ಸುತ್ತೂರು ಸ್ವಾಮೀಜಿಗಳಿಗೆ ಮದುವೆ ಆಮಂತ್ರಣ ನೀಡಿ, ಮಠದಲ್ಲಿ ನಂದಿ ಧ್ವಜ ಹೊತ್ತು ಕುಣಿದ ಡಾಲಿ ಧನಂಜಯ್
- ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1065ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ, ಸುತ್ತೂರು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ್ದಾರೆ. ಬಳಿಕ ನಂದಿ ಧ್ವಜ ಹೊತ್ತು ಕುಣಿದಿದ್ದಾರೆ.

(1 / 8)
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಸದ್ಯ ಮದುವೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಗಣ್ಯರಿಗೆ ಮದುವೆ ಆಮಂತ್ರಣ ಪತ್ರ ನೀಡಿ ಆದರದಿಂದ ಆಹ್ವಾನಿಸುತ್ತಿದ್ದಾರೆ.
(3 / 8)
ಇದೀಗ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1065ನೇ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ ಧನಂಜಯ್.
(4 / 8)
ಸುತ್ತೂರು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ ಧನಂಜಯ್, ಬಳಿಕ ನಂದಿ ಧ್ವಜ ಹೊತ್ತು ಕುಣಿದಿದ್ದಾರೆ.
ಇತರ ಗ್ಯಾಲರಿಗಳು