ಚಂದದ ಬ್ಲೌಸ್‌ ಡಿಸೈನ್‌ ಹುಡುಕುತ್ತಿದ್ದೀರಾ? ನಟಿ ಮೋಕ್ಷಿತಾ ಪೈ ರಂಗಿನ ರವಿಕೆಗಳಿಂದ ಸ್ಫೂರ್ತಿ ಪಡೆಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಂದದ ಬ್ಲೌಸ್‌ ಡಿಸೈನ್‌ ಹುಡುಕುತ್ತಿದ್ದೀರಾ? ನಟಿ ಮೋಕ್ಷಿತಾ ಪೈ ರಂಗಿನ ರವಿಕೆಗಳಿಂದ ಸ್ಫೂರ್ತಿ ಪಡೆಯಿರಿ

ಚಂದದ ಬ್ಲೌಸ್‌ ಡಿಸೈನ್‌ ಹುಡುಕುತ್ತಿದ್ದೀರಾ? ನಟಿ ಮೋಕ್ಷಿತಾ ಪೈ ರಂಗಿನ ರವಿಕೆಗಳಿಂದ ಸ್ಫೂರ್ತಿ ಪಡೆಯಿರಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ, ಸೀರಿಯಲ್‌ ನಟಿ ಮೋಕ್ಷಿತಾ ಪೈ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀಲವರ್ಣದ ಸೀರೆ ಮತ್ತು ಎಂಬ್ರಾಡಯರಿ ವರ್ಕ್‌ ಇರುವ ತೆಳು ಕೆಂಪು ಬಣ್ಣದ ಬ್ಲೌಸ್‌ನಲ್ಲಿ ಮೋಕ್ಷಿತಾ ಪೈ ಸುಂದರವಾಗಿ ಕಾಣಿಸಿದ್ದಾರೆ.

ಮೋಕ್ಷಿತಾ ಪೈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ.  ಚಂದದ ಸೀರೆ, ಬ್ಲೌಸ್‌, ಆಭರಣ ಮತ್ತು ಸಿಂಪಲ್‌ ಮೇಕಪ್‌ನಿಂದ ಇವರ ಸೌಂದರ್ಯ ನೂರುಪಟ್ಟು ಹೆಚ್ಚಾಗಿದೆ. ಇವರು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಅಗ್ರ ನಾಲ್ಕನೇ ಸ್ಥಾನದವರೆಗೆ ಬಂದು ದೊಡ್ಮನೆಯಿಂದ ನಿರ್ಗಮಿಸಿದ್ದರು.
icon

(1 / 11)

ಚಂದದ ಬ್ಲೌಸ್‌ ಡಿಸೈನ್‌, ಬ್ಲೌಸ್‌ ತೋಳಿನ ಡಿಸೈನ್‌, ರವಿಕೆಯ ಹಿಂಬದಿ ಡಿಸೈನ್‌ ಹುಡುಕುತ್ತಿದ್ದರೆ ನಿಮಗೆ ನಟಿ ಮೋಕ್ಷಿತಾ ಪೈ ಅವರ ಈ ರಂಗಿನ ರವಿಕೆ ಸ್ಪೂರ್ತಿ ನೀಡಬಲ್ಲದು.
icon

(2 / 11)

ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಯಾರಂಗ್‌ ಡಿಸೈನ್‌ ಸ್ಟುಡಿಯೋದ‌ ಟೈಲರ್‌ಗಳು ವಿನ್ಯಾಸ ಮಾಡಿರುವ ಬ್ಲೌಸ್‌ ಅಭಿಮಾನಿಗಳ ಗಮನ ಸೆಳೆದಿದೆ. ನಲ್ಮೆ ಸಾರಿ ಸ್ಟುಡಿಯೋದ ಸೀರೆಯಲ್ಲಿ ಇವರು ಮಿಂಚಿದ್ದಾರೆ.
icon

(3 / 11)

