ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟ ದರ್ಶನ್‌ ಕನ್ನಡ ಚಿತ್ರೋದ್ಯಮದ ದೇವಮಾನವ, ಅವರ ಬಂಧನ ನಮಗೆ ಕರಾಳ ದಿನ; ಸಂಜನಾ ಗಲ್ರಾನಿ

ನಟ ದರ್ಶನ್‌ ಕನ್ನಡ ಚಿತ್ರೋದ್ಯಮದ ದೇವಮಾನವ, ಅವರ ಬಂಧನ ನಮಗೆ ಕರಾಳ ದಿನ; ಸಂಜನಾ ಗಲ್ರಾನಿ

  • ನಟ ದರ್ಶನ್‌ ಮತ್ತವರ ಗ್ಯಾಂಗ್‌ ಕೊಲೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ರಾಜ್ಯಾದ್ಯಂತ ದರ್ಶನ್‌ ಅವರ ಅಭಿಮಾನಿಗಳೂ ಸೋಷಿಯಲ್‌ ಮೀಡಿಯಾದಲ್ಲಿ ನಟನ ಪರವಾಗಿಯೇ ಬ್ಯಾಟ್‌ ಬೀಸುತ್ತಿದ್ದಾರೆ. ಇತ್ತ ನಟಿ ಸಂಜನಾ ಗಲ್ರಾನಿ ಸಹ ದರ್ಶನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಟ ದರ್ಶನ್ ತೂಗುದೀಪ ಅವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದು ಬರೀ ಕರ್ನಾಟಕ ಮಾತ್ರವಲ್ಲ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. 33 ವರ್ಷದ ರೇಣುಕಾ ಸ್ವಾಮಿಯನ್ನು ಕೊಲೆಗೈದ ಆರೋಪದಡಿ ದರ್ಶನ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. 
icon

(1 / 5)

ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ, ದರ್ಶನ್‌ ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ, ಆತನನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಲಾಗಿತ್ತು.
icon

(2 / 5)

ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿನ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಮೈ ಕೈ ಮೂಳೆ ಮುರಿದು, ಸಿಗರೇಟ್‌ನಿಂದ ಸುಟ್ಟು, ಮರ್ಮಾಂಗಕ್ಕೆ ಬಲವಾಗಿ ಒದ್ದು ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಹಾಗೆ ಎಸೆದು ಹೋದ ದುರುಳರೀಗ ಸಾಕ್ಷಿ ಸಮೇತ ಪೊಲೀಸರ ವಶದಲ್ಲಿದ್ದಾರೆ. 
icon

(3 / 5)

ಇದೀಗ ಇದೇ ಘಟನೆಗೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ನಟ ದರ್ಶನ್‌ ಬಗ್ಗೆ ಎನ್‌ಡಿ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. ನಟ ದರ್ಶನ್‌ ಕನ್ನಡ ಚಿತ್ರರಂಗದ ದೇವಮಾನವ. ಅವರ ಬಂಧನ ನಮ್ಮ ಚಿತ್ರೋದ್ಯಮಕ್ಕೆ ಕರಾಳ ದಿನ ಎಂದು ಹೇಳಿಕೊಂಡಿದ್ದಾರೆ. 
icon

(4 / 5)

ಕರ್ನಾಟಕದಲ್ಲಿನ ಜನ ಅವರ ಸಿನಿಮಾಗಳನ್ನಷ್ಟೇ ನೋಡುವುದಿಲ್ಲ. ದರ್ಶನ್‌ ಅವರನ್ನು  ದೇವರಂತೆ ಪೂಜಿಸುತ್ತಾರೆ. ಅಷ್ಟು ದೊಡ್ಡವರವರು. ಸಹ ನಟಿಗೂ ಅಷ್ಟೇ ಗೌರವ ನೀಡುತ್ತಾರೆ. ಆದರೆ, ಈಗ ನಡೆದಿದ್ದು ನನಗಷ್ಟೇ ಅಲ್ಲ ಅವರ ಅಪಾರ ಅಭಿಮಾನಿಗಳಿಗೆ ಶಾಕಿಂಗ್‌ ವಿಚಾರವಿದು. ಅದರಲ್ಲೂ ಸೆಲೆಬ್ರಿಟಿಗಳ ಮೇಲೆ ಈ ರೀತಿಯ ಆಪಾದನೆ ಬಂದರೆ 5% ಆರೋಪವಿದ್ದರೆ, ಅದು 500% ಆಪಾದನೆಯಾಗುತ್ತದೆ ಎಂದೂ ಹೇಳಿದ್ದಾರೆ ಸಂಜನಾ. 
icon

(5 / 5)

ಇತರ ಗ್ಯಾಲರಿಗಳು