Vinay Gowda: ಶಾರೂಖ್ ಖಾನ್‌ನಂತೆ ಕಾಣಿಸ್ತಾರ ಬಿಗ್‌ಬಾಸ್ ವಿನಯ್ ಗೌಡ? ಹರಹರ ಮಹಾದೇವ ಸೀರಿಯಲ್ ನಟನ ಹೊಸ ಫೋಟೋ ಆಲ್ಬಂ
- Kannada Actor Vinay Gowda:ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೂರನೇ ರನ್ನರ್ ಅಪ್ ವಿನಯ್ ಗೌಡ. ಇವರ ಈ ಫೋಟೋ ನೋಡಿದ್ರೆ ಕೊಂಚ ಶಾರೂಖ್ ಖಾನ್ ಲುಕ್ ಕಾಣಿಸುತ್ತಾ? ಶಾರೂಖ್ ಖಾನ್‌ಗಿಂತ ಯಂಗ್ ಆಂಡ್ ಎನೆರ್ಜೆಟಿಕ್ ನಟ ಇವರು ಎನ್ನುವುದರಲ್ಲಿ ಎರಡು ಮಾತಿಲ್ಲ.
- Kannada Actor Vinay Gowda:ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೂರನೇ ರನ್ನರ್ ಅಪ್ ವಿನಯ್ ಗೌಡ. ಇವರ ಈ ಫೋಟೋ ನೋಡಿದ್ರೆ ಕೊಂಚ ಶಾರೂಖ್ ಖಾನ್ ಲುಕ್ ಕಾಣಿಸುತ್ತಾ? ಶಾರೂಖ್ ಖಾನ್‌ಗಿಂತ ಯಂಗ್ ಆಂಡ್ ಎನೆರ್ಜೆಟಿಕ್ ನಟ ಇವರು ಎನ್ನುವುದರಲ್ಲಿ ಎರಡು ಮಾತಿಲ್ಲ.
(1 / 8)
ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಹೊಸ ಲುಕ್‌ನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ "ಸ್ಟನ್ನಿಂಗ್ ಕಿಲ್ಲರ್ ಆಟಿಟ್ಯೂಡ್" "ಆನೆ" ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಹೇರ್ ಸ್ಟೈಲ್, ಕನ್ನಡಕ, ಗಡ್ಡ ಇವೆಲ್ಲ ಶಾರೂಖ್ ಖಾನ್‌ನಂತೆ ಕಂಡರೂ ಅಚ್ಚರಿಯಿಲ್ಲ.
(2 / 8)
ಕೆಲವು ದಿನದ ಹಿಂದೆ ತನ್ನ ಮಡದಿ ಜತೆಗಿನ ಸುಂದರ ಫೋಟೋವನ್ನು ವಿನಯ್ ಗೌಡ ಹಂಚಿಕೊಂಡಿದ್ದರು. "ಯಶಸ್ವಿ ಮದುವೆಯೆಂದರೆ ಅದೇ ವ್ಯಕ್ತಿ ಜತೆ ಮತ್ತೆ ಮತ್ತೆ ಪ್ರೀತಿಗೆ ಬೀಳುವುದು" ಎನ್ನುವಂತಹ ಅರ್ಥದ ಕ್ಯಾಪ್ಷನ್ ಅನ್ನು ನೀಡಿದ್ದರು.
(3 / 8)
ಈ ಹಿಂದೆಯೂ ತನ್ನ ಪ್ರೀತಿಯ ಪತ್ನಿ ಬಗ್ಗೆ ಹೇಳಿಕೊಂಡಿದ್ದರು. "ನಾನು ಪ್ರತಿದಿನ ಅವಳನ್ನು ನೋಡಿದಾಗ ಪ್ರೀತಿಯಲ್ಲಿ ಬೀಳುತ್ತೇನೆ" ಎಂದಿದ್ದರು. ಬಿಗ್‌ಬಾಸ್ ಕನ್ನಡ ಮನೆಯೊಳಗೂ ಇತರೆ ಯುವತಿಯರ ಜತೆ ಇವರು ಫ್ಲರ್ಟಿಂಗ್ ಮಾಡಿರಲಿಲ್ಲ. ಮಹಿಳಾ ಸ್ಪರ್ಧಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು.
(4 / 8)
ನನಗೆ ನನ್ನ ಹೆಂಡತಿ ತುಂಬಾ ಇಷ್ಟ. ತುಂಬಾ ಕಷ್ಟಪಟ್ಟು ಗಳಿಸಿದ ಪ್ರೀತಿ ಅದು. ಅವಳನ್ನು ಪಡೆಯಲು ತುಂಬಾ ಕಷ್ಟಪಟ್ಟಿದ್ದೇನೆ ಎಂದು ಅವರು ಹೇಳಿದ್ದರು.
(5 / 8)
ಸದ್ಯ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಹಲವು ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದಾಗಲೇ ಹಲವು ಪ್ರಾಜೆಕ್ಟ್‌ಗಳಿಗೆ ಸಹಿಹಾಕಿದ್ದರು.
(6 / 8)
ವಿನಯ್ ಗೌಡ ಈಗಾಗಲೇ ರಾಕೆಟ್, ಪೊಗರು, ಶಿವಾಜಿ ಸುರತ್ಕಲ್, ಅವನಲ್ಲಿ ಇವಳಿಲ್ಲಿ, ಕೈಮರ ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
(7 / 8)
ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಉತ್ತಮವಾಗಿ ಆಡಿ ಜನರ ಮನಗೆದ್ದಿದ್ದರು. ಈಗಲೂ ಇವರ ಪೋಟೋಗಳಿಗೆ "ನೀವೇ ಬಿಗ್‌ಬಾಸ್‌ನ ರಿಯಲ್ ವಿನ್ನರ್" ಎಂದು ಫ್ಯಾನ್ಸ್ ಕಾಮೆಂಟ್ ಹಾಕುತ್ತ ಇರುತ್ತಾರೆ.
ಇತರ ಗ್ಯಾಲರಿಗಳು