೇರುನಟ ದಿ. ಡಾ. ರಾಜ್‌ಕುಮಾರ್ ಅವರು ಭಕ್ತ ಪ್ರಹ್ಲಾದದಿಂದ ಶಬ್ದವೇದಿ ತನಕ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರ ಜತೆ ನಾಯಕಿಯಾಗಿ ಸಾಕಷ್ಟು ತಾರೆಯರು ನಟಿಸಿದ್ದಾರೆ. ರಾಜ್‌ಕುಮಾರ್ ಜತೆ ಕನ್ನಡದ ಯಾವ ನಟಿ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ? ವಿವರ ಇಲ್ಲಿದೆ.
- Dr Rajukumar Heroines list: ಕನ್ನಡದ ಮೇರುನಟ ದಿ. ಡಾ. ರಾಜ್‌ಕುಮಾರ್ ಅವರು ಭಕ್ತ ಪ್ರಹ್ಲಾದದಿಂದ ಶಬ್ದವೇದಿ ತನಕ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಣ್ಣಾವ್ರ ಜತೆ ನಾಯಕಿಯಾಗಿ ಸಾಕಷ್ಟು ತಾರೆಯರು ನಟಿಸಿದ್ದಾರೆ. ರಾಜ್‌ಕುಮಾರ್ ಜತೆ ಕನ್ನಡದ ಯಾವ ನಟಿ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ? ವಿವರ ಇಲ್ಲಿದೆ.
(1 / 8)
ಡಾಕ್ಟರ್ ರಾಜ್‌ಕುಮಾರ್ ಜತೆ ಜಯಪ್ರದಾ, ಸರಿತಾ, ಗೀತಾ, ಕಾಂಚನಾ, ಲಕ್ಷ್ಮಿ, ಜಯಮಾಲ, ಮಂಜುಲಾ, ಮಾಧವಿ, ಹರಿಣಿ, ರಾಜಶ್ರೀ, ಸರೋಜಾ ದೇವಿ, ಆರತಿ, ಲೀಲಾವತಿ, ಜಯಂತಿ, ಕಲ್ಪನಾ ಸೇರಿದಂತೆ ಹಲವು ನಟಿಯರು ನಾಯಕಿಯಾಗಿ ನಟಿಸಿದ್ದಾರೆ. ಇವರಲ್ಲಿ ರಾಜ್ ಕುಮಾರ್ ಜತೆ ಯಾರು ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ವಿವರ ಪಡೆಯೋಣ.
(2 / 8)
ಜಯಂತಿ: ನಟಿ ಜಯಂತಿ ಅವರು ರಾಜ್‌ಕುಮಾರ್ ಜತೆ 38 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಮ್ಮಡಿ ಪುಲಿಕೇಶಿ, ಕಸ್ತೂರಿ ನಿವಾಸ, ಬಹದ್ದೂರ್ ಗಂಡು, ಚಿಕ್ಕಮ್ಮ, ಗಂಧದ ಗುಡಿ, ನಂದಗೋಕುಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜಯಂತಿ ನಟಿಸಿದ್ದಾರೆ. (dr rajkumar jayanthi movies)
(3 / 8)
ಲೀಲಾವತಿ: ಜಯಂತಿ ಬಳಿಕ ರಾಜ್‌ಕುಮಾರ್ ಜತೆ ಅತ್ಯಧಿಕ ಸಿನಿಮಾಗಳಲ್ಲಿ ನಟಿಸಿದ ನಟಿ ಲೀಲಾವತಿ. ಅಣ್ಣಾವ್ರ ಜತೆ ಸುಮಾರು 28 ಸಿನಿಮಾಗಳಲ್ಲಿ ನಟಿಸಿದ ಹೆಮ್ಮೆ ಇವರದ್ದು. ದೂರದ ಬೆಟ್ಟ, ಭಕ್ತ ಕುಂಬಾರ, ತುಂಬಿದ ಕೊಡ, ಶ್ರಾವಣ ಬಂತು, ವಸಂತ ಗೀತ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. (dr rajkumar and leelavathi movies)
(4 / 8)
ಭಾರತಿ: ರಾಜ್‌ಕುಮಾರ್ ಜತೆ ನಟಿ ಭಾರತಿ ಸುಮಾರು 26 ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಬಂಗಾರದ ಮನುಷ್ಯ, ಗಂಗೇ ಗೌರಿ, ಮೇಯರ್ ಮುತ್ತಣ್ಣ, ಭಲೇಜೋಡಿ, ಬಿಡುಗಡೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. (rajkumar bharathi movies list)
(5 / 8)
ಕಲ್ಪನಾ: ರಾಜ್‌ಕುಮಾರ್ ಮತ್ತು ಕಲ್ಪನಾ ಜತೆಯಾಗಿ ಸುಮಾರು 19 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡು ಕನಸು, ಇಮ್ಮಡಿ ಪುಳಿಕೇಶಿ, ದಾರಿ ತಪ್ಪಿದ ಮಗ, ಮಂತ್ರಾಲಯ ಮಹಿಮೆ, ದೇವರ ಮಕ್ಕಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಣ್ಣಾವ್ರ ಜತೆ ನಟಿಸಿದ್ದಾರೆ. (dr rajkumar kalpana movies)
(6 / 8)
ಪಂಡರಿಬಾಯಿ: ರಾಜ್ ಮತ್ತು ಪಂಡರಿಬಾಯಿ ಜತೆಯಾಗಿ 18 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಂಗಾರದ ಪಂಜರ, ಅಪೂರ್ವ ಸಂಗಮ, ಸತ್ಯ ಹರಿಶ್ಚಂದ್ರ, ಜೀವನಚೈತ್ರ, ಬೇಡರಕಣ್ಣಪ್ಪ ಸೇರಿದಂತೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜತೆ ನಟಿಸಿದ್ದಾರೆ. (rajkumar pandari bai movies)(abplive)
(7 / 8)
ಇನ್ನುಳಿದಂತೆ ರಾಜ್ ಕುಮಾರ್ ಜತೆ ಆರತಿ 13 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸರೋಜಾ ದೇವಿ 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜಶ್ರೀ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹರಿಣಿ 11 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು