Umashree: ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ನಟಿ; ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ
- ಕನ್ನಡದ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಉಮಾಶ್ರೀ ಅವರು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ನಾಳೆ (ಜನವರಿ 18)ರಂದು ಹೊನ್ನಾವರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
- ಕನ್ನಡದ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಉಮಾಶ್ರೀ ಅವರು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ನಾಳೆ (ಜನವರಿ 18)ರಂದು ಹೊನ್ನಾವರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
(2 / 8)
ಯಕ್ಷಗಾನದಲ್ಲಿ ಮಂಥರೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು ತಯಾರಿ ನಡೆಸಿಕೊಂಡು ಸಿದ್ಧರಾಗಿದ್ದಾರಂತೆ.
(3 / 8)
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಉಮಾಶ್ರೀ ಯಕ್ಷಗಾನರಂಗ ಪ್ರವೇಶಕ್ಕೆ ಪಾದಾರ್ಪನೆ ಮಾಡುತ್ತಿರುವುದು ಎಲ್ಲರಿಗೂ ಕುತೂಹಲ ತಂದಿದೆ.
(ಜೀ ಕನ್ನಡ)(4 / 8)
ಜನವರಿ 17ರಂದು ಸೆಂಟ್ ಅಂಥೋನಿ ಮೈದಾನ ಹೊನ್ನಾವರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಜನ ಸೇರುವ ನಿರೀಕ್ಷೆಯೂ ಇದೆ.
(ಜೀ ಕನ್ನಡ)(5 / 8)
ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ಮಂಥರೆಯಾಗಿ ಪಾತ್ರ ಮಾಡಲಿದ್ದಾರೆ.
(ಜೀ ಕನ್ನಡ)(6 / 8)
ಅಪ್ಪಿ ಹೆಗಡೆ ಸಾಣ್ಮನೆ ಈ ಕಾರ್ಯಕ್ರಮ ಆಯೋಜಿಸಿದ್ದು ಪ್ರವೇಶ ದರ ನಿಗದಿ ಮಾಡಲಾಗಿದೆ. 300ರೂಪಾಯಿ ಟಿಕೆಟ್‌ನಿಂದ ಆರಂಭವಾಗಿ 1000ದ ವರೆಗೂ ಇದೆ.
(7 / 8)
ಜನವರಿ 17ರಂದು ರಾತ್ರಿ 9:30ರಿಂದ ಪ್ರಸಂಗ ಆರಂಭವಾಗಲಿದೆ. ಉಮಾಶ್ರೀ ಯಕ್ಷಗಾನೀಯ ವೇಷಭೂಷಣದಲ್ಲೇ ತಾಲೀಮು ಕೂಡ ನಡೆಸಿದ್ದಾರಂತೆ.
ಇತರ ಗ್ಯಾಲರಿಗಳು