ಚಾಮುಂಡೇಶ್ವರಿ ಕಲೆಕ್ಷನ್‌ನ ಜುವೆಲ್ಲರಿಯೂ ಪಾರು ಸೀರಿಯಲ್‌ ನಟಿಯ ಅಂದವನ್ನು ಹೆಚ್ಚಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಫೋಟೋಗಳಿಗೆ ಅಭಿಮಾನಿಗಳ ಕಾಮೆಂಟ್‌ಗಳ ಪ್ರವಾಹವೇ ಹರಿದುಬರುತ್ತಿದೆ.
icon

(4 / 11)

ಇದು ಎಸ್‌ವಿ ಡಿಸೈನರ್‌ ರೆಂಟಲ್‌ನವರ ಬ್ಲೌಸ್‌ ಡಿಸೈನ್‌.
icon

(5 / 11)

ಇದು ಎಸ್‌ವಿ ಡಿಸೈನರ್‌ ರೆಂಟಲ್‌ನವರ ಬ್ಲೌಸ್‌ ಡಿಸೈನ್‌.

ಇದು ರತಮ್‌ ಡಿಸೈನ್‌ ಸ್ಟುಡಿಯೋದವರು ಮಾಡಿರುವ ರವಿಕೆ ಡಿಸೈನ್‌.
icon

(6 / 11)

ಇದು ರತಮ್‌ ಡಿಸೈನ್‌ ಸ್ಟುಡಿಯೋದವರು ಮಾಡಿರುವ ರವಿಕೆ ಡಿಸೈನ್‌.

ಇದು ಡಿಸೈನರ್‌ ಟ್ರೆಂಡ್‌ ಬ್ರಿಂದಲ್‌ ಸ್ಟುಡಿಯೋದವರು ಮಾಡಿರುವ ರವಿಕೆ ವಿನ್ಯಾಸ. ನೀವು ಈ ಬ್ಲೌಸ್‌ ಡಿಸೈನ್‌ನಿಂದಲೂ ಸ್ಪೂರ್ತಿ ಪಡೆಯಬಹುದು.
icon

(7 / 11)

ಮೋಕ್ಷಿತಾ ಪೈ ಅವರು ಪಾರು ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಇದಾದ ಬಳಿಕ ಇವರಿಗ ಬಿಗ್‌ಬಾಸ್‌ ಕನ್ನಡದಲ್ಲಿ ಸ್ಪರ್ಧಿಸುವ ಅವಕಾಶ ದೊರಕಿತ್ತು.
icon

(8 / 11)

ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಮೋಕ್ಷಿತಾ ಪೈ ಅವರು ಧನುಷ್‌ ಗೌಡ ನಿರ್ದೇಶನದ ಮಿಡಲ್‌ ಕ್ಲಾಸ್‌ ರಾಮಾಯಣ ಸಿನಿಮಾದಲ್ಲಿ ನಟಿಸಿದ್ದಾರೆ.
icon

(9 / 11)

ಈ ರವಿಕೆ ವಿನ್ಯಾಸ ಹೇಗಿದೆ?. ಮೋಕ್ಷಿತಾ ಪೈ ನಿಯಮಿತವಾಗಿ ಸೀರೆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
icon

(10 / 11)

ಸೋಷಿಯಲ್‌ ಮೀಡಿಯಾಗಳಲ್ಲಿ ಉತ್ಪನ್ನಗಳನ್ನು ಮತ್ತು ಬ್ರ್ಯಾಂಡ್‌ಗಳನ್ನು ಪ್ರಮೋಟ್‌ ಮಾಡುವ ಮೂಲಕ ಸೆಲೆಬ್ರಿಟಿಗಳು, ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಆದಾಯ ಗಳಿಸುತ್ತಾರೆ.‌ ನಟಿ ಮೋಕ್ಷಿತಾ ಪೈ ಕೂಡ ವಿವಿಧ ಬ್ರ್ಯಾಂಡ್‌ಗಳ ಜತೆ ಸಹಭಾಗಿತ್ವ ಮಾಡಿಕೊಂಡು ರೂಪದರ್ಶಿಯಾಗಿ ಫೋಟೋಶೂಟ್‌ ಮಾಡಿಸಿಕೊಂಡು ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡುತ್ತಿದ್ದಾರೆ.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು