Yash: ಧರ್ಮಸ್ಥಳದಲ್ಲಿ ಮಂಜುನಾಥನ ಸ್ಮರಣೆ, ಸುರ್ಯ ಸದಾಶಿವ ರುದ್ರ ದೇಗುಲದಲ್ಲಿ ಮಣ್ಣಿನ ಹರಕೆ, ಹೀಗಿತ್ತು ಕುಟುಂಬದ ಜತೆ ಇಂದಿನ ಯಶ್‌ ಯಾತ್ರೆ-sandalwood news actor yash temple run before toxic shooting visit dharmastala and surya sadashiva temple ujire ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yash: ಧರ್ಮಸ್ಥಳದಲ್ಲಿ ಮಂಜುನಾಥನ ಸ್ಮರಣೆ, ಸುರ್ಯ ಸದಾಶಿವ ರುದ್ರ ದೇಗುಲದಲ್ಲಿ ಮಣ್ಣಿನ ಹರಕೆ, ಹೀಗಿತ್ತು ಕುಟುಂಬದ ಜತೆ ಇಂದಿನ ಯಶ್‌ ಯಾತ್ರೆ

Yash: ಧರ್ಮಸ್ಥಳದಲ್ಲಿ ಮಂಜುನಾಥನ ಸ್ಮರಣೆ, ಸುರ್ಯ ಸದಾಶಿವ ರುದ್ರ ದೇಗುಲದಲ್ಲಿ ಮಣ್ಣಿನ ಹರಕೆ, ಹೀಗಿತ್ತು ಕುಟುಂಬದ ಜತೆ ಇಂದಿನ ಯಶ್‌ ಯಾತ್ರೆ

  • Toxic Actor Yash: ಕನ್ನಡ ನಟ ಯಶ್‌ ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಕರಾವಳಿಯ ಜನಪ್ರಿಯ ದೇಗುಲವಾದ ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಮಾಡಿದ್ದಾರೆ. ಇದೇ ರೀತಿ ಉಜಿರೆಯ ಸುರ್ಯ ಸದಾಶಿವ ರುದ್ರ ದೇಗುಲಕ್ಕೆ ಮಣ್ಣಿನ ರೀಲ್‌ ಅನ್ನು ಕಾಣಿಕೆಯಾಗಿ ನೀಡಿದ್ದಾರೆ.

ಕೆಜಿಎಫ್‌ ಸಿನಿಮಾದ ಮೂಲಕ ದೇಶ-ವಿದೇಶದಲ್ಲಿ ಖ್ಯಾತಿ ಪಡೆದಿರುವ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಶೂಟಿಂಗ್‌ ಆರಂಭಕ್ಕೂ ಮುನ್ನ ನಟ ಯಶ್‌ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಯಶ್‌ ಅವರು ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಮಣ್ಣಿನ ಹರಕೆಯ ಕ್ಷೇತ್ರವೆಂದು ಜನಪ್ರಿಯತೆ ಪಡೆದಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ಅಲ್ಲಿದ್ದರು. 
icon

(1 / 7)

ನಟ ದರ್ಶನ್‌ ಅವರು ಪತ್ನಿ ರಾಧಿಕಾ ಪಂಡಿತ್‌, ಮಕ್ಕಳಾದ ಐರಾ ಮತ್ತು ಮಗ ಯರ್ಥರ್ವ್‌ ಜತೆ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಇವರೊಂದಿಗೆ ಟಾಕ್ಸಿಕ್‌ ಸಿನಿಮಾದ ವೆಂಟಕ್‌ ಕೂಡ ಇದ್ದಾರೆ. ಮೊದಲು ಸುರ್ಯ ದೇಗುಲಕ್ಕೆ ಭೇಟಿ ನೀಡಿದ ಯಶ್‌ ದಂಪತಿ ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. 
icon

(2 / 7)

ಯಶ್‌ ಅವರು ಮೊದಲು  ಸುರ್ಯ ರುದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಇದೇ ಸಮಯದಲ್ಲಿ ಇವರು ಪಂಚೆ ಉಟ್ಟು ಟ್ರೆಡಿಷನಲ್‌ ಲುಕ್‌ನಲ್ಲಿ ದೇವರ ದರ್ಶನ ಮಾಡಿದ್ದಾರೆ. ಪಂಚೆ ಉಟ್ಟು ಮಂಗಳೂರು ವಿಮಾನ ನಿಲ್ದಾಣದಿಂದ ಇವರು ಹೊರಬರುತ್ತಿರುವ ದೃಶ್ಯದ ವಿಡಿಯೋಗಳು ವೈರಲ್‌ ಆಗಿವೆ. ಶೂಟಿಂಗ್‌ ಶುರು ಮಾಡುವ ಮುನ್ನ ವಿವಿಧ ದೇಗುಲಗಳಿಗೆ ಯಶ್‌ ಭೇಟಿ ನೀಡುತ್ತಿದ್ದಾರೆ. 
icon

(3 / 7)

ಇದೇ ಸಮಯದಲ್ಲಿ ಇವರು ಪಂಚೆ ಉಟ್ಟು ಟ್ರೆಡಿಷನಲ್‌ ಲುಕ್‌ನಲ್ಲಿ ದೇವರ ದರ್ಶನ ಮಾಡಿದ್ದಾರೆ. ಪಂಚೆ ಉಟ್ಟು ಮಂಗಳೂರು ವಿಮಾನ ನಿಲ್ದಾಣದಿಂದ ಇವರು ಹೊರಬರುತ್ತಿರುವ ದೃಶ್ಯದ ವಿಡಿಯೋಗಳು ವೈರಲ್‌ ಆಗಿವೆ.  
icon

(4 / 7)

ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ಗಾಗಿ ಈ ವೀಕೆಂಡ್‌ನಿಂದ ಯಶ್‌ ಬಿಝಿಯಾಗಲಿದ್ದಾರೆ. ಯಶ್‌ ಹಿಂದಿಯ ರಾಮಾಯಣ ಸಿನಿಮಾದಲ್ಲಿ ರಾವಣನಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಿದೆ. 
icon

(5 / 7)

ಉಜಿರೆಯಲ್ಲಿರುವ  ಸುರ್ಯ ಸದಾಶಿವ ರುದ್ರ ದೇಗುಲವು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಮಣ್ಣಿನ ಕಾಣಿಕೆ ನೀಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದೇಗುಲಕ್ಕೆ ಪ್ರತಿದಿನ ಸಾಕಷ್ಟು ಭಕ್ತರು ಭೇಟಿ ನೀಡುತ್ತಿದ್ದಾರೆ. ಉಜಿರೆ ಸಮೀಪದ ಸುರ್ಯ ಎಂಬಲ್ಲಿ ಈ ದೇಗುಲವಿದೆ. 
icon

(6 / 7)

ಉಜಿರೆಯಲ್ಲಿರುವ  ಸುರ್ಯ ಸದಾಶಿವ ರುದ್ರ ದೇಗುಲವು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ಮಣ್ಣಿನ ಕಾಣಿಕೆ ನೀಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದೇಗುಲಕ್ಕೆ ಪ್ರತಿದಿನ ಸಾಕಷ್ಟು ಭಕ್ತರು ಭೇಟಿ ನೀಡುತ್ತಿದ್ದಾರೆ. ಉಜಿರೆ ಸಮೀಪದ ಸುರ್ಯ ಎಂಬಲ್ಲಿ ಈ ದೇಗುಲವಿದೆ. (Image: internet)

ಟಾಕ್ಸಿಕ್‌ ಸಿನಿಮಾವನ್ನು ಗೀತು ಮೋಹನ್‌ದಾಸ್‌ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವನ್ನು 2025ರ ಬೇಸಿಗೆಯಲ್ಲಿ ಟಾಕ್ಸಿಕ್‌ ರಿಲೀಸ್‌ ಮಾಡುವ ಪ್ಲ್ಯಾನ್‌ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಸಿನಿಮಾದ ಶೂಟಿಂಗ್‌ಗಾಗಿ ಬೆಂಗಳೂರಿನಲ್ಲಿ ಬೃಹತ್‌ ಸೆಟ್‌ ನಿರ್ಮಿಸಲಾಗಿದೆ. 
icon

(7 / 7)

ಇತರ ಗ್ಯಾಲರಿಗಳು