ʻಕಾಂತಾರ; ಚಾಪ್ಟರ್‌ 1ʼ ಕಲಾವಿದರಿಗ್ಯಾಕೆ ಸಾವು ನೋವಿನ ಸಂಕಷ್ಟ? ರಿಷಬ್‌ ಶೆಟ್ಟಿ ತಂಡಕ್ಕೆ ಗಾಯದ ಮೇಲೆ ಮತ್ತೊಂದು ಬರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಕಾಂತಾರ; ಚಾಪ್ಟರ್‌ 1ʼ ಕಲಾವಿದರಿಗ್ಯಾಕೆ ಸಾವು ನೋವಿನ ಸಂಕಷ್ಟ? ರಿಷಬ್‌ ಶೆಟ್ಟಿ ತಂಡಕ್ಕೆ ಗಾಯದ ಮೇಲೆ ಮತ್ತೊಂದು ಬರೆ

ʻಕಾಂತಾರ; ಚಾಪ್ಟರ್‌ 1ʼ ಕಲಾವಿದರಿಗ್ಯಾಕೆ ಸಾವು ನೋವಿನ ಸಂಕಷ್ಟ? ರಿಷಬ್‌ ಶೆಟ್ಟಿ ತಂಡಕ್ಕೆ ಗಾಯದ ಮೇಲೆ ಮತ್ತೊಂದು ಬರೆ

ಕಾಮಿಡಿ ಕಿಲಾಡಿಗಳು ಸೀಸನ್‌ 3ರ ವಿಜೇತ ರಾಕೇಶ್‌ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ʻಕಾಂತಾರ ಚಾಪ್ಟರ್‌ 1ʼ ಸಿನಿಮಾ ಶೂಟಿಂಗ್‌ ಮುಗಿಸಿ, ಆಪ್ತರ ಮದುವೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದ ರಾಕೇಶ್‌, ಇಂದು (ಮೇ 12) ಬೆಳಗಿನ ಜಾವ ಅಸುನೀಗಿದ್ದಾರೆ. ಅಷ್ಟಕ್ಕೂ ʻಕಾಂತಾರ; ಚಾಪ್ಟರ್‌ 1ʼ ಕಲಾವಿದರಿಗ್ಯಾಕೆ ಸಾವು ನೋವಿನ ಸಂಕಷ್ಟ?

ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಅದ್ಯಾವ ಮಟ್ಟಿಗೆ ಇಡೀ ಭಾರತೀಯರನ್ನು ಬರಸೆಳೆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ 400 ಪ್ಲಸ್‌ ಕೋಟಿ ಗಳಿಕೆ ಕಂಡು ಹೊಸ ದಾಖಲೆಯನ್ನೇ ಬರೆಯಿತು.
icon

(1 / 9)

(Image source\ IMDb)

ಹೀಗೆ ಯಶಸ್ವಿಯಾದ ಈ ಚಿತ್ರ ಇದೀಗ ಕಾಂತಾರ ಚಾಪ್ಟರ್‌ 1 ಮೂಲಕ ಪ್ರೀಕ್ವೆಲ್‌ ತೆರೆಗೆ ತರುತ್ತಿದೆ. ಪಾರ್ಟ್‌ 2 ಸಿನಿಮಾ ಘೋಷಣೆ ಆಗಿದ್ದೇ ಬಂತು, ಸಾಲು ಸಾಲು ಸಂಕಷ್ಟಗಳು ಈ ಚಿತ್ರತಂಡಕ್ಕೆ ಎದುರಾಗುತ್ತಲೇ ಇದೆ. ಇದೀಗ ಇದೇ ಚಿತ್ರದ ನಟ ರಾಕೇಶ್‌ ಪೂಜಾರಿ ಸಾವು!
icon

(2 / 9)

