ಕನ್ನಡ ಸುದ್ದಿ  /  Photo Gallery  /  Sandalwood News Actor Darshan Spent The Whole Night On The Lake Shore Near The Farmhouse On A Bullock Cart Mnk

Darshan: ಎತ್ತಿನ ಬಂಡಿ ಏರಿ ಕೆರೆದಂಡೆಯಲ್ಲೇ ತಣ್ಣನೆಯ ರಾತ್ರಿ ಕಳೆದ ದರ್ಶನ್‌! ಸರಳತೆಯ ಸಾಹುಕಾರ ಎಂದ ಡಿ ಫ್ಯಾನ್ಸ್‌ PHOTOS

  • ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ನಟ ದರ್ಶನ್‌ ಭಾಗವಹಿಸಿದ್ದಾರೆ. ಇದ್ಯಾವ ರೀತಿಯ ಸಿನಿಮಾ, ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಸುಳಿವು ಬಿಟ್ಟು ಕೊಡದ ಡೆವಿಲ್‌, ಇದೇ ವರ್ಷದಲ್ಲಿಯೇ ತೆರೆಗೆ ಬರಲಿದೆ. ಇಂತಿಪ್ಪ ಸಿನಿಮಾ ಶೂಟಿಂಗ್‌ನ ಗ್ಯಾಪ್‌ನಲ್ಲಿಯೇ ದರ್ಶನ್‌ ತಮ್ಮ ಫಾರ್ಮ್‌ಹೌಸ್‌ ಬಳಿಯ ಕೆರೆದಂಡೆಯಲ್ಲಿ ವಿಶೇಷವಾಗಿಯೇ ರಾತ್ರಿ ಕಳೆದಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಬರೀ ಸಿನಿಮಾಗಳಿಂದ ಮಾತ್ರವಲ್ಲ ಅದೆಲ್ಲದಕ್ಕಿಂತ ಹೆಚ್ಚಾಗಿ, ತಮ್ಮ ಸರಳತೆಯ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಆಗಾಗ ಸುದ್ದಿಯ ಮುನ್ನೆಲೆಗೂ ಬರುತ್ತಿರುತ್ತಾರೆ. 
icon

(1 / 10)

ಹೋದಲ್ಲಿ ಬಂದಲ್ಲಿ ದರ್ಶನ್‌ ಎಷ್ಟು ಸಿಂಪಲ್‌ ಎಂಬುದಕ್ಕೆ ಸೋಷಿಯಲ್‌ ಮೀಡಿಯಾದಲ್ಲೂ ಸಾಕಷ್ಟು ವಿಡಿಯೋ ಉದಾಹರಣೆಗಳಿವೆ. ಈಗ ಅದಕ್ಕೆ ಕನ್ನಡಿ ಹಿಡಿದಂತೆ, ಮತ್ತೊಂದು ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.
icon

(2 / 10)

ಡೆವಿಲ್‌ ಸಿನಿಮಾ ಶೂಟಿಂಗ್‌ನ ಗ್ಯಾಪ್‌ನಲ್ಲಿಯೇ  ದರ್ಶನ್‌ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಿಶೇಷವಾಗಿಯೇ ರಾತ್ರಿ ಕಳೆದಿದ್ದಾರೆ.
icon

(3 / 10)

 ಹಾಗಂತ ಫಾರ್ಮ್‌ಹೌಸ್‌ ಎಸಿ ಕೋಣೆಯಲ್ಲಿ ಅವರೇನು ವಾಸ್ತವ್ಯ ಹೂಡಿಲ್ಲ ಬದಲಿಗೆ. ಫಾರ್ಮ್‌ಹೌಸ್‌ ಬಳಿಯ ಕೆರೆಯ ದಂಡೆಯಲ್ಲಿ ಹಾಯಾಗಿ ನಿದ್ರಿಸಿದ್ದಾರೆ.
icon

(4 / 10)

ದರ್ಶನ್‌ ಮತ್ತವರ ಫಾರ್ಮ್‌ಹೌಸ್‌ನಲ್ಲಿನ ಆಪ್ತರ ಜತೆಗೆ ಜೋಡೆತ್ತಿನ ಬಂಡಿಯನ್ನು ಹೂಡಿದ್ದಾರೆ. ಇನ್ನೊಂದು ಬಂಡಿಯಲ್ಲಿ ಆರೇಳು ಮಂಚಗಳನ್ನೂ ಲೋಡ್‌ ಮಾಡಿದ್ದಾರೆ. 
icon

(5 / 10)

ಪಕ್ಕದಲ್ಲಿ ಐಷಾರಾಮಿ ಕಾರ್‌ಗಳಿದ್ದರೂ, ಅದೆಲ್ಲವನ್ನು ಬಿಟ್ಟು, ತಾವೇ ಎತ್ತುಗಳನ್ನು ಕರೆತಂದು ಬಂಡಿ ಏರಿ, ಟಾರ್ಚ್‌ ಬೆಳಕಲ್ಲೇ ಕೆರೆದಂಡೆಗೆ ತೆರಳಿದ್ದಾರೆ. 
icon

(6 / 10)

ವಿಶೇಷ ಏನೆಂದರೆ, ದರ್ಶನ್‌ ಅವರ ಜತೆಗೆ ಅವರ ಪುತ್ರ ವಿನೀಶ್‌ ಸಹ ಅಪ್ಪನ ಜತೆ ಎತ್ತಿನ ಬಂಡಿ ಏರಿದ್ದರು. ಅದಾದ ಬಳಿಕ ಕೆರೆದಂಡೆಯಲ್ಲಿ ಬೆಂಕಿ ಹಾಕಿ, ಒಂದಿಡಿ ರಾತ್ರಿಯನ್ನು ಬೆಳದಿಂಗಳ ಬೆಳಕಲ್ಲಿ ಕಳೆದಿದ್ದಾರೆ. 
icon

(7 / 10)

ಕೆರೆಯಲ್ಲಿ ದೋಣೆ ಸವಾರಿ ಮಾಡಿದ ದರ್ಶನ್‌ ಪುತ್ರ ವಿನೀಶ್ 
icon

(8 / 10)

ಕೆರೆಯಲ್ಲಿ ದೋಣೆ ಸವಾರಿ ಮಾಡಿದ ದರ್ಶನ್‌ ಪುತ್ರ ವಿನೀಶ್ 

ಪುತ್ರನ ಜತೆ ದರ್ಶನ್‌ ಕೀಟಲೆ
icon

(9 / 10)

ಪುತ್ರನ ಜತೆ ದರ್ಶನ್‌ ಕೀಟಲೆ

ಹೀಗೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ದರ್ಶನ್‌ ಅವರ ಅಪಾರ ಅಭಿಮಾನಿಗಳು ಸರಳತೆಯ ಸರದಾರ, ಆಳಾಗಿ ದುಡಿಯೋಕು ಸೈ ರಾಜನಾಗಿ ಮೇರೆಯೋಕು ಸೈ..... ಜೈ ಡಿ ಬಾಸ್ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ
icon

(10 / 10)

IPL_Entry_Point

ಇತರ ಗ್ಯಾಲರಿಗಳು