ಮಗಳು ಪರಿ ಜತೆ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಫೋಟೋಶೂಟ್; ಹೃದಯ ಮುದಗೊಳಿಸುವ ಮಗುವಿನ ಮುದ್ದಾದ ಫೋಟೋಗಳಿವು
- Milana Nagaraj Darling Krishna Baby: ಕನ್ನಡ ಸಿನಿರಂಗದ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಮಗಳ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗಳ ಜತೆ ಅಪ್ಪ ಮತ್ತು ಅಮ್ಮ ಸಂಭ್ರಮಿಸುತ್ತಿರುವ ಈ ಫೋಟೋಗಳು ನಿಮ್ಮ ಹೃದಯವನ್ನೂ ಮುದಗೊಳಗಿಸಬಹುದು.
- Milana Nagaraj Darling Krishna Baby: ಕನ್ನಡ ಸಿನಿರಂಗದ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಮಗಳ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗಳ ಜತೆ ಅಪ್ಪ ಮತ್ತು ಅಮ್ಮ ಸಂಭ್ರಮಿಸುತ್ತಿರುವ ಈ ಫೋಟೋಗಳು ನಿಮ್ಮ ಹೃದಯವನ್ನೂ ಮುದಗೊಳಗಿಸಬಹುದು.
(1 / 11)
Milana Nagaraj Darling Krishna Baby: ಕನ್ನಡ ಸಿನಿರಂಗದ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಮಗಳ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗಳ ಜತೆ ಅಪ್ಪ ಮತ್ತು ಅಮ್ಮ ಸಂಭ್ರಮಿಸುತ್ತಿರುವ ಈ ಫೋಟೋಗಳು ನಿಮ್ಮ ಹೃದಯವನ್ನೂ ಮುದಗೊಳಗಿಸಬಹುದು. ಡಾರ್ಲಿಂಗ್ ಕೃಷ್ಣ ಇಂದು ಹಂಚಿಕೊಂಡ ಫೋಟೋ, ಮಿಲನಾ ನಾಗರಾಜ್ ನಿನ್ನೆ ಹಂಚಿಕೊಂಡ ಫೋಟೋ, ಇವರಿಬ್ಬರು ಈ ಹಿಂದೆ ಹಂಚಿಕೊಂಡ ಮಗುವಿನ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
(2 / 11)
ಕಳೆದ ಸೆಪ್ಟೆಂಬರ್‌ನಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ದಂಪತಿಗೆ ಮಗಳು ಜನಿಸಿದ್ದಳು. ಆ ಮಗುವಿಗೆ ಪರಿ ಎಂದು ಚಂದದ ಹೆಸರಿಟ್ಟಿದ್ದರು. ಈಗ ಪರಿಗೆ ಏಳು ತಿಂಗಳಾಗುತ್ತ ಬಂತು. ಮಗುವಿನ ಹಲವು ಫೋಟೋಗಳನ್ನು ಈ ಹಿಂದೆಯೂ ಇವರಿಬ್ಬರು ಹಂಚಿಕೊಂಡಿದ್ದರು. ಈಗ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಗಳ ಜತೆ ಫೋಟೋ ಶೂಟ್ ಮಾಡಿಕೊಂಡಿದ್ದಾರೆ.
(3 / 11)
ಪ್ರೇಮಿಗಳಾಗಿದ್ದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಯಾಗಿದ್ದಾರೆ. ಇವರಿಬ್ಬರದ್ದು ಲವ್ ಮ್ಯಾರೇಜ್. ಸುಮಾರು 8 ವರ್ಷ ಲವ್ ಮಾಡಿ, ಬಳಿಕ ಮದುವೆಯಾಗಿದ್ದರು.
