Puneeth Rajkumar: ಎತ್ತರದ ಕಟ್ಟಡದಿಂದ ಜಂಪ್‌ ಮಾಡಲು ಅಪ್ಪು ಹಿಂಜರಿಯುತ್ತಿರಲಿಲ್ಲ; ಅಭಿಮಾನಿಗಳಿಗಾಗಿ ಪುನೀತ್‌ ರಾಜ್‌ಕುಮಾರ್‌ ಸಾಹಸ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Puneeth Rajkumar: ಎತ್ತರದ ಕಟ್ಟಡದಿಂದ ಜಂಪ್‌ ಮಾಡಲು ಅಪ್ಪು ಹಿಂಜರಿಯುತ್ತಿರಲಿಲ್ಲ; ಅಭಿಮಾನಿಗಳಿಗಾಗಿ ಪುನೀತ್‌ ರಾಜ್‌ಕುಮಾರ್‌ ಸಾಹಸ

Puneeth Rajkumar: ಎತ್ತರದ ಕಟ್ಟಡದಿಂದ ಜಂಪ್‌ ಮಾಡಲು ಅಪ್ಪು ಹಿಂಜರಿಯುತ್ತಿರಲಿಲ್ಲ; ಅಭಿಮಾನಿಗಳಿಗಾಗಿ ಪುನೀತ್‌ ರಾಜ್‌ಕುಮಾರ್‌ ಸಾಹಸ

  • Puneeth Rajkumar 50th Birthday: ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಸ್ಮರಣೆಯ ಸಮಯದಲ್ಲಿ ಎಲ್ಲೆಡೆ ಅಪ್ಪು ನೆನಪಿನಲ್ಲಿ ಅಭಿಮಾನಿಗಳಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ ಸಮಯದಲ್ಲಿ ತೋರುತ್ತಿದ್ದ ಧೈರ್ಯ, ಸಾಹಸದ ವಿವರ ಪಡೆಯೋಣ ಬನ್ನಿ.

Puneeth Rajkumar 50th Birthday: ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಸ್ಮರಣೆಯ ಸಮಯದಲ್ಲಿ ಎಲ್ಲೆಡೆ ಅಪ್ಪು ನೆನಪಿನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಜೀ ಕನ್ನಡವಾಹಿನಿಯಲ್ಲಿ ನಡೆದ 'ಅಪ್ಪು 50' ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ ಸಮಯದಲ್ಲಿ ತೋರುತ್ತಿದ್ದ ಧೈರ್ಯ, ಸಾಹಸದ ವಿವರ ಪಡೆದು ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. 
icon

(1 / 10)

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ 'ಅಪ್ಪು 50' (Puneeth Rajkumar birthday) ಕಾರ್ಯಕ್ರಮ ನಡೆಸಿಕೊಟ್ಟಿತ್ತು. ಸರಿಗಮಪ ಶೋಗೆ  ಲೂಸ್ ಮಾದ ಯೋಗಿ‌ ಮತ್ತು ಶ್ರೀನಗರ ಕಿಟ್ಟಿ ಅತಿಥಿಗಳಾಗಿ ಆಗಮಿಸಿದ್ದರು.
icon

(2 / 10)

 ಮೊದಲಿಗೆ ಇವರಿಬ್ಬರು ಅಪ್ಪು ಪ್ರತಿಮೆಗೆ ನಮಸ್ಕರಿಸಿದ್ದಾರೆ. "ಅಪ್ಪು ಹೆಸರಿಗೆ ನೀವಿಬ್ಬರು ಇಲ್ಲಿಗೆ ಬಂದಿದ್ದೀರಿ. ಥ್ಯಾಂಕ್‌ ಯು ಸೋ ಮಚ್‌. ಅಪ್ಪು ಸರ್‌ ಅವರ ಐವತ್ತನೇ ಹುಟ್ಟುಹಬ್ಬದ ಸವಿನೆನಪಿನ ಕಾರ್ಯಕ್ರಮಕ್ಕೆ ನೀವು ಬಂದಿದ್ದೀರಿ. ತುಂಬಾ ಖುಷಿಯಾಗಿದೆ. ಅಪ್ಪು ಬಗ್ಗೆ ನಿಮ್ಮ ಮಾತುಗಳನ್ನು ತಿಳಿಸಿ" ಎಂದು ಆಂಕರ್‌ ಅನುಶ್ರೀ ಕೇಳಿದಾಗ ಮೊದಲಿಗೆ ಲೂಸ್‌ ಮಾದ ಯೋಗಿ ಸ್ವಾರಸ್ಯಕರವಾದ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ. 
icon

(3 / 10)

"ಅಪ್ಪು ಜತೆಗೆ ನಾವು ಸುಮಾರು ಎರಡು ಎರಡೂವರೆ ವರ್ಷ ಪ್ರವಾಸ ಮಾಡಿದ್ವಿ. ಯಾರೇ ಕೂಗಾಡಲಿ ಸಿನಿಮಾದ ಶೂಟಿಂಗ್‌ ಸಮಯವದು" ಎಂದು ಲೂಸ್‌ ಮಾದ ಯೋಗಿ ಸ್ವಾರಸ್ಯಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
icon

(4 / 10)

"ಯಾರೇ ಕೂಗಾಡಲಿ ಸಿನಿಮಾದ ಶೂಟಿಂಗ್‌ ಸಮಯದ ಒಂದು ಮರೆಯಲಾಗದ ಘಟನೆ ಬಗ್ಗೆ ಹೇಳಬೇಕು ನಾನು. ಒಂದು ಫೈಟಿಂಗ್‌ ಸೀನ್‌. ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುತ್ತ ಹೋಗಬೇಕು. ರವಿ ಮಾಸ್ಟರ್‌ ನನ್ನಲ್ಲಿ ಈ ಸೀನ್‌ ಮಾಡಲು ಹೇಳಿದ್ರು" ಎಂದು ಯೋಗಿ ಘಟನೆಯ ವಿವರ ನೀಡಿದ್ದಾರೆ.
icon

(5 / 10)

"ನನಗೆ ಭಯವಾಯಿತು. ಈ ರೀತಿ ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುತ್ತ ಹೋಗುವಾಗ ಏನಾದರೂ ತೊಂದರೆಯಾಗಬಹುದು ಎಂಬ ಭಯ ಇತ್ತು. ಯೋಗಿ ನೀವು ಆ ಬಿಲ್ಡಿಂಗ್‌ನಿಂದ ಎಗರಬೇಕು ಅಂದ್ರು. ನನಗೆ ಭಯವಾಯಿತು" ಎಂದರು. 
icon

(6 / 10)

"ನನಗೆ ಭಯವಾಯಿತು, ಮೋಸ್ಟ್ಲಿ ಅಪ್ಪು ಅಣ್ಣ ಇದಕ್ಕೆ ಒಪ್ಪಲಾರರು ಎಂದುಕೊಂಡೆ. ಅದೇ ಧೈರ್ಯದಲ್ಲಿ ಅಪ್ಪು ಅಣ್ಣ ಒಪ್ಪಿದರೆ ನಾನು ಮಾಡುವೆ ಎಂದೆ. ಅಪ್ಪು ಒಪ್ಪಲಾರರು ಎಂದುಕೊಂಡೆ" ಎಂದು ಆ ನೆನಪನ್ನು ಹಂಚಿಕೊಂಡರು. 
icon

(7 / 10)

"ಅಪ್ಪು ಸರ್‌ ಮಾಡಿದ್ರೆ ನಾನು ಮಾಡ್ತಿನಿ ಅಂದೆ, ಅದಕ್ಕೆ ರವಿ ಮಾಸ್ಟರ್‌ ಅಪ್ಪು ಆಗಲೇ ಓಕೆ ಹೇಳಿದ್ದಾರೆ. ಇನ್ನು ನೀವು ಮಾಡಲೇಬೇಕು ಎಂದ್ರು. ಅಪ್ಪು ಅಣ್ಣನಿಗೆ ಯಾಕೆ ಅಣ್ಣ ಇದನ್ನು ಮಾಡ್ತಿರಿ ನೀವು ರಿಸ್ಕ್‌ ಅಲ್ವಾ ಇದು ಎಂದು ಕೇಳಿದೆ"
icon

(8 / 10)

"ಹೇ ಮಚ್ಚಾ ಬಾರೋ ನಮ್ಮನ್ನು ನೋಡುವ ಆಡಿಯನ್ಸ್‌ಗಾಗಿ ನಾವಿದನ್ನು ಮಾಡಲೇಬೇಕು ಎಂದ್ರು. ನನಗೆ ಈ ಘಟನೆ ತುಂಬಾ ಜ್ಞಾಪಕ ಬರುತ್ತದೆ" ಎಂದು ಯೋಗಿ ಹೇಳಿದರು.  ಅಭಿಮಾನಿಗಳಿಗಾಗಿ, ಸಿನಿಮಾ ವೀಕ್ಷಕರಿಗಾಗಿ ಅಪ್ಪು ಶೂಟಿಂಗ್‌ನಲ್ಲಿ ಎಂತಹ ರಿಸ್ಕ್‌ ತೆಗೆದುಕೊಳ್ಳಲು ರೆಡಿ ಇರುತ್ತಾರೆ ಎನ್ನುವುದಕ್ಕೆ ಇದು ನಿದರ್ಶನವಷ್ಟೇ.
icon

(9 / 10)

ಪುನೀತ್‌ ರಾಜ್‌ಕುಮಾರ್‌ ಮತ್ತು ಯೋಗಿ ಜತೆಯಾಗಿ ನಟಿಸಿದ ಯಾರೇ ಕೂಗಾಡಲಿ ಸಿನಿಮಾ ಯೂಟ್ಯೂಬ್‌ನಲ್ಲಿದೆ. ಆಸಕ್ತರು ಫುಲ್‌ ಮೂವಿ ನೋಡಬಹುದು. ಈ ಕಟ್ಟಡ  ಜಂಪಿಂಗ್‌ ಸೀನ್‌ ನೋಡಿದಾಗ ನಿಮಗೆ ಯೋಗಿ ಹೇಳಿದ ಮಾತು ನೆನಪಾಗಬಹುದು. 
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು