‌Malashree Ramu: ಮುಂಬೈನಲ್ಲಿ ಇಷ್ಟದ ದೈವದ ದರ್ಶನ ಪಡೆದ ಮಾಲಾಶ್ರೀ; ಅಮ್ಮನಿಗೆ ಸಾಥ್‌ ನೀಡಿದ ‘ಕಾಟೇರ’ ನಾಯಕಿ ಆರಾಧನಾ ರಾಮ್ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‌Malashree Ramu: ಮುಂಬೈನಲ್ಲಿ ಇಷ್ಟದ ದೈವದ ದರ್ಶನ ಪಡೆದ ಮಾಲಾಶ್ರೀ; ಅಮ್ಮನಿಗೆ ಸಾಥ್‌ ನೀಡಿದ ‘ಕಾಟೇರ’ ನಾಯಕಿ ಆರಾಧನಾ ರಾಮ್ Photos

‌Malashree Ramu: ಮುಂಬೈನಲ್ಲಿ ಇಷ್ಟದ ದೈವದ ದರ್ಶನ ಪಡೆದ ಮಾಲಾಶ್ರೀ; ಅಮ್ಮನಿಗೆ ಸಾಥ್‌ ನೀಡಿದ ‘ಕಾಟೇರ’ ನಾಯಕಿ ಆರಾಧನಾ ರಾಮ್ PHOTOS

  • ಕಾಟೇರ ಸಿನಿಮಾ ಮೂಲಕ ಗಮನಸೆಳೆದ ಆರಾಧನಾ ರಾಮ್‌ ಅವರ ಮುಂದಿನ ಸಿನಿಮಾ ಯಾವುದು? ಸದ್ಯ ಈ ವಿಚಾರ ಇನ್ನಷ್ಟೇ ರಿವೀಲ್‌ ಆಗಬೇಕಿದೆ. ಈ ನಡುವೆಯೇ ತಾಯಿ ಮಾಲಾಶ್ರೀ ಜತೆ ಸೇರಿ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಮಾಲಾಶ್ರೀ.

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ ಸಿನಿಮಾಗಳಾಚೆಗೆ, ಅಧ್ಯಾತ್ಮ, ದೇವರು, ಸಂಪ್ರದಾಯ, ಆಚಾರ ವಿಚಾರಗಳಲ್ಲಿಯೂ ಮುಂದು. ಪ್ರತಿ ಹಬ್ಬವನ್ನು ಅಷ್ಟೇ ಗ್ರ್ಯಾಂಡ್‌ ಆಗಿಯೇ ಸೆಲೆಬ್ರೇಟ್‌ ಮಾಡುತ್ತಾರವರು. 
icon

(1 / 5)

(Instagram/ malashreeramu)

ಅದರಲ್ಲೂ ಆಗಾಗ ದೇವಸ್ಥಾನಗಳಿಗೂ ಫ್ಯಾಮಿಲಿ ಜತೆ ಹೋಗಿ ಬರುವುದುಂಟು. ಒಟ್ಟಿಗೆ ವಿದೇಶಿ ಪ್ರವಾಸ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಇದೀಗ ಮತ್ತೊಮ್ಮೆ, ಮಗದೊಮ್ಮೆ ಇಷ್ಟದ ದೈವದ ದರ್ಶನ ಮಾಡಿದ್ದಾರೆ ಮಾಲಾಶ್ರೀ.
icon

(2 / 5)

ಮುಂಬೈನ ಅಧಿಪತಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ತುಂಬ ವರ್ಷಗಳಿಂದಲೇ ಬರುತ್ತಿದ್ದಾರೆ. ವರ್ಷದಲ್ಲಿ ಎರಡು ಬಾರಿಯಾದರೂ ಗಣೇಶನ ದರ್ಶನ ಪಡೆದು ತೆರಳುತ್ತಾರೆ. ಫ್ಯಾಮಿಲಿ ಜತೆಗೂ ಭೇಟಿ ನೀಡುತ್ತಿರುತ್ತಾರೆ.
icon

(3 / 5)

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಿದ್ಧಿವಿನಾಯಕನ ದರ್ಶನ ಪಡೆದಿದ್ದ ಮಾಲಾಶ್ರೀ, ಇದೀಗ ನಾಲ್ಕು ತಿಂಗಳ ಬಳಿಕ, ಮಗಳು ಆರಾಧನಾ ನಾಯಕಿಯಾಗಿ ನಟಿಸಿದ್ದ ಚೊಚ್ಚಲ ಕಾಟೇರ ಸಿನಿಮಾ ಯಶಸ್ಸಿನ ಬಳಿಕ, ಮತ್ತೆ ಅದೇ ಸನ್ನಿಧಾನಕ್ಕೆ ತೆರಳಿದ್ದಾರೆ.
icon

(4 / 5)

ಇನ್ನು ಕಾಟೇರ ಸಿನಿಮಾ ಮೂಲಕ ಗಮನಸೆಳೆದ ಆರಾಧನಾ ರಾಮ್‌ ಅವರ ಮುಂದಿನ ಸಿನಿಮಾ ಯಾವುದು? ಸದ್ಯ ಈ ವಿಚಾರ ಇನ್ನಷ್ಟೇ ರಿವೀಲ್‌ ಆಗಬೇಕಿದೆ. 
icon

(5 / 5)

ಇತರ ಗ್ಯಾಲರಿಗಳು