Darshan Thoogudeepa: ಸುದೀರ್ಘ ಏಳು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನಟ ದರ್ಶನ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Darshan Thoogudeepa: ಸುದೀರ್ಘ ಏಳು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನಟ ದರ್ಶನ್‌

Darshan Thoogudeepa: ಸುದೀರ್ಘ ಏಳು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನಟ ದರ್ಶನ್‌

  • ಸ್ಯಾಂಡಲ್‌ವುಡ್‌ ನಟ ದರ್ಶನ್‌, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೇ ಪ್ರಕರಣದ ಆರೋಪದ ಮೇಲೆ ಕಳೆ ಆರೂವರೆ ತಿಂಗಳ ಕಾಲ ಜೈಲಿನಲ್ಲಿದ್ದರು. ಕಳೆದ ತಿಂಗಳಷ್ಟೇ ಜಾಮೀನು ಪಡೆದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ದರ್ಶನ್‌, ಇದೀಗ ಬರೋಬ್ಬರಿ ಏಳು ತಿಂಗಳ ಬಳಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಏನಿದೆ ಆ ಪೋಸ್ಟ್‌ನಲ್ಲಿ.

ನಟ ದರ್ಶನ್‌ ಅವರಿಗೆ ಪ್ರತಿ ವರ್ಷ ಆಚರಿಸುವ ಸಂಕ್ರಾಂತಿ ಹಬ್ಬ ತುಂಬ ವಿಶೇಷವಾದುದ್ದು. ಕುಟುಂಬದ ಜತೆಗೆ ಹಬ್ಬದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಮೈಸೂರು ಹೊರವಲಯದಲ್ಲಿ ಇರುವ ವಿನೀಶ್‌ ಫಾರ್ಮ್‌ಹೌಸ್‌ನಲ್ಲಿ ಮಾತ್ರ ಹಬ್ಬದಾಚರಣೆ ಜೋರಾಗಿಯೇ ಇರುತ್ತದೆ. 
icon

(1 / 7)

(Instagram)

ಅಲ್ಲಿನ ದನ, ಕರು, ಹಸು, ಎತ್ತುಗಳ ಜತೆಗೆ ಸಂಕ್ರಾಂತಿಯನ್ನು ಅಷ್ಟೇ ಸಡಗರ ಸಂಭ್ರಮದಿಂದ ಆಚರಿಸುತ್ತಾರವರು. ಸೋಷಿಯಲ್‌ ಮೀಡಿಯಾದಲ್ಲಿ ಎತ್ತುಗಳ ಜತೆಗೆ ಫೋಟೋಗಳನ್ನು ಶೇರ್‌ ಮಾಡಿ ಶುಭಾಶಯ ಕೋರುತ್ತಾರೆ. 
icon

(2 / 7)

ಆದರೆ, ಕಳೆದ ವರ್ಷದ ಜೂನ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿದ್ದರು ದರ್ಶನ್‌. 
icon

(3 / 7)

ಅಲ್ಲಿಂದ ಸುದೀರ್ಘ ಆರೂವರೆ ತಿಂಗಳ ಕಾಲ ಜೈಲಿನಲ್ಲಿಯೇ ಕಳೆದ ದರ್ಶನ್‌ ಅವರಿಗೆ, ಕಳೆದ ತಿಂಗಳಷ್ಟೇ ಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. 
icon

(4 / 7)

ಇದೀಗ ಮೊದಲ ಸಲ ಮೈಸೂರಿನ ಫಾರ್ಮ್‌ಹೌಸ್‌ಗೆ ಪತ್ನಿ ವಿಜಯಲಕ್ಷ್ಮೀ ಜತೆಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಏಳು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹೀಗಿದೆ ದರ್ಶನ್‌ ಅವರ ಪೋಸ್ಟ್‌.   
icon

(5 / 7)

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ.
icon

(6 / 7)

ದರ್ಶನ್‌ ಅವರ ಈ ಶುಭಾಶಯ ಪೋಸ್ಟ್‌ ನೋಡಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು