ನಿಮಗೆ ಮದುವೆಯಾಗುವ ಆಲೋಚನೆ ಇದೆಯೇ? ಕರುನಾಡಿನ ಮುದ್ದುಮುಖದ ಬೆಡಗಿ ಆಶಿಕಾ ರಂಗನಾಥ್‌ರನ್ನೊಮ್ಮೆ ನೋಡಿ
ಕನ್ನಡ ನಟಿ ಆಶಿಕಾ ರಂಗನಾಥ್ ಈಗ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಜೇಮ್ಸ್, ಮದಗಜ, ರಾಂಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್ ಅವರು ಮದುವೆಯಾಗಲು ಗಂಡು ಹುಡುಕುತ್ತಿದ್ದಾರ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ವಿಷಯ ಅದಲ್ಲ.
(1 / 11)
ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚಂದದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮಾಡರ್ನ್ ಡ್ರೆಸ್ ಜತೆಗೆ ಸಾಂಪ್ರದಾಯಿಕ ಸೀರೆಗಳಲ್ಲಿಯೂ ಪೋಸ್ ನೀಡುತ್ತಾ ಇರುತ್ತಾರೆ.
(2 / 11)
ಚಂದದ ಸೀರೆಯಲ್ಲಿ ಆಶಿಕಾ ರಂಗನಾಥ್ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ನೀವು ಸದ್ಯದಲ್ಲಿಯೇ ಮದುವೆಯಾಗುತ್ತಿದ್ದರೆ... ನೀವು ಮದುವೆಯಾಗಲಿರುವ ವಧುವಾಗಿದ್ದರೆ ಅವರು ಉಟ್ಟಿರುವ ಅಂದದ ಸೀರೆಗಳಿಂದ ಸ್ಪೂರ್ತಿ ಪಡೆಯಬಹುದಲ್ವೆ?
(3 / 11)
ಆಧುನಿಕ ಮಧುಮಕ್ಕಳು ಮದುವೆ ದಿನ (ಮೆಹಂದಿ ದಿನ ಅಥವಾ ಇನ್ನಿತರ ಕಾರ್ಯಕ್ರಮಗಳ ದಿನದಂದು ಕೂಡ) ಧರಿಸಲು ಚಂದದ ಸೀರೆ ಹುಡುಕುತ್ತಿರಬಹುದು. ಬ್ರೈಬ್‌ಗೆ ಸೂಕ್ತವಾದ ಸೀರೆಯನ್ನು ಹುಡುಕಲು ಆಶಿಕಾ ರಂಗನಾಥ್ ಅವರ ಈ ಸೀರೆಯಿಂದ ಸ್ಪೂರ್ತಿ ಪಡೆಯಬಹುದು.
(4 / 11)
ಆಶಿಕಾ ಅವರು ಕನ್ನಡದ ಕ್ರೇಜಿಬಾಯ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಕ್ಕೆ ಸೈಮಾ ಪ್ರಶಸ್ತಿ ಪಡೆದರು.
(5 / 11)
ಇವರು ಆರಂಭಿಕ ಶಿಕ್ಷಣವನ್ನು ತುಮಕೂರು ಬಿಷಪ್ ಸಾರ್ಗಂಟ್ ಶಾಲೆಯಲ್ಲಿ ಪಡೆದರು. ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪದವಿ ಪಡೆದರು.
(6 / 11)
ಕಾಲೇಜಿನಲ್ಲಿ ಇರುವಾಗ ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಗೆ ಅಡಿಶನ್ ಮಾಡಿದರು. ಮಿಸ್ ಫ್ರೆಶ್ ಫೇಸ್ 2014 ಗೆದ್ದರು.
(7 / 11)
ಕ್ರೇಜಿ ಬಾಯ್ ಸಿನಿಮಾದ ಬಳಿಕ ಮಾಸ್ ಲೀಡರ್, ಮುಗುಳುನಗೆ, ರಾಜು ಕನ್ನಡ ಮೀಡಿಯಂ, ರಾಂಬೋ 2 ಸಿನಿಮಾಗಳಲ್ಲಿ ನಟಿಸಿದರು.
(8 / 11)
ತಾಯಿಗೆ ತಕ್ಕ ಮಗ, ಕೋಟಿಗೊಬ್ಬ 3, ಮದಗಜಮ ಜೇಮ್ಸ್, ಅವತಾರ ಪುರುಷ, ಗರುಡ, ಕಾಣೆಯಾದವರ ಬಗ್ಗೆ ಪ್ರಕಣಟೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
(9 / 11)
ರೆಮೊ, ಪಟ್ಟತ್ ಅರಸನ್, ಅಮಿಗೋಸ್, ನಾ ಸಾಮಿ ರಂಗ, ಅವತಾರ ಪುರುಷ 2, ಒ2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು