ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ! ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತ ಜಗ್ಗೇಶ್
- Actor Jaggesh: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕನ್ನಡ ನಟ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ. ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ ಎಂದ ಅವರು ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತಿದ್ದಾರೆ. ಇವರ ಕಣ್ಣೀರಿಗೆ ನಟಿ ಅನುಶ್ರೀ ಮತ್ತು ಇತರರು ಭಾವುಕರಾಗಿದ್ದಾರೆ.
- Actor Jaggesh: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕನ್ನಡ ನಟ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ. ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ ಎಂದ ಅವರು ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತಿದ್ದಾರೆ. ಇವರ ಕಣ್ಣೀರಿಗೆ ನಟಿ ಅನುಶ್ರೀ ಮತ್ತು ಇತರರು ಭಾವುಕರಾಗಿದ್ದಾರೆ.
(1 / 8)
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕನ್ನಡ ನಟ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ. ನಮ್ಮ ಚಿತ್ರೋದ್ಯಮದವರೇ ಕೆಟ್ಟ ಸಿನಿಮಾ ಅಂತಾರೆ, ಅವರೇ ಅಪಪ್ರಚಾರ ಮಾಡ್ತಾರೆ ಎಂದ ಅವರು ಕನ್ನಡ ಚಿತ್ರರಂಗದ ವಾಸ್ತವ ನೆನೆದು ಗಳಗಳನೆ ಅತ್ತಿದ್ದಾರೆ. ಇವರ ಕಣ್ಣೀರಿಗೆ ನಟಿ ಅನುಶ್ರೀ ಮತ್ತು ಇತರರು ಭಾವುಕರಾಗಿದ್ದಾರೆ.
(2 / 8)
ಕನ್ನಡದ ಹಿರಿಯ ನಟ, ಹಾಸ್ಯ ನಟ, ರಾಜಕಾರಣಿ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಝೀ ಕನ್ನಡ ರಿಯಾಲಿಟಿ ಶೋ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಈಗಿನ ದುಸ್ಥಿತಿ ನೆನೆದು ದುಃಖಿಸಿದ್ದಾರೆ.
(3 / 8)
ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಡಿಸಾಸ್ಟರ್ ಸಂಭವಿಸಿದೆ. ಇಲ್ಲಿ ಎಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡ್ತಿಲ್ಲ. ಎಲ್ಲಾ ಕಡೆ ಜಾಹೀರಾತು ನೀಡ್ತಾರೆ. ಆದ್ರೆ, ಚಿತ್ರಮಂದಿರಗಳಿಗೆ ಯಾರೂ ಬರುತ್ತಿಲ್ಲ. ಯಾಕೆ ಹೀಗೆ. ಇದನ್ನು ನೆನೆದರೆ ಬೇಸರವಾಗುತ್ತದೆ." ಎಂದು ನಟ ಜಗ್ಗೇಶ್ ಹೇಳಿದ್ದಾರೆ.
(4 / 8)
"ಯಾಕೆ ಹೀಗಾಯ್ತು ಎಂದು ಯೋಚಿಸಿದಾಗ ಕನ್ನಡವೇ ಹಿಂಗೆ ಎಂದು ಯೋಚಿಸುತ್ತೇವೆ. ಹಾಗಲ್ಲ ವಿಷಯ. ಯಾಕೆ ಇಂಡಸ್ಟ್ರಿಗೆ ಹೀಗೆ ಆಗ್ತಾ ಇದೆ. ಏನಾಗುತ್ತಿದೆ. ಜನರು ಯಾಕೆ ಬರುತ್ತಿಲ್ಲ ಎಂದು ಯೋಚಿಸಿದಾಗ ಬೇಸರವಾಗುತ್ತದೆ. ಕನ್ನಡದ ಪರಿಸ್ಥಿತಿ ಮಾತ್ರವಲ್ಲ. ಅಕ್ಷಯ್ ಕುಮಾರ್ ಕೋಟ್ಯಂತರ ರೂಪಾಯಿ ಹಾಕಿ ಫಿಕ್ಚರ್ ಮಾಡಿದ್ದಾರೆ. ಅವರಿಗೂ ಡಿಸಾಸ್ಟರ್ ಆಯಿತು. ಇಡೀ ಭಾರತದ ಚಿತ್ರರಂಗ ಕೊಚ್ಚಿ ಹೋಗಿದೆ" ಎಂದರು.
(5 / 8)
ಈಗ ಸಣ್ಣ ಪುಟ್ಟ ಸಿನಿಮಾಗಳಿಗೆ ತೊಂದರೆಯಾಗುತ್ತಿದೆ. ಈಗ ಪರಿಸ್ಥಿತಿ ಏನಾಗಿದೆ ಅಂದ್ರೆ, ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡ್ತಾರೋ ಅದು ಸಿನಿಮಾ ಆಗಿದೆ. ಉಳಿದವು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಉಂಟಾಗಿದೆ" ಎಂದು ಜಗ್ಗೇಶ್ ಅಭಿಪ್ರಾಯಪಟ್ಟಿದ್ದಾರೆ.
(6 / 8)
"ಯಾರು 200 ಕೋಟಿ ಹಾಕಿ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಂತಾಗಿದೆ. ಯಾರು ಒಳ್ಳೆ ಕಥೆ ಹಾಕಿ ಸಣ್ಣ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
(7 / 8)
"ನನ್ನ ಬಾಂಧವರು, ಒಡಹುಟ್ಟಿದವರು, ನನ್ನವರು ನನ್ನ ಪಿಕ್ಚರ್ ರಿಲೀಸ್ ಆದಾಗ ಇದು ದರಿದ್ರ ಪಿಚ್ಚರು, ಇದು ಕೆಟ್ಟ ಸಿನಿಮಾ ಎಂದು ತಮ್ಮ ಶ್ರಮ ಹಾಕಿ ಇನ್ನೊಬ್ಬರ ಲೈಫ್ ಹಾಳು ಮಾಡುತ್ತಾರೆ. ಎಲ್ಲರೂ ಚೆನ್ನಾಗಿರಲಿ, ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡ" ಎಂದು ಅವರು ಹೇಳಿದರು. ಈ ಮೂಲಕ ಆನ್‌ಲೈನ್ ಅಪ್ರಚಾರದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
(8 / 8)
"ನೀವು ಬೈದರೂ ಬೇಜಾರಿಲ್ಲ. ನಿಮಗೆ ಬೇಸರವಾದಗ ಯೂಟ್ಯೂಬ್‌ನಲ್ಲಿ ಒಂದು ಸಿನಿಮಾದ ಸೀನ್ ನೋಡ್ತಿರಿ. ಅದು ಮೈ ಸಿನಿಮಾ. ನಾನು ಸ್ವಲ್ಪ ಭಾವುಕನಾದೆ. ಯಾಕೆಂದ್ರೆ ನನ್ನ ಅಣು, ರೇಣು, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ, ನನ್ನ ಊಟ ಎಲ್ಲವೂ ಸಿನಿಮಾ ಕೊಟ್ಟಿದ್ದು. ಹಾಗಾಗಿ ನಾನು ಸಿನಿಮಾವನ್ನು ತಾಯಿ ತರಹ ಪ್ರೀತಿಸ್ತೀನಿ" ಎಂದು ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ.
ಇತರ ಗ್ಯಾಲರಿಗಳು