Sandalwood Fruit: ಶ್ರೀಗಂಧದ ಮರ ಗೊತ್ತು, ತಿನ್ನಬಹುದಾದ ಶ್ರೀಗಂಧದ ಹಣ್ಣು ನೋಡಿದ್ದೀರಾ; ದರ ಕೆಜಿಗೆ 4-6 ಸಾವಿರ ರೂ; ಅಪರೂಪದ ಚಿತ್ರ ಮಾಹಿತಿ
- ಶ್ರೀಗಂಧದ ಹಣ್ಣಿನ ಕುರಿತು ಪುರುಷೋತ್ತಮ್ ರಾವ್ ಅವರು ಫೇಸ್‌ಬುಕ್‌ನಲ್ಲಿ ಶ್ರೀಗಂಧದ ಹಣ್ಣಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ, ಈ ಹಣ್ಣಿನ ಕುರಿತು ಒಂದಿಷ್ಟು ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
- ಶ್ರೀಗಂಧದ ಹಣ್ಣಿನ ಕುರಿತು ಪುರುಷೋತ್ತಮ್ ರಾವ್ ಅವರು ಫೇಸ್‌ಬುಕ್‌ನಲ್ಲಿ ಶ್ರೀಗಂಧದ ಹಣ್ಣಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ, ಈ ಹಣ್ಣಿನ ಕುರಿತು ಒಂದಿಷ್ಟು ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
(1 / 5)
ಪುರುಷೋತ್ತಮ ರಾವ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಶ್ರೀಗಂಧದ ಹಣ್ಣಿನ ಚಿತ್ರ ಮಾಹಿತಿ ಇಲ್ಲಿದೆ. ತಮ್ಮ ಪೋಸ್ಟ್‌ನಲ್ಲಿ ಅವರು ಈ ಹಣ್ಣಿನ ಉಪಯೋಗ, ರುಚಿ, ದರ ಇತ್ಯಾದಿ ವಿವರವನ್ನೂ ನೀಡಿದ್ದಾರೆ.(Purushothama Rao)
(2 / 5)
ಈ ಶ್ರೀಗಂಧದ ನೇರಳೆ ಹಣ್ಣನ್ನು ತಿನ್ನಬಹುದು ಎಂದು ಅವರು ಹೇಳಿದ್ದಾರೆ. ನೋಡಲು ನೇರಳೆಯಂತೆ ಕಾಣಿಸುವ ಈ ಹಣ್ಣು ಪಕ್ಷಿಗಳಿಗೆ ತುಂಬಾ ಇಷ್ಟ ಎಂದು ಅವರು ಹೇಳಿದ್ದಾರೆ.(Purushothama Rao)
(3 / 5)
ಈ ಚಿತ್ರದಲ್ಲಿರುವ ಹಣ್ಣು ನೀವು ಊಹಿಸಿದಂತೆ, ನೇರಳೆ ಅಲ್ಲ, ಪಕ್ಕಾ ಶ್ರೀಗಂಧದ ಹಣ್ಣು. ಇದನ್ನು ಪಕ್ಷಿಗಳು ಹೇರಳವಾಗಿ ತಿನ್ನುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.(Purushothama Rao)
(4 / 5)
ಆಶ್ಚರ್ಯವೆಂದರೆ ಈ ಹಣ್ಣಿನ ಬೀಜಗಳಿಂದ ಕೃತಕವಾಗಿ ನರ್ಸರಿಗಳಲ್ಲಿ ಸಸಿ ಮಾಡುವಾಗ ಶೇ.40 ರಷ್ಟು ಮೊಳೆತು ಇಳುವರಿ ಕೊಡಬಹುದಷ್ಟೆ. ಆದರೆ ಪಕ್ಷಿ ಹಣ್ಣನ್ನು ತಿಂದು ಉದುರಿಸಿದ ಬೀಜದಿಂದ ನೂರಕ್ಕೆ ನೂರರಷ್ಟು ಮೊಳೆಯುವುದು ಖಾತ್ರಿ. (Purushothama Rao)
(5 / 5)
ಮತ್ತೊಂದು ಆಶ್ಚರ್ಯವೆಂದರೆ ಈ ಹಣ್ಣುಗಳನ್ನು ತಿನ್ನಬಹುದು ಎಂಬುದನ್ನು ನನಗೆ ಶ್ರೀನಿವಾಸಪುರ ಸುಣಕಲ್ ಕಾಡಿನ ಜೀವ ಪೆದ್ದನ್ನ ತಿಳಿಸಿ ಕೊಟ್ಟ. ನಾನು ನಮ್ಮ ಮನೆಯ ಗಿಡಗಳ ಹಣ್ಣನ್ನು ಸಾಕಷ್ಟು ತಿಂದಿದ್ದೇನೆ. ನೇರಳೆಯಷ್ಟು ರುಚಿ ಇಲ್ಲದಿದ್ದರೂ ಕಹಿ ಇಲ್ಲ, ಒಗರೂ ಇಲ್ಲ. ರುಚಿ ಇದೆ. ವಾಸ್ತವವಾಗಿ ಹಣ್ಣಿನಲ್ಲಿ ಬಿಟ್ಟೂಲಿಕ್ ಆಸಿಡ್, ಗ್ಲುಕೋಸ್ , ಪ್ರಕ್ರೋಸ್ ಮತ್ತು ಸುಕ್ರೋಸ್ ಇದೆ ಎ೦ಬ ವರದಿ ಇದೆ. ಇದರ ಬೀಜಗಳು ಒಂದು ಕೆಜಿಗೆ 4000 ದಿಂದ 6000 ದಷ್ಟಿರಬಹುದು. ನೀವೂ ಹಣ್ಣು ತಿಂದು ನೋಡಿ. ಏನೂ ಆಗುವುದಿಲ್ಲ ಎಂದು ಅವರು ಫೇಸ್‌ಬುಕ್‌ನಲ್ಲಿ ಫೋಟೋ ಮಾಹಿತಿ ಹಂಚಿಕೊಂಡಿದ್ದಾರೆ.(Purushothama Rao)
ಇತರ ಗ್ಯಾಲರಿಗಳು