ಅಮ್ಮಂದಿರ ದಿನವೇ ಸಿಹಿ ಸುದ್ದಿ ಹಂಚಿಕೊಂಡ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್
ಸ್ಯಾಂಡಲ್‌ವುಡ್‌ನ ಯುವ ಗಾಯಕ ಮತ್ತು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಇದೀಗ ಅಮ್ಮಂದಿರ ದಿನದಂದೇ ಸಿಹಿ ಸುದ್ದಿಯೊಂದನ್ನು ಶೇರ್ ಮಾಡಿದ್ದಾರೆ. ಅಂದರೆ ವಾಸುಕಿ ಮತ್ತು ಬೃಂದಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಕ್ಷಣದ ಫೋಟೋ ಹಂಚಿಕೊಂಡಿದ್ದಾರೆ.
(1 / 6)
ಚಂದನವನದ ಚೆಂದದ ಗಾಯಕ ವಾಸುಕಿ ವೈಭವ್ ಇದೀಗ ಅಪ್ಪ ಆಗ್ತಿದ್ದಾರೆ. ಪತ್ನಿ ಬೃಂದಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
(Instagram)(2 / 6)
ಅಮ್ಮಂದಿರ ದಿನದಂದೇ ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಾಸುಕಿ, ಈ ವರ್ಷದ ಅಮ್ಮಂದಿರ ದಿನ ನನ್ನ ಪಾಲಿಗೆ ಇನ್ನೂ ಸ್ಪೇಷಲ್ ಎಂದಿದ್ದಾರೆ.
(3 / 6)
ಪತ್ನಿ ಬೃಂದಾ ಜತೆ ನಿಂತು ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ವಾಸುಕಿ ವೈಭವ್, ಎಲ್ಲ ಮಹಿಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಇಲ್ಲ. ಈ ತಾಯಂದಿರ ದಿನ ನನ್ನ ಪಾಲಿಗೂ ವಿಶೇಷ. ನಿಮ್ಮೆಲ್ಲರಿಗೂ ಹೊಸದಾಗಿ ತಾಯಿ ಆಗಲಿರುವವರನ್ನು ಪರಿಚಯಿಸುತ್ತಿದ್ದೇನೆ. ಜತೆಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇನೆ ಎಂದಿದ್ದಾರೆ.
(4 / 6)
ಅಂದಹಾಗೆ ವಾಸುಕಿ ವೈಭವ್ ಮತ್ತು ಬೃಂದಾ ದಂಪತಿಯ ಮದುವೆ 2023ರ ನವೆಂಬರ್ 16ರಂದು ನಡೆದಿತ್ತು. ಎರಡೂ ಕುಟುಂಬದ ಆಪ್ತರು, ಸಿನಿಮಾ ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಿದ್ದರು.
(5 / 6)
ವಾಸುಕಿ ವೈಭವ್ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ತೊಡಗಿಸಿಕೊಂಡಿದ್ದರೆ, ಇತ್ತ ಬೃಂದಾ ರಂಗಭೂಮಿಯಲ್ಲಿ ಸಕ್ರಿಯರು. ಸಾಕಷ್ಟು ವೇದಿಕೆ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು