ಶಕ್ತಿಯ ಪ್ರತೀಕವಾಗಿ ಮಗಳಿಗೆ ದೇವಿಯ ಹೆಸರನ್ನಿಟ್ಟ ಹರ್ಷಿಕಾ ಪೂಣಚ್ಚ- ಭುವನ್‌ ಪೊನ್ನಣ್ಣ ದಂಪತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಕ್ತಿಯ ಪ್ರತೀಕವಾಗಿ ಮಗಳಿಗೆ ದೇವಿಯ ಹೆಸರನ್ನಿಟ್ಟ ಹರ್ಷಿಕಾ ಪೂಣಚ್ಚ- ಭುವನ್‌ ಪೊನ್ನಣ್ಣ ದಂಪತಿ

ಶಕ್ತಿಯ ಪ್ರತೀಕವಾಗಿ ಮಗಳಿಗೆ ದೇವಿಯ ಹೆಸರನ್ನಿಟ್ಟ ಹರ್ಷಿಕಾ ಪೂಣಚ್ಚ- ಭುವನ್‌ ಪೊನ್ನಣ್ಣ ದಂಪತಿ

ಸ್ಯಾಂಡಲ್‌ವುಡ್‌ನ ನಟ ಭುವನ್‌ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ದಂಪತಿ ಇದೀಗ ತಮ್ಮ ಮುದ್ದು ಮಗಳಿಗೆ ಚೆಂದದ ಹೆಸರನ್ನಿಟ್ಟಿದ್ದಾರೆ. ನವರಾತ್ರಿ ಸಮಯದಲ್ಲಿ ಮಡಿಲು ಸೇರಿದ್ದಕ್ಕಾಗಿ ಶಕ್ತಿಯ ಪ್ರತೀಕವಾಗಿ ದೇವಿಯ ನಾಮಕರಣ ಮಾಡಿದ್ದಾರೆ. ಆ ಪುಟಾಣಿಯ ಫೋಟೋವನ್ನೂ ರಿವೀಲ್‌ ಮಾಡಿದ್ದಾರೆ. ಹೀಗಿದೆ ನೋಡಿ ಮಗಳ ಹೆಸರು.

ಸ್ಯಾಂಡಲ್‌ವುಡ್ ನಟಿ‌ ಹರ್ಷಿಕಾ ಪೂಣಚ್ಚ ಮತ್ತು ಪತಿ ಭುವನ್‌ ಪೊನ್ನಣ್ಣ ಇದೀಗ ಸಂಭ್ರಮದಲ್ಲಿದ್ದಾರೆ. ಮಗಳಿಗೆ ನಾಮಕರಣ ಮಾಡಿ, ಖುಷಿಪಟ್ಟಿದ್ದಾರೆ. ಅಷ್ಟಕ್ಕೂ ಮಗಳ ಹೆಸರೇನು? ಮುಂದೆ ಓದಿ.
icon

(1 / 7)

(instagram\Bhuvan Ponnanna)

ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಹೆಸರನ್ನು ರಿವಿಲ್ ಮಾಡಿದ್ದಾರೆ ಹರ್ಷಿಕಾ ಭುವನ್. ಕೊಡವ ಸಂಪ್ರದಾಯದಂತೆ ಇಂದು (ಮೇ 3) ವಿರಾಜಪೇಟೆಯಲ್ಲಿ ಮಗಳ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿರೋ ದಂಪತಿ. ಹರ್ಷಿಕಾ -ಭುವನ್ ಮಗಳ ನಾಮಕರಣದಲ್ಲಿ ಸಿನಿಮಾ ಕಲಾವಿದರು ಹಾಗೂ ಸ್ನೇಹಿತರು ಭಾಗವಹಿಸಲಿದ್ದಾರೆ.
icon

(2 / 7)

2023 ಆಗಸ್ಟ್‌ 24ರಂದು ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿಯ ಅದ್ಧೂರಿ ಮದುವೆಯಾಗಿತ್ತು.
icon

(3 / 7)

ಅದಾದ ಮೇಲೆ ಕಳೆದ ವರ್ಷದ ಜುಲೈ ತಿಂಗಳಲ್ಲಿ "ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ" ಎನ್ನುವ ಮೂಲಕ ಸಿಹಿ ಸುದ್ದಿ ನೀಡಿದ್ದರು ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಣ್ಣ.  ಅದರಂತೆ ಕಳೆದ ವರ್ಷದ ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗುವಿಗೆ ಹರ್ಷಿಕಾ ಪೂಣಚ್ಚ ಜನ್ಮ ನೀಡಿದ್ದರು.
icon

(4 / 7)

ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿರುವ ದಂಪತಿ, ಆ ಹೆಸರಿನ ಹಿನ್ನೆಲೆಯೂ ಅಷ್ಟೇ ವಿಶೇಷವಾಗಿದೆ. "ತ್ರಿದೇವಿ ಈ ಹೆಸರನ್ನು ಏಕೆ ಆರಿಸಿಕೊಂಡೆವು ಎಂದರೆ, ಹಿಂದೂ ಧರ್ಮದಲ್ಲಿ, "ತ್ರಿದೇವಿ" ಎಂಬುದು ಮೂರು ಪ್ರಮುಖ ದೇವತೆಗಳನ್ನು ಸೂಚಿಸುತ್ತದೆ.
icon

(5 / 7)

ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ. ಅವರನ್ನು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರೆಂದು ಪರಿಗಣಿಸಲಾಗುತ್ತದೆ. ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತದೆ.
icon

(6 / 7)

ತ್ರಿದೇವಿ ಹೆಸರಿನ ಮೊದಲ ಅಕ್ಷರ "ತ್ರಿ". ಇದು ಅವಳ ಜನ್ಮ ದಿನಾಂಕವನ್ನು ಸೂಚಿಸುತ್ತದೆ. "ದೇವಿ" ಸೇರಿಸಲು ಕಾರಣ, ನಮ್ಮ ಈ ಮಗಳು ನವರಾತ್ರಿಯ ಮೊದಲ ದಿನದಂದು ಜನಿಸಿದ್ದಾಳೆ. ಕೊಲ್ಲೂರು ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಬಂದಿದ್ದಾಳೆ. ಪೊನ್ನಕ್ಕ ಎಂಬುದು ನಾನು ಮತ್ತು ಹರ್ಷಿಕಾಳ ಹೆಸರಿನ ಸಂಯೋಜನೆ. ಪೊನ್ನಣ್ಣ + ಹರ್ಷಿಕಾ = "ಪೊನ್ನಕ್ಕ" ಎಂಬುದು ಇದರರ್ಥ ಎಂದಿದ್ದಾರೆ ಭುವನ್‌ ಪೊನ್ನಣ್ಣ. ಜತೆಗೆ ನೀವು ಎಲ್ಲಿದ್ದರೂ ನಮ್ಮ ಪುಟ್ಟ ಮಗುವನ್ನು ಆಶೀರ್ವದಿಸಿ ಎಂದೂ ಪೋಸ್ಟ್‌ ಹಂಚಿಕೊಂಡಿದ್ದಾರೆ.
icon

(7 / 7)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು