Director Prem Trolled: ‘ಕೊನೆಗೂ ಸಾಧಿಸಿಯೇ ಬಿಟ್ರು!; ಆರು ಹೀರೋಗಳನ್ನು ಕರೆತಂದೇ ಬಿಟ್ರು’; ಟ್ರೋಲ್ ಆದ ನಿರ್ದೇಶಕ ಪ್ರೇಮ್..
- ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕಾಂಬಿನೇಷನ್ ಸಿನಿಮಾ ಬರ್ತಿದೆ ಎಂದಾಗಲೇ ಒಂದಷ್ಟು ಕುತೂಹಲಗಳು ಗರಿಗೆದರಿದ್ದವು. ನಿರೀಕ್ಷೆಯೂ ಅಷ್ಟೇ ಜೋರಾಗಿತ್ತು. ಇದೀಗ ಸದ್ದಿಲ್ಲದೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪ್ರೇಮ್, ಕಳೆದ ಕೆಲ ದಿನಗಳಿಂದ ಅಪ್ಡೇಟ್ ಮೇಲೆ ಅಪ್ಡೇಟ್ ನೀಡುತ್ತಿದ್ದಾರೆ. ಇನ್ನೇನು ಧ್ರುವ ಸರ್ಜಾ ಜತೆಗಿನ ಪ್ಯಾನ್ ಇಂಡಿಯಾ ಚಿತ್ರದ ಶೀರ್ಷಿಕೆ ಅನಾವರಣವಾಗಲಿದೆ. ಅದಕ್ಕಾಗಿಯೇ ಬೇರೆ ಬೇರೆ ಭಾಷೆಯ ಸ್ಟಾರ್ ನಟರನ್ನು ಪ್ರೇಮ್ ಭೇಟಿಯಾಗಿ, ಶೀರ್ಷಿಕೆ ಅನಾವರಣಕ್ಕೆ ಅವರನ್ನು ಆಹ್ವಾನಿಸುತ್ತಿದ್ದಾರೆ. ಈ ನಡುವೆಯೇ ಪ್ರೇಮ್ ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಲ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ! ಆರು ಜನ ಹೀರೋಗಳನ್ನು ಹಾಕಿಕೊಂಡು ಸಿನಿಮಾ ಮಾಡ್ತಿನಿ ಎಂದು ಕೆಲ ವರ್ಷಗಳ ಹಿಂದೆ ಪ್ರೇಮ್ ಹೇಳಿಕೆ ನೀಡಿದ್ದರು. ಇದೀಗ ಈ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಆರು ಜನ ನಾಯಕ ನಟರು ಆಗಮಿಸುತ್ತಿದ್ದು, ಈ ವಿಚಾರವನ್ನೇ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಿರ್ದೇಶಕರ ಕಾಲೆಳೆಯುತ್ತಿದ್ದಾರೆ. ಅಂದಹಾಗೆ, KVN ಬ್ಯಾನರ್ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದ ಶೀರ್ಷಿಕೆ ಅನಾವರಣ ಇದೇ 20ಕ್ಕೆ ಬೆಂಗಳೂರಿನ ಓರಿಯನ್ ಮಾಲ್ನಲ್ಲಿ ಸಂಜೆ 5 ಗಂಟೆಗೆ ರಿವೀಲ್ ಆಗಲಿದೆ. ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನ ಸ್ಟಾರ್ ನಟರು ಈ ಶೀರ್ಷಿಕೆ ಲಾಂಚ್ಗೆ ಕೈ ಜೋಡಿಸಿದ್ದಾರೆ.

ಇತರ ಗ್ಯಾಲರಿಗಳು