ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಆರ್‌ಕೆ ರೋಜಾ ಭೇಟಿ; ಚಿತ್ತೂರು ನಗರಿಯಲ್ಲಿ ಗೆಲುವಿಗೆ ಪ್ರಾರ್ಥಿಸಿದ ಗಡಿಬಿಡಿ ಗಂಡ ನಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಆರ್‌ಕೆ ರೋಜಾ ಭೇಟಿ; ಚಿತ್ತೂರು ನಗರಿಯಲ್ಲಿ ಗೆಲುವಿಗೆ ಪ್ರಾರ್ಥಿಸಿದ ಗಡಿಬಿಡಿ ಗಂಡ ನಟಿ

ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಆರ್‌ಕೆ ರೋಜಾ ಭೇಟಿ; ಚಿತ್ತೂರು ನಗರಿಯಲ್ಲಿ ಗೆಲುವಿಗೆ ಪ್ರಾರ್ಥಿಸಿದ ಗಡಿಬಿಡಿ ಗಂಡ ನಟಿ

  • ಕನ್ನಡದಲ್ಲಿ ಗಡಿಬಿಡಿ ಗಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ತಮಿಳು, ತೆಲುಗು ನಟಿ, ಪ್ರಸ್ತುತ ರಾಜಕಾರಣಿಯಾಗಿರುವ ಆರ್‌ಕೆ ರೋಜಾ ಇಂದು ತಮಿಳುನಾಡಿನ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇವರು ವೈಎಸ್‌ಆರ್‌ಸಿಪಿ ಪಕ್ಷದ ವತಿಯಿಂದ ಚಿತ್ತೂರು ನಗರಿಯಲ್ಲಿ ಸ್ಪರ್ಧಿಸಿದ್ದಾರೆ.

ಕನ್ನಡದಲ್ಲಿ ಗಡಿಬಿಡಿ ಗಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ತಮಿಳು, ತೆಲುಗು ನಟಿ, ಪ್ರಸ್ತುತ ರಾಜಕಾರಣಿಯಾಗಿರುವ ಆರ್‌ಕೆ ರೋಜಾ ಇಂದು ತಮಿಳುನಾಡಿನ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇವರು ವೈಎಸ್‌ಆರ್‌ಸಿಪಿ ಪಕ್ಷದ ವತಿಯಿಂದ ಚಿತ್ತೂರು ನಗರಿಯಲ್ಲಿ ಸ್ಪರ್ಧಿಸಿದ್ದಾರೆ.
icon

(1 / 9)

ಆರ್‌ಕೆ ರೋಜಾ ಸೆಲ್ವಮನಿ ಅವರು ಮಾಜಿ ನಟಿ ಮತ್ತು ರಾಜಕಾರಣಿ. ಆಂಧ್ರಪ್ರದೇಶದ ಪ್ರವಾಸೋದ್ಯಮ, ಸಂಸ್ಕೃತಿ, ಯುವ ಸಬಲೀಕರಣ ಇಲಾಖೆಯ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
icon

(2 / 9)

1990ರಿಂದ 2000ರವರೆಗೆ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. 1992ರ ಚೆಂಬೂರುತಿ, 1992ರ ಸರ್ಪಯಾಗಂ, 1994ರ ಅನ್ನಾ, 1998ರ ಉಣ್ಣಿದಾತಿಲ್‌ ಎನ್ನೈ ಕಾಡುಥೆನ್‌ ಮುಂತಾದ ಬ್ಲಾಕ್‌ಬಸ್ಟರ್‌ ಸಿನಿಮಾಆಗಳಲ್ಲಿ ನಟಿಸಿದ್ದಾರೆ.
icon

(3 / 9)

ಇವರು ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಗಡಿಬಿಡಿ ಗಂಡ ಸಿನಿಮಾದಲ್ಲಿ ನೀಲಾಂಬರಿಯಾಗಿ, ಕಲಾವಿದ ಸಿನಿಮಾದಲ್ಲಿ ಕವನ, ಪ್ರೇಮೋತ್ಸವದಲ್ಲಿ ಭಾವನ ಪಾತ್ರದಲ್ಲಿ ನಟಿಸಿದ್ದಾರೆ.
icon

(4 / 9)

2000ನೇ ಇಸವಿಯಲ್ಲಿ ಕನ್ನಡದ ಇಂಡಿಪೆಂಡೆನ್ಸ್‌ ಡೇ, ಭಾರತ ನಾರಿ ಸಿನಿಮಾಗಳಲ್ಲಿ ನಟಿಸಿದ್ದರು.
icon

(5 / 9)

2001ರಲ್ಲಿ ಗ್ರಾಮ ದೇವತೆ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಸುಂದರಕಾಂಡದಲ್ಲೂ ನಟಿಸಿದ್ದರು. ಪರ್ವ, ಮೌರ್ಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  
icon

(6 / 9)

ಇವರ ಅಮೋಘ ನಟನೆಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ. 
icon

(7 / 9)

2022ರಲ್ಲಿ ಇವರು ಆಂಧ್ರ ಪ್ರದೇಶದ ಪ್ರವಾಸೋದ್ಯಮ ಮತ್ತು ಯುವ ಸಬಲೀಕರಣ ಇಲಾಖೆಯ ಮಂತ್ರಿಯಾಗಿ ಆಯ್ಕೆಯಾದರು. 
icon

(8 / 9)

ಇವರು ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಕೂಚುಪುಡಿ ನೃತ್ಯ ಕಲಿತ ಇವರು ಅದ್ಭುತವಾಗಿ ಡ್ಯಾನ್ಸ್‌ ಮಾಡುತ್ತಿದ್ದರು. ಬಳಿಕ ಚಿತ್ರರಂಗ ಪ್ರವೇಶಿಸಿದರು. 
icon

(9 / 9)

ಇತರ ಗ್ಯಾಲರಿಗಳು