Bhoomi Shetty: ಕಿನ್ನಾರಿ ನಟಿ ಭೂಮಿ ಶೆಟ್ಟಿ ಹೊಸ ಹೇರ್‌ಸ್ಟೈಲ್ ನೋಡಿ ಚಂಡಮುಂಡ, ಉಗಾಂಡ ಅಂದ್ರು ಫ್ಯಾನ್ಸ್
- Bhoomika Shetty: ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಎಲ್ಲರ ಗಮನ ಸೆಳೆದ ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಇತ್ತೀಚೆಗೆ ಹೊಸ ಹೇರ್‌ಸ್ಟೈಲ್ ಮಾಡಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಹೊಸ ಸ್ಟೈಲ್‌ಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.
- Bhoomika Shetty: ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಎಲ್ಲರ ಗಮನ ಸೆಳೆದ ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಇತ್ತೀಚೆಗೆ ಹೊಸ ಹೇರ್‌ಸ್ಟೈಲ್ ಮಾಡಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಹೊಸ ಸ್ಟೈಲ್‌ಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.
(1 / 11)
ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಎಲ್ಲರ ಗಮನ ಸೆಳೆದ ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಇತ್ತೀಚೆಗೆ ಹೊಸ ಹೇರ್‌ಸ್ಟೈಲ್ ಮಾಡಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಈ ಹೊಸ ಸ್ಟೈಲ್‌ಗೆ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.
(2 / 11)
ಕಿನ್ನರಿ ಸೀರಿಯಲ್ ನೋಡಿದವರಿಗೆ ಭೂಮಿ ಶೆಟ್ಟಿ ಅಚ್ಚುಮೆಚ್ಚಿನ ನಟಿ. ತನಗೆ ದೊರಕಿದ ಕೆಲವು ಚಿತ್ರಗಳಲ್ಲೂ ಅತ್ಯುತ್ತಮವಾಗಿ ಅಭಿನಯಿಸಿದ ಪ್ರತಿಭಾನ್ವಿತೆ ಇವರು. ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಸಿದಾಗಲೂ ತನ್ನದೇ ಸ್ಟೈಲ್, ಸಹಜ ವರ್ತನೆಯಿಂದ ಸಾಕಷ್ಟು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
(3 / 11)
ಭೂಮಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೂ ಸದಾ ಆಕ್ಟಿವ್ ಆಗಿರುತ್ತಾರೆ. ಹೊಸ ಹೊಸ ಫೋಟೋಗಳು, ವಿಡಿಯೋಗಳನ್ನು ಅಪ್ಲೋಡ್ ಮಾಡಿ ತಮ್ಮ ಅಭಿಮಾನಿಗಳನ್ನು ಖುಷಿಪಡಿಸುತ್ತಾರೆ. ಆದರೆ, ಇತ್ತೀಚೆಗೆ ಇವರು ಅಪ್ಲೋಡ್ ಮಾಡಿರುವ ವಿಡಿಯೋದ ಕುರಿತು ನೆಟ್ಟಿಗರು ತೋಚಿದಂತೆ ಕಾಮೆಂಟ್ ಮಾಡಿದ್ದಾರೆ.
(4 / 11)
ಭೂಮಿ ಶೆಟ್ಟಿ ಬ್ರೈಡ್ಸ್ ಹೆಸರಿನ ಹೊಸ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಇದು ದಕ್ಷಿಣ ಆಫ್ರಿಕಾ ಮೂಲದ ಕೇಶವಿನ್ಯಾಸವಂತೆ. ಇಂತಹ ಕೇಶ ವಿನ್ಯಾಸ ಮಾಡಿಕೊಳ್ಳಲು 5-8 ಗಂಟೆ ಬೇಕಂತೆ.
(5 / 11)
ಸದ್ಯ ಈ ಹೇರ್‌ಸ್ಟೈಲ್‌ನಲ್ಲಿಯೇ ಇವರು ಮೋಟರ್ ಬೈಕ್‌ನಲ್ಲಿ ಸುತ್ತಾಡುವ, ಪೋಸ್ ನೀಡುವ ಸಖತ್ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಇದು ಆಲ್ಬಂ ಸಾಂಗಾ? ಸಿನಿಮಾವಾ? ಜಾಹೀರಾತ? ಸದ್ಯ ಮಾಹಿತಿ ಲಭ್ಯವಿಲ್ಲ. ಈ ವಿಡಿಯೋದಲ್ಲಿ ಕಮಿಂಗ್ ಸೂನ್ ಎಂದಿದೆ.
(6 / 11)
ಭೂಮಿ ಶೆಟ್ಟಿ ಹೊಸ ಹೇರ್ ಸ್ಟೈಲ್ ನೋಡಲು ಅದ್ಭುತವಾಗಿದೆ. ಇದರಲ್ಲಿ ಶೆಟ್ರು ಬೇರೆಯದ್ದೇ ಲುಕ್‌ನಲ್ಲಿ ಕಾಣಿಸುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆದರೆ, ಇವರ ಈ ಹೊಸ ಸ್ಟೈಲ್‌ಗೆ ಕೆಲವು ನೆಟ್ಟಿಗರು ಮಾತ್ರ ಕೊಂಕು ನುಡಿದಿದ್ದಾರೆ.
(7 / 11)
"ಎಂತ ಚೆಂದ ಅಂತ ಈ ವೇಷ ಮಾಡ್ಕೊಂಡಿದಿರಾ... ಯಕ್ಷಗಾನದಲ್ಲಿ ಚಂಡ ಮುಂಡರ ವೇಷ ಸೇಮ್ ಹೀಗೆ ಇರುತ್ತೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
(8 / 11)
"ಆಫ್ರಿಕಾದಲ್ಲಿ ಶೀಲಾ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಪೈರೆಟ್ಸ್ ಆಫ್ ಕ್ಯಾರಿಬಿಯನ್" "ಉಗಾಂಡ" "ನೈಜೀರಿಯಾ" ಎಂದೆಲ್ಲ ಒಂದಿಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
(9 / 11)
ಇದೇ ಸಮಯದಲ್ಲಿ ಸಾಕಷ್ಟು ಜನರು ಇವರ ಹೊಸ ಕೇಶವಿನ್ಯಾಸವನ್ನು ಹಾಡಿ ಹೊಗಳಿದ್ದಾರೆ. "ನೀವು ತುಂಬಾ ಅಂದವಾಗಿ ಕಾಣಿಸುತ್ತೀರಿ" "ಕ್ಯೂಟ್ ಆಗಿ ಕಾಣಿಸ್ತಾ ಇದ್ದೀರಿ" "ಬ್ರೈಡ್ಸ್ ಸ್ಟೈಲ್ ಚೆನ್ನಾಗಿದೆ" ಎಂದೆಲ್ಲ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(10 / 11)
ಕುಂದಾಪುರದ ಚೆಲುವೆ ಭೂಮಿ ಶೆಟ್ಟಿ ಅವರು 2021ರಲ್ಲಿ ಇಕ್ಕಟ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಶರತ್ತುಲು ವರ್ತಿಷ್ಠೈ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.
ಇತರ ಗ್ಯಾಲರಿಗಳು