(4 / 11)
ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಪ್ರೀತಿಸಿ ವಿವಾಹವಾಗಿದ್ದರು. ಸುಮಾರು ಎಂಟು ವರ್ಷಗಳ ಕಾಲ ಒಬ್ಬರನ್ನೊಬ್ಬರು ಇಷ್ಟಪಟ್ಟು, ಕುಟುಂದವರನ್ನು ಒಪ್ಪಿಸಿ ಮದುವೆಯಾಗಿದ್ದರು. ಪ್ರೇಮಿಗಳ ದಿನದಂದು ಮೂರು ವರ್ಷದ ಹಿಂದೆ ಮದುವೆಯಾಗಿದ್ದರು.
(5 / 11)
ಇವರ ಮದುವೆಗೆ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್, ರವಿಚಂದ್ರನ್, ರಕ್ಷಿತ್ ಶೆಟ್ಟ, ನಿಖಿಲ್ ಕುಮಾರಸ್ವಾಮಿ, ತಮನ್ನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ವಿವಾಹ ಸಮಾರಂಭದಲ್ಲಿ ಹಾಜರಿ ಹಾಕಿದ್ದರು.
(6 / 11)
ಡಾರ್ಲಿಂಗ್ ಕೃಷ್ಣ ಜತೆ ಮಿಲನಾ ನಾಗರಾಜ್ ನಟಿಸಿದ ಲವ್ ಮಾಕ್ಟೇಲ್ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದಾದ ಬಳಿಕ ಲವ್ ಮಾಕ್ಟೆಲ್ 2 ಸಿನಿಮಾ ರಿಲೀಸ್ ಆಗಿತ್ತು.
(7 / 11)
ಲಿಖಿತ್ ಶೆಟ್ಟಿ ಜತೆ ನಮ್ಮ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲಿ, ದರ್ಶನ್ ಜತೆ ಬೃಂದಾವನದಲ್ಲೂ ಮಿಲನಾ ನಟಿಸಿದ್ದರು. ಚಾರ್ಲಿಯಲ್ಲಿ ಪೂರ್ವಿಯಾಗಿ ಕಾಣಿಸಿಕೊಂಡಿದ್ದರು.
(8 / 11)
ಮಲಯಾಳಂನಲ್ಲಿ ಅವರುಂಡೆ ರಾವುಕಾಲ್ ಚಿತ್ರದಲ್ಲಿ ನಟಿಸಿದ್ದರು. ಲವ್ ಬರ್ಡ್ಸ್, ಕೌಶಲ್ಯ ಸುಪ್ರಜಾ ರಾಮಾ, ಫಾರ್ ರಿಜಿಸ್ಟ್ರೇಷನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಲನಾ ನಟಿಸಿದ್ದಾರೆ.
(9 / 11)
ಲವ್ ಮಾಕ್‌ಟೆಲ್ ಚಿತ್ರ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಲವ್ ಬರ್ಡ್ಸ್, ಕೌಶಲ್ಯ ಸುಪ್ರಜಾ ರಾಮಾ ಚಿತ್ರದ ಬಳಿಕ ಮಿಲನಾ ನಾಗರಾಜ್ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು.
(10 / 11)
ಡಾರ್ಲಿಂಗ್ ಕೃಷ್ಣ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಕಿ, ದಂಡಂದಶಗುಣಂ, ಹುಡುಗರು, ಮದರಂಗಿ, ನಮ್ ದುನಿಯಾ ನಮ್ ಸ್ಟೈಲ್, ರುದ್ರ ತಾಂಡವ, ಚಾರ್ಲಿ, ದೊಡ್ಮನೆ ಹುಡುಗ, ಜಾನಿ ಜಾನಿ ಜನಾರ್ಧನ್, ಮುಂಬೈ, ಹುಚ್ಚಾ 2, ಲವ್ ಮಾರ್ಕ್‌ಟೆಲ್, ಲಕ್ಕಿ ಮ್ಯಾನ್, ದಿಲ್ ಪಸಂದ್, ಕೌಸಲ್ಯ ಸುಪ್ರಜಾ ರಾಮ, ಶುಗರ್ ಫ್ಯಾಕ್ಟರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು