‘ನಾನು ಧನ್ಯ’ ಎನ್ನುತ್ತ ಧನ್ಯತಾ ಜತೆ ಬಾಳ ಬಂಧನಕ್ಕೆ ಕಾಲಿಡುತ್ತಿದ್ದಾರೆ ಡಾಲಿ ಧನಂಜಯ್; ಇಲ್ಲಿದೆ ಈ ಜೋಡಿಯ ಮೊದಲ ಫೋಟೋಶೂಟ್
- Dhananjay Weds Dhanyata Photoshoot: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮದುವೆಯಾಗುವ ಹುಡುಗಿಯನ್ನು ಧನಂಜಯ್ ಪರಿಚಯಿಸಿದ್ದಾರೆ. ಆ ಹುಡುಗಿ ಹೆಸರೂ ಧನ್ಯತಾ! ವೃತ್ತಿಯಲ್ಲಿ ವೈದ್ಯಯಾಗಿರುವ ಧನ್ಯತಾ ಮೂಲತಃ ಚಿತ್ರದುರ್ಗದವರು.
- Dhananjay Weds Dhanyata Photoshoot: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಮದುವೆಯಾಗುವ ಹುಡುಗಿಯನ್ನು ಧನಂಜಯ್ ಪರಿಚಯಿಸಿದ್ದಾರೆ. ಆ ಹುಡುಗಿ ಹೆಸರೂ ಧನ್ಯತಾ! ವೃತ್ತಿಯಲ್ಲಿ ವೈದ್ಯಯಾಗಿರುವ ಧನ್ಯತಾ ಮೂಲತಃ ಚಿತ್ರದುರ್ಗದವರು.
(2 / 14)
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಕೊನೆಗೂ ಈ ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ ಕೊಟ್ಟಿದ್ದಾರೆ. ಇಲ್ಲಿಯವರೆಗೂ ಹೋದಲೆಲ್ಲ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಿಸಿದ್ದ ಧನಂಜಯ್, ಈಗ ಅದೆಲ್ಲದಕ್ಕೂ ಫೋಟೋ ಸಮೇತ ಉತ್ತರ ನೀಡಿದ್ದಾರೆ.
(4 / 14)
ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋ ಹಂಚಿಕೊಳ್ಳುವ ಮೂಲಕ ಧನಂಜಯ್ ಮದುವೆ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.
(5 / 14)
ಧನಂಜಯ್ ಯಾರನ್ನು ಮದುವೆಯಾಗುತ್ತಾರೆ? ಚಿತ್ರರಂಗದವರಾ ಅಥವಾ ಬೇರೆ ಕ್ಷೇತ್ರದವರನ್ನು ಮದುವೆಯಾಗುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.
(8 / 14)
ಧನಂಜಯ್ ಮತ್ತು ಧನ್ಯತಾ ಇಬ್ಬರು ಕೆಲ ವರ್ಷಗಳ ಪರಿಚಯ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.
(9 / 14)
ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿ
(11 / 14)
ಈ ಜೋಡಿಯ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಧನಂಜಯ್ ಮತ್ತು ಧನ್ಯತಾ ಮದುವೆ ನಡೆಯಲಿದೆ.
(12 / 14)
ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ.
(13 / 14)
ಬೆಳಗ್ಗೆ ಮಾಂಗಲ್ಯ ಧಾರಣೆ ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.
(14 / 14)
ಸೋಷಿಯಲ್ ಮೀಡಿಯಾದಲ್ಲಿ ಮದುವೆ ಆಗುವ ಹುಡುಗಿಯನ್ನು ಪರಿಚಯಿಸಿದ ಧನಂಜಯ್, ಹೀಗೆ ಬರೆದುಕೊಂಡಿದ್ದಾರೆ. “ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.. ನಾನು ಧನ್ಯ”
ಇತರ ಗ್ಯಾಲರಿಗಳು