ಬಘೀರ ಬಿಡುಗಡೆಗೆ ಮುನ್ನ ಮುದ್ದಾದ ಫೋಟೋಗಳನ್ನು ಹಂಚಿಕೊಂಡ ರುಕ್ಮಿಣಿ ವಸಂತ್; ಪರಿಚಯವಾದೆ ಹಾಡಿನ ಕಿಕ್ಕಿನಲ್ಲಿ ರುಕ್ಕು
- ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ ಬಘೀರ ಸಿನಿಮಾ ಈ ವಾರ ಅಂದರೆ ಅಕ್ಟೋಬರ್ 31ರಂದು ದೀಪಾವಳಿ ಹಬ್ಬದ ಬೆಳಕಿನಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರುಕ್ಮಿಣಿ ವಸಂತ್ ಚಂದದ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಹೆಚ್ಚಿಸಿದ್ದಾರೆ.
- ಶ್ರೀಮುರಳಿ, ರುಕ್ಮಿಣಿ ವಸಂತ್ ನಟನೆಯ ಬಘೀರ ಸಿನಿಮಾ ಈ ವಾರ ಅಂದರೆ ಅಕ್ಟೋಬರ್ 31ರಂದು ದೀಪಾವಳಿ ಹಬ್ಬದ ಬೆಳಕಿನಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರುಕ್ಮಿಣಿ ವಸಂತ್ ಚಂದದ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಹೆಚ್ಚಿಸಿದ್ದಾರೆ.
(1 / 7)
ರುಕ್ಮಿಣಿ ವಸಂತ್ ಮತ್ತು ಶ್ರೀಮುರಳಿ ಡ್ಯೂಯೆಟ್ ಹಾಡಿರುವ ಪರಿಚಯವಾದೆ ಹಾಡು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಂಗೀತ ರಸಿಕರ ಗಮನ ಸೆಳೆದಿದೆ. ಇದೇ ಸಮಯದಲ್ಲಿ ತನ್ನ ಚಂದದ ಫೋಟೋಗಳನ್ನು ಹಂಚಿಕೊಂಡಿರುವ ನಟಿ "ಪರಿಚಯವಾದೆ ಹಾಡು ಹೇಗಿದೆ?" ಎಂದು ಕ್ಯಾಪ್ಷನ್‌ನಲ್ಲಿ ಕೇಳಿದ್ದಾರೆ.
(2 / 7)
ಶ್ರೀಮುರಳಿ, ರುಕ್ಷಿಣಿ ವಸಂತ್ ನಟನೆಯ ಬಘೀರ ಸಿನಿಮಾ ಸೆನ್ಸಾರ್ ಮಂಡಳಿಯಿಂದಲೂ ಪಾಸ್ ಸರ್ಟಿಫಿಕೇಟ್ ಪಡೆದಿದೆ. ಇದಕ್ಕೂ ಮೊದಲು ಚಿತ್ರತಂಡವು ಪರಿಚಯವಾದೆ ಹಾಡು ಬಿಡುಗಡೆ ಮಾಡಿತ್ತು. ಅದಕ್ಕೂ ಮೊದಲು ರುಧಿರಾ ಧಾರಾ ಎಂಬ ಹಾಡನ್ನು ಬಿಡುಗಡೆ ಮಾಡಿತ್ತು.
(3 / 7)
ಬಘೀರ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಘೀರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ. ಈ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ದೊರಕಿದೆ.
(4 / 7)
ಪ್ರಶಾಂತ್ ನೀಲ್ ನಿರ್ದೇಶನದ ಬಘೀರ ಸಿನಿಮಾದ ಪರಿಚಯವಾದೆ ಹಾಡು ಹೇಗಿದೆ ಎಂದು ರುಕ್ಷಿಣಿ ವಸಂತ್ ಕೇಳಿದ ಪ್ರಶ್ನೆಗೆ ನಾನಾ ತರಹ ಉತ್ತರ ದೊರಕಿದೆ.
(5 / 7)
"ಪರಿಚಯವಾದೆ ಹಾಡು ನನ್ನ ಪ್ಲೇಲಿಸ್ಟ್‌ನಲ್ಲಿ ಆಡಳಿತ ನಡೆಸುತ್ತಿದೆ. ಅದನ್ನೇ ಹೆಚ್ಚು ಕೇಳುತ್ತಿರುವೆ" ಎಂದು ಒಬ್ಬರು ಬರೆದಿದ್ದಾರೆ. ಸಾಕಷ್ಟು ಜನರು ಹಾಡಿನ ಕುರಿತು ಚೆನ್ನಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(6 / 7)
"ರುಕ್ಮಿಣಿ ವಸಂತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೊಟೋಗಳಿಗೂ ನಾನಾ ಬಗೆಯ ಕಾಮೆಂಟ್ ಬಂದಿದೆ. ಕೆಲವರು "ಬ್ಲ್ಯಾಕ್ ಡೈಮಾಂಡ್- ಕಪ್ಪು ವಜ್ರ" ಎಂದು ಹೊಗಳಿದ್ದಾರೆ. ಕಪ್ಪು ಉಡುಗೆಯಲ್ಲಿ ಮಿಂಚಿನಂತೆ ಕಾಣಿಸುವಿರಿ ಎಂದು ಕೆಲವರು ವರ್ಣಿಸಿದ್ದಾರೆ. ಕೆಲವರು ಪ್ರೀತಿಯಿಂದ ರುಕ್ಕೂ ಎಂದು ಲವ್ ಇಮೋಜಿ ಕಳುಹಿಸಿದ್ದಾರೆ.
(7 / 7)
ಬಘೀರ ಸಿನಿಮಾದ ಕುರಿತು: ಈ ಸಿನಿಮಾದ ರನ್ ಟೈಮ್ 2 ಗಂಟೆಗಳು ಮತ್ತು 37 ನಿಮಿಷಗಳು. ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ವೇದಾಂತ್ ಹೆಸರಿನ ಈ ಪೊಲೀಸ್ ಸಮಾಜದಲ್ಲಿರುವ ರಾಕ್ಷಸರ ವಿರುದ್ಧ ಹೋರಾಡುತ್ತಾನೆ. ಶ್ರೀಮುರಳಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಆಕೆಗೆ ಈ ಸಿನಿಮಾದಲ್ಲಿ ಗಮನಾರ್ಹ ಪಾತ್ರವಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಸುಧಾರಾಣಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಮತ್ತು ಗರುಡಾ ರಾಮ್ ಮುಂತಾದವರೂ ಬಘೀರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇತರ ಗ್ಯಾಲರಿಗಳು