ಕಾಂತಾರ ನಟ ರಿಷಬ್ ಶೆಟ್ಟಿ ಖರೀದಿಸಿದ 1.50 ಕೋಟಿ ರೂನ ಕಾರಿನಲ್ಲಿ ಏನೇನಿದೆ ವಿಶೇಷ? ಟೊಯೊಟಾ ವೆಲ್‌ಫೈರ್‌ನಲ್ಲಿ ಸೂಪರ್ ಫೀಚರ್ಸ್
- ಕಾಂತಾರ ನಟ ರಿಷಬ್ ಶೆಟ್ಟಿ ಮನೆಗೆ ಮತ್ತೊಂದು ವಿಲಾಸಿ ಕಾರು ಆಗಮಿಸಿದೆ. ಇವರು ನ್ಯೂ ಟೊಯೊಟಾ ವೆಲ್‌ಫೈರ್ ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನಲ್ಲಿ ಏನೆಲ್ಲ ವಿಶೇಷವಿದೆ? ಶೆಟ್ರ ಬಳಿ ಇರುವ ಮತ್ತೊಂದು ಐಷಾರಾಮಿ ಕಾರು ಯಾವುದು ಇತ್ಯಾದಿ ಮಾಹಿತಿ ತಿಳಿಯೋಣ ಬನ್ನಿ.

(1 / 12)
ಕಾಂತಾರ ಸಿನಿಮಾದ ಮೂಲಕ ಜಗತ್ತಿನ ಗಮನ ಸೆಳೆದ ರಿಷಬ್ ಶೆಟ್ಟಿ ಹೊಸದೊಂದು ಕಾರು ಖರೀದಿಸಿದ್ದಾರೆ. ಆ ಕಾರಿನ ಹೆಸರು ಟೊಯೊಟಾ ವೆಲ್‌ಫೈರ್. ಐಷಾರಾಮಿ, ಆರಾಮದಾಯಕ ಫೀಚರ್‌ಗಳನ್ನು ಹೊಂದಿರುವ ಈ ಕಾರಿನ ಇತ್ತೀಚಿನ ಆವೃತ್ತಿಯ ಆನ್‌ರೋಡ್ ದರ 1.50 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
(2 / 12)
ಹೊಸ ಕಾರಿನ ಮುಂದೆ ನಿಂತು ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(3 / 12)
ನ್ಯೂ ವೆಲ್‌ಫೈರ್ ದರವೆಷ್ಟು?: ಟೊಯೊಟಾ ಕಂಪನಿಯ ವೆಲ್‌ಫೈರ್ ಕಾರಿನ ಇತ್ತೀಚಿನ ಆವೃತ್ತಿಗೆ ನ್ಯೂ ವೆಲ್‌ಫೈರ್ ಎನ್ನುತ್ತಾರೆ. ಇದರ ಟಾಪ್ ಎಂಡ್ ಆವೃತ್ತಿಯ ಎಕ್ಸ್ ಶೋರೂಂ ದರ ಕರ್ನಾಟಕದಲ್ಲಿ 1.32 ಕೋಟಿ ರೂಪಾಯಿ ಇದೆ. ಆನ್‌ರೋಡ್ ದರ 1.50 ಕೋಟಿ ರೂಪಾಯಿ ದಾಟಬಹುದು.
(4 / 12)
ಟೊಯೊಟಾ ವೆಲ್‌ಫೈರ್ ವಿಶೇಷಗಳೇನು?: ಇದರಲ್ಲಿರುವ ಹತ್ತು ಹಲವು ವಿಶೇಷಗಳಲ್ಲಿ ಕೆಲವೊಂದು ಫೀಚರ್‌ಗಳನ್ನು ಈ ಮುಂದಿನಂತೆ ತಿಳಿಸಬಹುದು. ಕಂಫರ್ಟ್: ಲೆದರ್ ಫಿನಿಶ್ ಮತ್ತು ಮರದ ವಿನ್ಯಾಸದ ಪ್ರೀಮಿಯಂ ಡ್ಯೂಯಲ್ ಟೋನ್ ಡ್ಯಾಶ್‌ಬೋರ್ಡ್ ಇದೆ. ಡ್ಯೂಯೆಲ್ ಸನ್‌ರೂಫ್ ಇದೆ. ಅತ್ಯುತ್ತಮ ದರ್ಜೆಯ, ಆರಾಮದಾಯಕ ಲೆದರ್‌ಸೀಟುಗಳು ಇವೆ.
(5 / 12)
ಡಿಸೈನ್: 3 ಲೆನ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಡಿಎಆರ್‌ಎಲ್‌ಗಳು, 19 ಇಂಚಿನ ಡ್ಯೂಯೆಲ್ ಟೋನ್ ಮೆಷಿನ್ ಫಿನಿಶ್ ಅಲಾಯ್ ವೀಲ್, ಸುಂದರವಾದ ಹೊಳಪು ಹೊಂದಿರುವ ಪ್ರೀಮಿಯಂ ಬಾಡಿ ಕೋಟಿಂಗ್ ಇದೆ.
(6 / 12)
ಸೇಫ್ಟಿ: ಸುರಕ್ಷತೆಗಾಗಿ ಆರು ಯು ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು ಇವೆ. ಅತ್ಯುತ್ತಮ ಸುರಕ್ಷತೆಯ ಬಾಡಿ ಸ್ಟ್ರಕ್ಚರ್, ಹೈಬೀಮ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಪ್ರಿ ಕೊಲಿಷನ್ ಸೇಫ್ಟಿ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತೆಯ ಫೀಚರ್‌ಗಳು ಇವೆ. ಇದರಲ್ಲಿ ಟೊಯೊಟಾ ಹೈಬ್ರಿಡ್ 2.5 ಲೀಟರ್‌ನ ಎಂಜಿನ್ ಇದೆ.
(7 / 12)
ರಿಷಬ್ ಶೆಟ್ಟಿ ಬಳಿ ಈಗಾಗಲೇ ಔಡಿ ಕ್ಯೂ7 (Audi Q7) ಕಾರಿದೆ. 2022ರಲ್ಲಿ ಈ ಕಾರನ್ನು ಖರೀದಿಸಿದ್ದರು. ಇದರ ದರ ಸುಮಾರು 83 ಲಕ್ಷ ರೂಪಾಯಿ ಇದೆ.
(8 / 12)
ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕ: ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಾಪ್ಟರ್ 1ರ ಬಿಡುಗಡೆ ದಿನಾಂಕದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅಪ್‌ಡೇಟ್ ನೀಡಿತ್ತು.
(9 / 12)
"ಬ್ರೋ ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕ ಮುಂದೂಡಲಾಗುತ್ತದೆಯೇ" ಎಂದು ಅಭಿಮಾನಿಯೊಬ್ಬರು ಚಾಟಿಂಗ್ ಮಾಡುವಂತೆ ಈ ವಿಡಿಯೋ ಆರಂಭವಾಗಿದೆ. ಇದಾದ ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಇಲ್ಲ, ನೋ ಎಂದು ತಿಳಿಸಲಾಗಿದೆ. ಈ ವಿಡಿಯೋಗೆ ಸಪ್ತ ಸಾಗರದಾಚೆ ಟೈಟಲ್ ಟ್ರ್ಯಾಕ್‌ಹಾಕಲಾಗಿದೆ. ಈ ಮೂಲಕ ರಿಷಬ್ ಶೆಟ್ಟಿ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿಯ ಹಾಡಿನ ರಂಗಿನಲ್ಲಿ ಈ ವಿಡಿಯೋ ಮಾಡಿದ್ದಾರೆ. ಯಾವುದೇ ಸಂಶಯವಿಲ್ಲ, ಯಾವುದೇ ವಿಳಂಬವಿಲ್ಲ. ಈ ಲೆಜೆಂಡರಿ ಸಾಗಾವು ಅಕ್ಟೋಬರ್ 2, 2025ರಂದು ಬಿಡುಗಡೆಯಾಗಲಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಖಚಿತಪಡಿಸಿತ್ತು.
(10 / 12)

(11 / 12)
2022ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾದ ಫ್ರೀಕ್ವೆಲ್ ಆಗಿ ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಲಿದೆ. ಈ ಸಿನಿಮಾದ ಟೀಸರ್ ನವೆಂಬರ್ 2023ರಂದು ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಟ ರಿಷಬ್‌ಶೆಟ್ಟಿ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಚಾಪ್ಟರ್ 1ರಲ್ಲಿ ರಿಷಬ್ ಶೆಟ್ಟಿಯು ರಕ್ತಸಿಕ್ತ ಸನ್ಯಾಸಿಯಂತೆ ಕಾಣುವ ಪಾತ್ರದಲ್ಲಿ ಕಾಣಿಸಿದ್ದಾರೆ.
ಇತರ ಗ್ಯಾಲರಿಗಳು