ಕಿತ್ತಳೆ ಸೀರೆ vs ಸ್ಲೀವ್‌ಲೆಸ್ ಬಿಳಿ ಟಾಪ್: ಯಾವ ಉಡುಗೆಯಲ್ಲಿ ಚೈತ್ರಾ ಜೆ ಆಚಾರ್ ಚಂದ ಕಾಣ್ತಾರೆ ಹೇಳಿ, ಇಲ್ಲಿವೆ 15 ಫೋಟೋಗಳು
- Chaitra J Achar in Saree: ಚೈತ್ರಾ ಜೆ ಆಚಾರ್ ಎಂದಾಕ್ಷಣ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಬ್ಲಿಂಕ್ ಮುಂತಾದ ಸಿನಿಮಾಗಳು ನೆನಪಿಗೆ ಬರಬಹುದು. ಜತೆಗೆ , ಒಂದಿಷ್ಟು ಹಾಟ್ ಫೋಟೋಗಳೂ ನೆನಪಿಗೆ ಬರಬಹುದು. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಗಾಯಕಿ ಚೈತ್ರಾ ಜೆ ಆಚಾರ್ ಬೋಲ್ಡ್ ಉಡುಗೆ ಮಾತ್ರವಲ್ಲದೆ ಸಾಂಪ್ರದಾಯಿಕ ಸೀರೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ.
- Chaitra J Achar in Saree: ಚೈತ್ರಾ ಜೆ ಆಚಾರ್ ಎಂದಾಕ್ಷಣ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಬ್ಲಿಂಕ್ ಮುಂತಾದ ಸಿನಿಮಾಗಳು ನೆನಪಿಗೆ ಬರಬಹುದು. ಜತೆಗೆ , ಒಂದಿಷ್ಟು ಹಾಟ್ ಫೋಟೋಗಳೂ ನೆನಪಿಗೆ ಬರಬಹುದು. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಗಾಯಕಿ ಚೈತ್ರಾ ಜೆ ಆಚಾರ್ ಬೋಲ್ಡ್ ಉಡುಗೆ ಮಾತ್ರವಲ್ಲದೆ ಸಾಂಪ್ರದಾಯಿಕ ಸೀರೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ.
(1 / 8)
ಇಂದು (ಜುಲೈ 30) ಚೈತ್ರಾ ಜೆ ಆಚಾರ್ ಕಿತ್ತಳೆ ಬಣ್ಣದ ಸೀರೆಯುಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರೂಪಾಂತರ ಸಿನಿಮಾದ ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಿನಂತೆ… ಎಂಬ ಹಾಡನ್ನೂ ಹಾಡಿರುವುದು ಕೂಡ ಇದೇ ಚೈತ್ರಾ ಜೆ ಆಚಾರ್.
(2 / 8)
ನಿನ್ನೆ (ಜುಲೈ 29) ಚೈತ್ರಾ ಜೆ ಆಚಾರ್ ಅವರು ಸ್ಲೀವ್ ಲೆಸ್ ಬಿಳಿ ಬಣ್ಣದ ಟಾಪ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ನಿನ್ನೆ ಟಾಪ್‌ನಲ್ಲಿ ನೋಡಿರುವ ಫ್ಯಾನ್ಸ್‌ಗೆ ಇಂದು ಸುಂದರ ಕಿತ್ತಳೆ ಸೀರೆಯಲ್ಲಿ ದರ್ಶನ ನೀಡಿದ್ದಾರೆ ಬ್ಲಿಂಕ್ ನಟಿ.
(3 / 8)
ಇವೆರಡು ಫೋಟೋಗಳಲ್ಲಿ ನಿಮಗೆ ಯಾವುದು ಚಂದ ಕಾಣಿಸುತ್ತದೆ? ಸೀರೆ ಪ್ರಿಯರಿಗೆ ವಾಹ್ ಚೈತ್ರಾ ಆರೇಂಜ್ ಸಾರಿಯಲ್ಲಿ ಎಷ್ಟು ಕ್ಯೂಟ್ ಆಗಿ ಕಾಣಿಸ್ತಾರೆ ಎಂದೆನಿಸಬಹುದು. ಇನ್ನೊಂದಿಷ್ಟು ಜನರು ಬಿಳಿ ಟಾಪ್‌ನಲ್ಲೇ ಚಂದ ಅನ್ನಬಹುದು.
(4 / 8)
ನಿರ್ದೇಶಕ ಶ್ರೀ ಗಣೇಶ್ ಅವರು ನಟ ಸಿದ್ಧಾರ್ಥ್ 40ನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ತಮಿಳು ಸಿನಿಮಾ ತಂಡಕ್ಕೆ ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್ ಸೇರ್ಪಡೆಯಾಗಿದ್ದಾರೆ. ಇದೇ ಸಮಯದಲ್ಲಿ ಆರ್ ಶರತ್ ಕುಮಾರ್, ದೇವಯಾನಿ, ಮೀತಾ ರಂಗನಾಥ್ ಕೂಡ ಈ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
(5 / 8)
ಚೈತ್ರಾ ಜೆ ಆಚಾರ್, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾ ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
(6 / 8)
ಚೈತ್ರಾ ಜೆ ಆಚಾರ್ ಅವರು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಟೋಬಿ, ಬ್ಲಿಂಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲೂ ಚೈತ್ರಾ ಜೆ ಆಚಾರ್ ನಟಿಸುತ್ತಿದ್ದಾರೆ.
(7 / 8)
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಇವರು ರಕ್ಷಿತ್ ಶೆಟ್ಟಿ ಜತೆ ನಟಿಸಿದ್ದರು. ನಾಯಕ ಮನುವಿನ ಪ್ರೇಯಸಿಯಾಗಿ ನಟಿಸಿದ್ದರು. ಚೈತ್ರಾ ಜೆ ಆಚಾರ್ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
ಇತರ ಗ್ಯಾಲರಿಗಳು