ನನ್ನ ಹುಟ್ಟಿಗೆ ನೀನೇ ಉಡುಗೊರೆ, ಹುಟ್ಟುಹಬ್ಬದಂದು ಸ್ಪಂದನಾ ನೆನಪಿನಲ್ಲಿ ವಿಜಯ ರಾಘವೇಂದ್ರ ಭಾವುಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನನ್ನ ಹುಟ್ಟಿಗೆ ನೀನೇ ಉಡುಗೊರೆ, ಹುಟ್ಟುಹಬ್ಬದಂದು ಸ್ಪಂದನಾ ನೆನಪಿನಲ್ಲಿ ವಿಜಯ ರಾಘವೇಂದ್ರ ಭಾವುಕ

ನನ್ನ ಹುಟ್ಟಿಗೆ ನೀನೇ ಉಡುಗೊರೆ, ಹುಟ್ಟುಹಬ್ಬದಂದು ಸ್ಪಂದನಾ ನೆನಪಿನಲ್ಲಿ ವಿಜಯ ರಾಘವೇಂದ್ರ ಭಾವುಕ

ಇಂದು ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬ. ತನ್ನ ಹುಟ್ಟುಹಬ್ಬದಂದು ಪತ್ನಿ ಸ್ಪಂದನಾರನ್ನು ನೆನಪಿಸಿ "ಪ್ರತೀ ಜನುಮದಿನ… ಪ್ರತೀ ದಿನ… ನಿನ್ನ ನೆನೆಸಿದೆ ಮನ, ನೀನು ನನ್ನ ಹುಟ್ಟನ್ನು ವಿಶೇಷವಾಗಿಸಿದವಳು, ಐ ಲವ್‌ ಯು ಚಿನ್ನಾ" ಎಂದು ವಿಜಯ ರಾಘವೇಂದ್ರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಂದು ವಿಜಯ ರಾಘವೇಂದ್ರ ಹುಟ್ಟುಹಬ್ಬ. ಚಿನ್ನಾರಿ ಮುತ್ತಾನೆಂದು ಖ್ಯಾತಿ ಪಡೆದ ಇವರು ಮೇ 26, 1979ರಂದು ಜನಿಸಿದರು. ಅನಿರೀಕ್ಷಿತವಾಗಿ ಅಗಲಿದ ಪತ್ನಿಯ ನೆನಪಿನಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಪೋಸ್ಟ್‌ಗೆ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.
icon

(1 / 10)

"ಹ್ಯಾಪಿ ಬರ್ತ್‌ಡೇ ರಾಘು ಸರ್‌ ನೆನಪಿನಲಿ ಸದಾ ಇರುವಿರಿ ಮ್ಯಾಮ್‌" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.
icon

(2 / 10)

ಚಲಿಸುವ ಮೋಡಗಳು, ಪರಶುರಾಮ್‌, ಅರಲಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರು ಶ್ರೀ ಮೂಕಾಂಬಿಕೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಬಳಿಕ ಇವರು ಚಿನ್ನಾರಿ ಮುತ್ತಾ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ನಟನೆಯ ಮೂಲಕ ಚಿನ್ನಾರಿ ಮುತ್ತಾನೆಂದು ಇವರು ಖ್ಯಾತಿ ಪಡೆದರು.
icon

(3 / 10)

ಕೊಟ್ರೆಶಿ ಕನಸು, ಸಂಗೀತ ಸಾಗರ ಜ್ಯಾನಯೋಗಿ ಪಂಚಾಕ್ಷರ ಗವಾಯಿ, ಸ್ವಾಮಿ ವಿವೇಕಾನಂದ, ನಿನಗಾಗಿ, ಪ್ರೇಮಖೈದಿ, ರೋಮಿಯೊ ಜೂಲಿಯೆಟ್‌,  ಪ್ರೀತಿಸಲೇಬೇಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(4 / 10)

ವಿಕ್ರಮ್‌, ಖುಷಿ, ವಿಜಯ ಸಿಂಹ, ರಿಷಿ, ಶ್ರೀ, ಸೇವಂತಿ ಸೇವಂತಿ, ಕಲ್ಲರಲ್ಲಿ ಹೂವಾಗಿ..... ಕೇಸ್‌ ಆಫ್‌ ಕೊಂಡಾಣ, ಜೋಗ್‌ 101, ಗ್ರೇ ಗೇಮ್ಸ್‌ ಸೇರಿಂದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(5 / 10)

2007ರಲ್ಲಿ ವಿಜಯ ರಾಘವೇಂದ್ರ ಅವರು ಸ್ಪಂದನಾ ಅವರನ್ನು ವಿವಾಹವಾದರು. ಇವರದ್ದು ಲವ್‌ ಸ್ಟೋರಿ. ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯಲ್ಲಿ ಸ್ಪಂದನಾ ಅವರನ್ನು ಮೊದಲು ನೋಡಿದ್ದರು.
icon

(6 / 10)

ಮೊದಲ ಭೇಟಿಯ ಸಮಯದಲ್ಲಿ ಮ್ಯೂಸಿಕ್‌ ವಿಷಯದಲ್ಲಿ ಇವರ ನಡುವೆ ಚಿಕ್ಕ ಜಗಳವಾಗಿತ್ತು. ನಂತರ ಇದೇ ಕಾಫಿ ಡೇಯಲ್ಲಿ ಇವರ ಭೇಟಿಯಾಗಿತ್ತು. ಆ ಸಮಯದಲ್ಲಿ ಸ್ಪಂದನಾಗೆ ಪ್ರಪೋಸ್‌ ಮಾಡಿದ್ದರು. ಅವರು ಕೂಡ ಚಿನ್ನಾರಿ ಮುತ್ತನ ಪ್ರೀತಿ ಒಪ್ಪಿಕೊಂಡಿದ್ದರು.
icon

(7 / 10)

2023ರಲ್ಲಿ ಬ್ಯಾಂಕಾಂಕ್‌ನಲ್ಲಿ ಹೃದಯಘಾತದಿಂದ ಸ್ಪಂದನಾ ಅನಿರೀಕ್ಷಿತವಾಗಿ ನಿಧನರಾದರು. ಸದಾ ಸ್ಪಂದನಾ ನೆನಪಿನಲ್ಲಿರುವ ವಿಜಯ ರಾಘವೇಂದ್ರ ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪತ್ನಿಯ ನೆನಪಿನಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ.
icon

(8 / 10)

ವಿಜಯ ರಾಘವೇಂದ್ರ ಒಳ್ಳೆಯ ಗಾಯಕ ಕೂಡ. ಸೇವಂತಿ ಸೇವಂತಿ ಸಿನಿಮಾದ ಜಾಜಿ ಮಲ್ಲಿಗೆ ನೋಡೆ ಸೇರಿದಂತೆ ಹಲವು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.
icon

(9 / 10)

ರಿಪ್ಪನ್‌ ಸ್ವಾಮಿ ಇವರ ಮುಂಬರುವ ಸಿನಿಮಾ. ಕನ್ನಡದ ಚಿನ್ನಾರಿ ಮುತ್ತನಿಗೆ ಹ್ಯಾಪಿ ಬರ್ತ್‌ಡೇ.
icon

(10 / 10)

ರಿಪ್ಪನ್‌ ಸ್ವಾಮಿ ಇವರ ಮುಂಬರುವ ಸಿನಿಮಾ. ಕನ್ನಡದ ಚಿನ್ನಾರಿ ಮುತ್ತನಿಗೆ ಹ್ಯಾಪಿ ಬರ್ತ್‌ಡೇ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು