ಕುಲದೇವರು ನಂಜುಂಡೇಶ್ವರನಿಗೆ ಇಬ್ಬರು ಮಕ್ಕಳಿಂದ ಮುಡಿ ಕೊಡಿಸಿ, ಹರಕೆ ತೀರಿಸಿದ ನಟ ರವಿಶಂಕರ್‌ ಗೌಡ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುಲದೇವರು ನಂಜುಂಡೇಶ್ವರನಿಗೆ ಇಬ್ಬರು ಮಕ್ಕಳಿಂದ ಮುಡಿ ಕೊಡಿಸಿ, ಹರಕೆ ತೀರಿಸಿದ ನಟ ರವಿಶಂಕರ್‌ ಗೌಡ Photos

ಕುಲದೇವರು ನಂಜುಂಡೇಶ್ವರನಿಗೆ ಇಬ್ಬರು ಮಕ್ಕಳಿಂದ ಮುಡಿ ಕೊಡಿಸಿ, ಹರಕೆ ತೀರಿಸಿದ ನಟ ರವಿಶಂಕರ್‌ ಗೌಡ PHOTOS

  • ಸ್ಯಾಂಡಲ್‌ವುಡ್‌ ನಟ ರವಿಶಂಕರ್‌ ಗೌಡ, ಕಿರುತೆರೆಯಿಂದ ಬೆಳೆದು ಈಗ ಚಂದನವನದಲ್ಲಿ ಹೆಸರು ಮಾಡಿದ್ದಾರೆ. ಪೋಷಕ ಪಾತ್ರಗಳಿರಬಹುದು, ಕಾಮಿಡಿ ಪಾತ್ರಗಳಿರಬಹುದು, ಸಿಕ್ಕಿದ್ದನ್ನು ಲೀಲಾಜಾಲವಾಗಿ ನಿಭಾಯಿಸುವ ರವಿಶಂಕರ್‌ ಗೌಡ, ಇಂದಿಗೂ ಹಲವರ ಪಾಲಿನ ನೆಚ್ಚಿನ ಡಾ. ವಿಠ್ಠಲ್‌ ರಾವ್. ಈಗ ಇದೇ ನಟ ಬಹುದಿನಗಳ ಹರಕೆ ತೀರಿಸಿದ್ದಾರೆ. ಅದೂ ಮಕ್ಕಳ ಮುಡಿ ಕೊಡುವ ಮೂಲಕ.

ಚಂದನವನದ ಬೇಡಿಕೆಯ ಪೋಷಕ ನಟರಲ್ಲಿ ರವಿಶಂಕರ್‌ ಗೌಡ ಅವರೂ ಒಬ್ಬರು. ಹಾಸ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದವರು. 
icon

(1 / 7)

(instagram\ ravishankar gowda)

ಕನ್ನಡ ಕಿರುತೆರೆಯಲ್ಲಿ ಸಿಲ್ಲಿ ಲಲ್ಲಿ ಸೀರಿಯಲ್‌ ಮೂಲಕ ಹೆಚ್ಚು ಮುನ್ನೆಲೆಗೆ ಬಂದ ರವಿಶಂಕರ್‌ ಗೌಡ, ಸೀರಿಯಲ್‌ ಜತೆಗೆ ಸಿನಿಮಾಗಳಲ್ಲೂ ಚಾನ್ಸ್‌ ಗಿಟ್ಟಿಸಿಕೊಂಡು ಅಲ್ಲೂ ಮಿಂಚುತ್ತಿದ್ದಾರೆ. 
icon

(2 / 7)

ಹೀಗಿರುವ ರವಿಶಂಕರ್‌ ಗೌಡ ಈಗ ಫ್ಯಾಮಿಲಿ ಜತೆಗೆ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದುಬಂದಿದ್ದಾರೆ. 
icon

(3 / 7)

ಪತ್ನಿ ಸಂಗೀತಾ ಗುರುರಾಜ್‌ ಮಕ್ಕಳಾದ ಸೂರ್ಯ ಮತ್ತು ಶೌರ್ಯ ಜತೆಗೆ ನಂಜುಂಡೇಶ್ವರನ ಸನ್ನಿಧಾನಕ್ಕೆ ತೆರಳಿ, ಹರಕೆಯನ್ನೂ ತೀರಿಸಿದ್ದಾರೆ. 
icon

(4 / 7)

ರವಿಶಂಕರ್‌ ಮತ್ತು ಸಂಗೀತಾ ದಂಪತಿಯ ಇಬ್ಬರು ಮಕ್ಕಳಾದ ಸೂರ್ಯ ಮತ್ತು ಶೌರ್ಯ ಅವರ ಮುಡಿ ನೀಡುವ ಮೂಲಕ ಬಹುಕಾಲದ ಹರಕೆಯನ್ನು ತೀರಿಸಿದ್ದಾರೆ. 
icon

(5 / 7)

ಮಕ್ಕಳು ಮುಡಿ ನೀಡಿದ ಫೋಟೋ ಹಂಚಿಕೊಂಡ ಅವರು, ಎನ್ನ ಕುಲದೇವ ನಂಜನಗೂಡು ನಂಜುಂಡನಿಗೆ ಇಂದು ಹರಕೆ ತೀರಿಸಿದ ತೃಪ್ತಿ... ನಂಜುಂಡೇಶ್ವರನ ಆಶೀರ್ವಾದ ಹಾಗೂ ನಿಮ್ಮಗಳ ಆಶೀರ್ವಾದ ನನ್ನ ಮಕ್ಕಳ ಮೇಲೆ ಹಾಗೂ ಕುಟುಂಬದ ಮೇಲೆ ಸದಾ ಇರಲಿ ಎಂದಿದ್ದಾರೆ. 
icon

(6 / 7)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಯುವ ರಾಜ್‌ಕುಮಾರ್‌ ಜತೆಗೆ ಯುವ ಸಿನಿಮಾದಲ್ಲೂ ರವಿಶಂಕರ್‌ ಗೌಡ ಬಣ್ಣ ಹಚ್ಚಿದ್ದರು. 
icon

(7 / 7)

ಇತರ ಗ್ಯಾಲರಿಗಳು