ಮಾವನ ಮಗನೊಂದಿಗೆ ಅತ್ತೆಯ ಮಗಳ ಪೋಸ್; ಶರಣ್ ಪುತ್ರನ ಜತೆಗೆ ಶ್ರುತಿ ಮಗಳು ಗೌರಿಯ ಸಖತ್ PHOTOSHOOT
- Sandalwood News: ಸ್ಯಾಂಡಲ್‌ವುಡ್ ಕಲಾವಿದರಾದ ಶರಣ್ ಮತ್ತು ಅವರ ತಂಗಿ ಶ್ರುತಿ ಕೃಷ್ಣ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರು. ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ಅಣ್ಣ- ತಂಗಿ ಜೋಡಿಯ ಮಕ್ಕಳೀಗ ಒಟ್ಟಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಅಂದರೆ, ಶರಣ್ ಪುತ್ರ, ಶ್ರುತಿ ಪುತ್ರಿ ಒಟ್ಟಿಗೆ ಕಾಡಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

(1 / 6)
ನಟ ಶರಣ್ ಅವರ ಮಗ ಹೃದಯ್, ಈಗಾಗಲೇ ಗುರು ಶಿಷ್ಯರು ಸಿನಿಮಾ ಮೂಲಕ ಚಂದನವನಕ್ಕೆ ಕಾಲಿರಿಸಿದ್ದಾರೆ. ಅದಾದ ಬಳಿಕ ಬೇರಾವ ಸಿನಿಮಾದಲ್ಲಿ ಹೃದಯ್ ನಟಿಸಿಲ್ಲ.
(Instagram\ Gowri shruthi)(2 / 6)
ಸ್ಯಾಂಡಲ್‌ವುಡ್ ಹಿರಿಯ ನಟಿ ಶ್ರುತಿ, ಆಗಾಗ ಮಗಳು ಗೌರಿ ಜತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹೀಗಿರುವಾಗಲೇ ಗ್ಯಾಪ್‌ನಲ್ಲೇ ಮಾವನ ಮಗನೊಂದಿಗೆ ಗೌರಿ ಕಾಣಿಸಕೊಂಡಿದ್ದಾರೆ.
(3 / 6)
ಶರಣ್ ಪುತ್ರ ಹೃದಯ್, ವರಸೆಯಲ್ಲಿ ಗೌರಿಗೆ ಮಾವನ ಮಗ. ಈಗ ಅದೇ ಮಾವನ ಮಗನ ಜತೆಗೆ ಅತ್ತೆಯ ಮಗಳು ಸೇರಿಕೊಂಡು ಸುತ್ತಾಟ ನಡೆಸಿದ್ದಾರೆ.
(4 / 6)
ನಟ ಶರಣ್ ಮತ್ತು ಶ್ರುತಿ, ಅಣ್ಣ ತಂಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಅಣ್ಣ ತಂಗಿಯ ಮಕ್ಕಳು ಹೇಗಿದ್ದಾರೆ ಎಂಬುದು ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈಗ ಸೋಷಿಯಲ್ ಮೀಡಿಯಾದಲ್ಲಿ ಮಾವನ ಮಗನ ಜತೆಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ ಗೌರಿ.
(5 / 6)
ಹೃದಯ್ ಮತ್ತು ಗೌರಿ ಒಟ್ಟಿಗೆ ಸೇರಿ ಒಂದಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಹೀಗೆ ಜತೆಗಿರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ, ಮಾವನ ಮಗನ ಜತೆಗೆ ಅತ್ತೆಯ ಮಗಳು ಎಂದು ಬಗೆಬಗೆ ಕಾಮೆಂಟ್ ನೀಡುತ್ತಿದ್ದಾರೆ ನೆಟ್ಟಿಗರು.
ಇತರ ಗ್ಯಾಲರಿಗಳು