ಸೆನ್ಸಾರ್‌ ಅಂಗಳದಲ್ಲಿ ಬಹುತಾರಾಗಣದ ಫಾರೆಸ್ಟ್‌ ಸಿನಿಮಾ; ಅಡ್ವೆಂಚರ್ಸ್ ಕಾಮಿಡಿ ಶೈಲಿಯ ಚಿತ್ರ ಶೀಘ್ರದಲ್ಲಿ ತೆರೆಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೆನ್ಸಾರ್‌ ಅಂಗಳದಲ್ಲಿ ಬಹುತಾರಾಗಣದ ಫಾರೆಸ್ಟ್‌ ಸಿನಿಮಾ; ಅಡ್ವೆಂಚರ್ಸ್ ಕಾಮಿಡಿ ಶೈಲಿಯ ಚಿತ್ರ ಶೀಘ್ರದಲ್ಲಿ ತೆರೆಗೆ

ಸೆನ್ಸಾರ್‌ ಅಂಗಳದಲ್ಲಿ ಬಹುತಾರಾಗಣದ ಫಾರೆಸ್ಟ್‌ ಸಿನಿಮಾ; ಅಡ್ವೆಂಚರ್ಸ್ ಕಾಮಿಡಿ ಶೈಲಿಯ ಚಿತ್ರ ಶೀಘ್ರದಲ್ಲಿ ತೆರೆಗೆ

  • Forest Kannada Movie: ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಫಾರೆಸ್ಟ್‌ ಸಿನಿಮಾ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇನ್ನೇನು ಶೀಘ್ರದಲ್ಲಿ ಸೆನ್ಸಾರ್‌ ಮಂಡಳಿ ಏರಿ, ಅಲ್ಲಿಂದ ಪ್ರಮಾಣ ಪತ್ರ ಪಡೆದ ಬಳಿಕ ಬಿಡುಗಡೆಯ ದಿನಾಂಕ ಘೋಷಣೆ ಮಾಡಲಿದೆ ಈ ಸಿನಿಮಾ.

ಎನ್ ಎಂ ಕಾಂತರಾಜ್, ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಫಾರೆಸ್ಟ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ‌‌. ಈ ಹಿಂದೆ ಡಬಲ್ ಇಂಜಿನ್, ಬ್ರಹ್ಮಚಾರಿ ಚಿತ್ರಗಳ ನಿರ್ದೇಶಕ ಚಂದ್ರಮೋಹನ್ ಈ ಚಿತ್ರಕ್ಕೆ  ಆಕ್ಷನ್ ಕಟ್ ಹೇಳಿದ್ದಾರೆ. 
icon

(1 / 5)

ಕಾಡಿನಲ್ಲೇ  ನಡೆಯುವ ಅಡ್ವೆಂಚರಸ್ ಕಾಮಿಡಿ ಕಥೆಯಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.  
icon

(2 / 5)

ಹಾಡು ಹಾಗೂ ಟೀಸರ್ ಮೂಲಕ ಈಗಾಗಲೇ ಜನರ ಮನ ಮುಟ್ಟಿರುವ ಈ ಚಿತ್ರಕ್ಕೆ ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಅವರದೇ ಸಂಭಾಷಣೆ ಇದೆ. ಧರ್ಮವಿಶ್ ಸಂಗೀತ, ಆನಂದ್‌ರಾಜಾ ವಿಕ್ರಮ್ ಹಿನ್ನೆಲೆ ಸಂಗೀತ, ರವಿಕುಮಾರ್  ಛಾಯಾಗ್ರಹಣ, ಅರ್ಜುನ್ ಕಿಟ್ಟು  ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ. ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.  
icon

(3 / 5)

ಇನ್ನುಳಿದಂತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ,  ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಫಾರೆಸ್ಟ್ ಚಿತ್ರದಲ್ಲಿ ನಟಿಸಿದ್ದಾರೆ. 
icon

(4 / 5)

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ.
icon

(5 / 5)

ಇತರ ಗ್ಯಾಲರಿಗಳು