ಫನ್ ಕ್ವಿಜ್: ಈ ನೆರಳು ನೋಡಿ ಕನ್ನಡದ ಖ್ಯಾತ ನಟಿಯನ್ನು ಗುರುತಿಸಬಲ್ಲೀರಾ? ಸುಳಿವು: ಅಪ್ಪು ನಟನೆಯ ಅರಸು ಸಿನಿಮಾ
ಬಾಲ್ಯದ ಫೋಟೋ ನೋಡಿ ನಟಿ ಅಥವಾ ನಟನನ್ನು ಗುರುತಿಸಬಹುದು. ಆದರೆ, ನೆರಳು ನೋಡಿ ನಟಿ ಅಥವಾ ನಟನನ್ನು ಗುರುತಿಸಬಹುದಾ? ಹಾಗಾದರೆ, ಇಲ್ಲಿ ನೀಡಲಾದ ಈ ನೆರಳಿನ ಫೋಟೋ ನೋಡಿ. ಖಂಡಿತಾ ಅಭಿಮಾನಿಗಳು ಈ ಫೋಟೋವನ್ನು ಗುರುತಿಸಬಹುದೆನ್ನುವುದು ನಮ್ಮ ನಂಬಿಕೆ.
(1 / 11)
ಈ ನೆರಳು ನೋಡಿದರೆ ಯಾವ ನಟಿ ನೆನಪಿಗೆ ಬರುತ್ತಾರೆ? ನೀಳವಾದ ಕೇಶರಾಶಿ, ನಿಂತಿರುವ ಭಂಗಿ... ನೆನಪಿಗೆ ಬಂತಾ? ಸುಳಿವು ಬೇಕೆ? ಇವರು ಅರಸು ಸಿನಿಮಾದ ಶ್ರುತಿಯಾಗಿದ್ದರು. ಈಗ ಕನ್ನಡ ಚಿತ್ರಪ್ರೇಮಿಗಳಿಗೆ ಈ ನಟಿ ಯಾರೆಂದು ಗೊತ್ತಾಗಿರಬಹುದು.
(2 / 11)
ಇವರು ಕನ್ನಡದ ಮೋಹಕತಾರೆ ರಮ್ಯಾ. ಹೌದು, ಇವರು ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಈ ನೆರಳಿನ ಫೋಟೋವೂ ಸೇರಿದೆ. ಅಂದಹಾಗೆ ಇವರು ಲೇಹ್ ಪ್ರವಾಸದಲ್ಲಿದ್ದಾರೆ. ಅಲ್ಲಿನ ಸುಂದರವಾದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
(3 / 11)
ಅಲ್ಲಿನ ಬೌದ್ಧ ಮಂದಿರಗಳು, ಬೌದ್ಧ ಸನ್ಯಾಸಿಗಳು, ಜನ ಸಾಮಾನ್ಯರು ಮಾತ್ರವಲ್ಲದೆ ಅಲ್ಲಿನ ಪ್ರಕೃತಿ, ಬೀದಿ ನಾಯಿ, ನೀಲಾಕಾಶದ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ನಟಿ ಈ ಪ್ರವಾಸದ ಸಮಯದಲ್ಲಿ ಫೋಟೋಗ್ರಫಿಗೆ ಹೆಚ್ಚು ಆಸಕ್ತಿ ತೋರಿದಂತೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(5 / 11)
ನಟಿ ದಿವ್ಯಾ ಸ್ಪಂದನಾ (ರಮ್ಯಾ )ಅವರು ಈಗ ಸಿನಿಮಾ ನಟನೆಯಿಂದ ದೂರ ಇದ್ದಾರೆ. ಕಾಂಗ್ರೆಸ್ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದ ಇವರು ನಟಿಸಿದ ಅನೇಕ ಸಿನಿಮಾಗಳು ಸಿನಿಮಾ ಅಭಿಮಾನಿಗಳ ನೆನಪಿನಲ್ಲಿ ಇರಬಹುದು.
(6 / 11)
ಅಭಿ, ಎಕ್ಸ್‌ಕ್ಯೂಸ್‌ಮೀ, ಅಭಿಮನ್ಯು , ಕುತ್ತು (ತಮಿಳು), ರಂಗ ಎಸ್‌ಎಸ್‌ಎಲ್‌ಸಿ, ಕಾಂತಿ, ಗಿರಿ, ಆದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
(8 / 11)
ಜೊತೆಜೊತೆಯಲ್ಲಿ, ತನನಂ ತನನಂ, ಅರಸು, ಪ್ರಾರಂಭ, ಮೀರಾ ಮಾಧವ ರಾಘವ, ಪೊಲ್ಲಧನ್ (ತಮಿಳು), ತೊಂಡಿಲ್ (ತಮಿಳು), ಮುಸ್ಸಂಜೆ ಮಾತುಗಳು ಇವರ ಇನ್ನಿತರ ಸಿನಿಮಾಗಳು.
(9 / 11)
ಮೆರವಣಿಗೆ, ಬೊಂಬಾಟ್, ಅಂತು ಇಂತು ಪ್ರೀತಿ ಬಂತು, ವಾರನಮ್ ಅಹಿರಾಮ್ (ತಮಿಳು), ಜಸ್ಟ್ ಮಾತ್ ಮಾತಲ್ಲಿ, ಜೊತೆಗಾರ, ಕಿಚ್ಚ ಹುಚ್ಚ, ಸಿಂಗಮ್ ಪುಳಿ (ತಮಿಳು) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
(10 / 11)
ಸಂಜು ವೆಡ್ಸ್ ಗೀತಾ, ದಂಡಂ ದಶಗುಣಂ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಸಿದ್ಲಿಂಗು, ಲಕ್ಕಿ ಇವರ ಇನ್ನಿತರ ಸಿನಿಮಾಗಳು.
ಇತರ ಗ್ಯಾಲರಿಗಳು