‘ಕುಪ್ಪಳ್ಳಿಯ ಕವಿಮನೆ, ಕವಿಶೈಲಕ್ಕೆ ಭೇಟಿ ನೀಡಿ ಧನ್ಯನಾದೆ’ ಎಂದ ನಟ ಸಾಯಿಕುಮಾರ್; ಹೀಗಿವೆ ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಕುಪ್ಪಳ್ಳಿಯ ಕವಿಮನೆ, ಕವಿಶೈಲಕ್ಕೆ ಭೇಟಿ ನೀಡಿ ಧನ್ಯನಾದೆ’ ಎಂದ ನಟ ಸಾಯಿಕುಮಾರ್; ಹೀಗಿವೆ ಫೋಟೋಸ್‌

‘ಕುಪ್ಪಳ್ಳಿಯ ಕವಿಮನೆ, ಕವಿಶೈಲಕ್ಕೆ ಭೇಟಿ ನೀಡಿ ಧನ್ಯನಾದೆ’ ಎಂದ ನಟ ಸಾಯಿಕುಮಾರ್; ಹೀಗಿವೆ ಫೋಟೋಸ್‌

  • Saikumar Visits Kavi Shaila Kavi mane: ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದಿರುವ ದಕ್ಷಿಣ ಭಾರತದ ಖ್ಯಾತ ನಟ ಸಾಯಿಕುಮಾರ್, ಇತ್ತೀಚೆಗೆ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಆ ಸುಂದರ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಸುಂದರ ಅನುಭವಗಳನ್ನು ಸಾಯಿಕುಮಾರ್ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟ ಸಾಯಿಕುಮಾರ್‌ ಕನ್ನಡದ ಜತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಬಿಜಿ. ಕನ್ನಡಿಗರ ಹೃದಯದಲ್ಲೂ ಅಷ್ಟೇ ವಿಶೇಷ ಸ್ಥಾನ ಪಡೆದಿದ್ದಾರೆ ಈ ನಟ. ಇದೀಗ ಕುವೆಂಪು ಅವರ ಕವಿಶೈಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಕಳೆದ ಕ್ಷಣಗಳು ಹೀಗಿವೆ. ಅದನ್ನು ಅವರ ಮಾತಿನಲ್ಲಿಯೇ ಓದಿ.
icon

(1 / 8)

ನಾನು ಹಾಗೂ ನನ್ನ ಕೆಲವು ಸ್ನೇಹಿತರು ಇತ್ತೀಚಿಗೆ ತೀರ್ಥಹಳ್ಳಿಯಿಂದ  ರಾಷ್ಟ್ರಕವಿ ಕುವೆಂಪು ಅವರ ಮನೆ ಹಾಗು ಕವಿಶೈಲಕ್ಕೆ ಭೇಟಿ ನೀಡಿದ್ದೆ. ಅಬ್ಬಾ ಆ ಸ್ಥಳವನ್ನು ಬಣಿಸಲು ಪದಗಳೆ ಸಿಗುತ್ತಿಲ್ಲ. 
icon

(2 / 8)

ನಾನು ನನ್ನ ಸಿನಿಮಾಗಳಲ್ಲಿ ಕುವೆಂಪು ಅವರ "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು", "ಕನ್ನಡಕ್ಕೆ ಹೋರಾಡು ಕನ್ನಡದ ಕಂದ" ,"ಬಾರಿಸು ಕನ್ನಡ ಡಿಂಡಿಮವ" ಮುಂತಾದ ಕವನಗಳನ್ನು ಹಾಗೂ "ಜಯ ಭಾರತ ಜನನಿಯ ತನುಜಾತೆ" ನಾಡಗೀತೆಯನ್ನು ಹಾಡುತ್ತಿರುತ್ತೇನೆ. ಆದರೆ ಈವರೆಗೂ ಕುಪ್ಳಳ್ಳಿಗೆ ಹೋಗಿರಲಿಲ್ಲ. 
icon

(3 / 8)

ಇತ್ತೀಚಿಗೆ ಕುಪ್ಪಳ್ಳಿಯ ಕವಿಮನೆ ಹಾಗೂ ಕವಿಶೈಲಕ್ಕೆ ಹೋಗಿದ್ದೆ. ಪ್ರಕೃತಿಯ ಮಡಿಲಲ್ಲಿರುವ ಆ ಪುಣ್ಯಸ್ಥಳವನ್ನು ನೋಡಿ ಪುಳಕಿತನಾದೆ. ಅವರು ಬಳಸುತ್ತಿದ್ದ ಲೇಖನಿ ಹಾಗೂ ಪುಸ್ತಕ ಮುಂತಾದವುಗಳನ್ನು ಕಂಡು ಧನ್ಯನಾದೆ. 
icon

(4 / 8)

ನಾನು ಸುಮಾರು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಚಿತಗಳನ್ನು ಮಾಡುತ್ತಾ ಬಂದಿದ್ದರೂ ಕುಪ್ಪಳ್ಳಿಯನ್ನು ನೋಡುವ ಯೋಗ ಬಂದಿರಲಿಲ್ಲ. 
icon

(5 / 8)

ಹಾಗಾಗಿ ವಿದ್ಯಾರ್ಥಿಗಳು ಹಾಗೂ ಯುವಕರು ಕುಪ್ಪಳ್ಳಿಗೆ ಭೇಟಿ ನೀಡಿ. ಅಲ್ಲಿನ ಸೊಬಗನ್ನ ಕಣ್ತುಂಬಿಕೊಳ್ಳಿ ಎನ್ನುತ್ತಾರೆ ನಟ ಸಾಯಿಕುಮಾರ್.
icon

(6 / 8)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ರಂಗಿತರಂಗ ಬಳಿಕ ನಟ ನಿರೂಪ್‌ ಭಂಡಾರಿ ಅವರ ಹೊಸ ಸಿನಿಮಾದಲ್ಲಿ ಸಾಯಿಕುಮಾರ್‌ ನಟಿಸುತ್ತಿದ್ದಾರೆ. 
icon

(7 / 8)

ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸ್ತಿದ್ದಾರೆ. ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ
icon

(8 / 8)

ಇತರ ಗ್ಯಾಲರಿಗಳು