ಕಾಂತಾರ ಸಿನಿಮಾದಲ್ಲಿ ರಾಕೇಶ್‌ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಚಿತ್ರೀಕರಣವನ್ನೂ ಮುಗಿಸಿದ್ದ ರಾಕೇಶ್‌, ಇಂದು (ಮೇ 12) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
icon

(3 / 9)

ಮೇ 11ರಂದು ಇದೇ ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಾಕೇಶ್‌, ಚಿತ್ರೀಕರಣ ಮುಗಿಸಿ ಆಪ್ತರ ಮದುವೆಗೆಂದು ಕಾರ್ಕಳಕ್ಕೆ ಭೇಟಿ ನೀಡಿದ್ದಾರೆ. ಸ್ನೇಹಿತರ ಜತೆ ಬೆರೆತು, ಮದುವೆ ಮನೆಯಲ್ಲಿ ಡಾನ್ಸ್‌ ಸಹ ಮಾಡಿ ನಗಿಸಿದ್ದರು.
icon

(4 / 9)

ಆದರೆ, ಇಂದು ಬೆಳಗಿನ ಜಾವ ಲೋ ಬಿಪಿಯಿಂದಾಗಿ ಹೃದಯಾಘಾತದಿಂದ ರಾಕೇಶ್‌ ಪೂಜಾರಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಅವರ ಆಪ್ತ ಬಳಗ ಮತ್ತು ಕರುನಾಡಿನ ಜನತೆ ಅಕ್ಷರಶಃ ಕಣ್ಣೀರಾಗಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾ ತಂಡಕ್ಕೆ ಗಾಯದ ಮೇಲೆ ಮತ್ತೊಂದು ಬರೆ ಬಿದ್ದಂತಾಗಿದೆ.
icon

(5 / 9)

ಇತ್ತೀಚೆಗಷ್ಟೇ ಕೇರಳ ಮೂಲದ ಕಪಿಲ್‌ ಎಂಬ ಜೂನಿಯರ್‌ ಕಲಾವಿದ ಬೈಂದೂರು ಸಮೀಪದ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿದ್ದ ಹೊಂಬಾಳೆ ಫಿಲಂಸ್‌, ಶೂಟಿಂಗ್‌ ಇಲ್ಲದ ಸಮಯದಲ್ಲಿ ಈಜಲು ಹೋದಾಗ ಈ ಘಟನೆ ನಡೆದಿತ್ತು ಎಂದು ಪೋಸ್ಟ್‌ ಹಂಚಿಕೊಂಡಿತ್ತು.
icon

(6 / 9)

ಅದಕ್ಕೂ ಮೊದಲು ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇದೇ ಕಾಂತಾರ ಚಾಪ್ಟರ್‌ 1 ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಜೂನಿಯರ್‌ ಕಲಾವಿದರಿಗೆ ಸಂಭಾವನೆ ನೀಡದೆ, ಅವ್ಯವಸ್ಥೆಯ ವಸತಿ ಸೌಕರ್ಯದ ಜತೆಗೆ ಊಟ ನೀಡುತ್ತಿಲ್ಲ ಎಂಬ ಆರೋಪ ಹೇಳಿಬಂದಿತ್ತು.
icon

(7 / 9)

ಕಾಂತಾರ ಚಿತ್ರದ ಜೂನಿಯರ್‌ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್‌, ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಹೊಡೆದಿತ್ತು. ಪಲ್ಟಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ 20 ಜನರ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದವು.
icon

(8 / 9)

ಇದೇ ವರ್ಷದ ಜನವರಿಯಲ್ಲಿ ಹೆರೂರು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿನ ಗೋಮಾಳ ಜಾಗದಲ್ಲಿ ಶೂಟಿಂಗ್‌ ವೇಳೆ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪ ಕಾಂತಾರ ಸಿನಿಮಾ ತಂಡದ ವಿರುದ್ಧ ಕೇಳಿಬಂದಿತ್ತು.
icon

(9 / 9)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು