ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್; ಮರು ಬಿಡುಗಡೆ ಆಗ್ತಿದೆ ಏಳು ವರ್ಷಗಳ ಹಿಂದಿನ ಸೂಪರ್ ಹಿಟ್ ಸಿನಿಮಾ
- ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲಿಯೂ ಮರು ಬಿಡುಗಡೆಯ ಹವಾ ಜೋರಾಗಿದೆ. ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ, ಮ್ಯಾಕ್ಸ್ ಸಿನಿಮಾ ನಡುವೆಯೇ ಹೊಸ ಸುದ್ದಿಯೊಂದು ತೇಲಿಬಂದಿದೆ. ಇನ್ನೇನು ಮುಂದಿನ ವಾರ (ಆಗಸ್ಟ್ 2) ಸುದೀಪ್ ನಟಿಸಿದ ಸೂಪರ್ ಹಿಟ್ ಚಿತ್ರ ಮರು ಬಿಡುಗಡೆಯಾಗಲಿದೆ. ಹಾಗಾದರೆ ಯಾವುದಾ ಸಿನಿಮಾ?
- ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲಿಯೂ ಮರು ಬಿಡುಗಡೆಯ ಹವಾ ಜೋರಾಗಿದೆ. ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ, ಮ್ಯಾಕ್ಸ್ ಸಿನಿಮಾ ನಡುವೆಯೇ ಹೊಸ ಸುದ್ದಿಯೊಂದು ತೇಲಿಬಂದಿದೆ. ಇನ್ನೇನು ಮುಂದಿನ ವಾರ (ಆಗಸ್ಟ್ 2) ಸುದೀಪ್ ನಟಿಸಿದ ಸೂಪರ್ ಹಿಟ್ ಚಿತ್ರ ಮರು ಬಿಡುಗಡೆಯಾಗಲಿದೆ. ಹಾಗಾದರೆ ಯಾವುದಾ ಸಿನಿಮಾ?
(1 / 5)
ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ ಬಿಡುಗಡೆ ಯಾವಾಗ ಎಂಬ ಸುದ್ದಿ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ, ಇದೇ ವರ್ಷ ಮ್ಯಾಕ್ಸ್ ಬರುವುದಂತು ಪಕ್ಕಾ. ಈ ನಡುವೆ, ಕಿಚ್ಚನ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಹೊರಬಿದ್ದಿದೆ.
(Image source\ Social media)(2 / 5)
ಈಗಾಗಲೇ ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲಿಯೂ ಸಿನಿಮಾಗಳ ಮರು ಬಿಡುಗಡೆಯ ಹವಾ ಜೋರಾಗಿದೆ. ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ, ಹೊಸ ಸುದ್ದಿಯೊಂದು ತೇಲಿಬಂದಿದೆ. ಇನ್ನೇನು ಮುಂದಿನ ವಾರ ಸುದೀಪ್ ನಟಿಸಿದ ಸೂಪರ್ ಹಿಟ್ ಚಿತ್ರ ಮರು ಬಿಡುಗಡೆಯಾಗಲಿದೆ.
(3 / 5)
ಆಗಸ್ಟ್ 2ರಂದು ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ 'ಹೆಬ್ಬುಲಿ' ಸಿನಿಮಾ ಮರುಬಿಡುಗಡೆ ಆಗಲಿದೆ. ಈ ಬಗ್ಗೆ ಬಿಡುಗಡೆ ದಿನಾಂಕದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ಫ್ಯಾನ್ಸ್ ವಲಯದಲ್ಲಿ ಸಂಭ್ರಮ ಜೋರಾಗಿದೆ.
(4 / 5)
ಇತ್ತೀಚಿನ ಕೆಲ ತಿಂಗಳಲ್ಲಿ ಕನ್ನಡದ ಬೇರೆ ಬೇರೆ ನಟರ ಸಿನಿಮಾಗಳು ಮರು ಬಿಡುಗಡೆಯಾಗಿವೆ. ಕಳೆದ ವಾರವಷ್ಟೇ ದರ್ಶನ್ ನಟನೆಯ ಶಾಸ್ತ್ರಿ ಚಿತ್ರ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಸುದೀಪ್ ಹೆಬ್ಬುಲಿ ಚಿತ್ರದ ಖದರ್ ಶುರುವಾಗಲಿದೆ.
(5 / 5)
2017ರ ಫೆಬ್ರವರಿ 17ರಂದು ಹೆಬ್ಬುಲಿ ಸಿನಿಮಾ ತೆರೆಗೆ ಬಂದಿತ್ತು. ಎಸ್. ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ಗೌಡ ಮತ್ತು ರಘುನಾಥ್ ನಿರ್ಮಾಣ ಮಾಡಿದ್ದರು. ಚಿತ್ರದಲ್ಲಿ ಕ್ಯಾಪ್ಟನ್ ರಾಮ್ ಸುದೀಪ್ ಕಾಣಿಸಿಕೊಂಡದ್ದರೆ, ಅಣ್ಣನಾಗಿ ರವಿಚಂದ್ರನ್ ನಟಿಸಿದ್ದರು. ಅಮಲಾ ಪೌಲ್ ನಾಯಕಿಯಾಗಿದ್ದರು. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲೂ ಕಮಾಯಿ ಮಾಡಿತ್ತು ಈ ಸಿನಿಮಾ.
ಇತರ ಗ್ಯಾಲರಿಗಳು