ಈಜುಕೊಳದಲ್ಲಿ ಗೂಗ್ಲಿ ನಟಿ ಕೃತಿ ಕರಬಂಧ ಚೆಲ್ಲಾಟ ವೈರಲ್; ಸೂಪರ್ ರಂಗ ಬೆಡಗಿಯ ಚಿತ್ರಲಹರಿ
Kriti Kharbanda Hot Photos: ಕನ್ನಡ, ತೆಲುಗು, ಹಿಂದಿ ಸಿನಿಮಾ ನಟಿ ಕೃತಿ ಕರಬಂಧ ಅವರು ಹೊಸ ವರ್ಷವನ್ನು ಜಾಲಿಯಾಗಿ ಕಳೆದಿದ್ದಾರೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮೈಮರೆತಂತೆ ಉಲ್ಲಾಸದಿಂದ ಈಜುತ್ತಿರುವ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
(1 / 5)
ಕೃತಿ ಕರಬಂಧ ಅವರು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಜುಕೊಳದಲ್ಲಿ ಉಲ್ಲಾಸದಿಂದ ಈಜುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದಾರೆ.
(2 / 5)
1990ರ ಅಕ್ಟೋಬರ್ 29ರಂದು ಜನಿಸಿದ ಕೃತಿ ಕರಬಂಧ ಅವರು ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿದಾರೆ. ಮಾಡೆಲ್ ಆಗಿದ್ದ ಅವರು ತೆಲುಗು ಬೋನಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇದಾದ ಬಳಿಕ 2010ರಲ್ಲಿ ಚಿರು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು.
(3 / 5)
ಆರಂಭದಲ್ಲಿ ಇವರ ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ. 2013ರಲ್ಲಿ ಕನ್ನಡದ ಗೂಗ್ಲಿ ಸಿನಿಮಾ ಯಶಸ್ಸು ಪಡೆಯಿತು. ಈ ಚಿತ್ರದಲ್ಲಿ ಯಶ್ ಜತೆ ಮೆಡಿಕಲ್ ಸ್ಟುಡೆಂಟ್ ಆಗಿ ಈಕೆ ನಟಿಸಿದ್ದು ನಿಮಗೆ ನೆನಪಿರಬಹುದು. ಈ ಚಿತ್ರದ ನಟನೆಗಾಗಿ ಸೈಮಾ ಪ್ರಶಸ್ತಿ ಪಡೆದಿದ್ದರು.
(4 / 5)
ಇದಾದ ಬಳಿಕ 2014ರಲ್ಲಿ ಇವರು ನಟಿಸಿದದ ಸೂಪರ್ ರಂಗಾ ಸಿನಿಮಾವು ಸೈಮಾ ಕ್ರಿಟಿಕ್ಸ್ ಅವಾರ್ಡ್ ಪಡೆದಿತ್ತು. ಬ್ರೂಸ್ ಲೀ: ದಿ ಫೈಟರ್ ಸಿನಿಮಾದಲ್ಲಿ ಇವರು ಐಎಎಸ್ ಅಧಿಕಾರಿಯಾಗಿ ನಟಿಸಿದ್ದರು. ಈ ತೆಲುಗು ಚಿತ್ರದ ನಟನೆಗಾಗಿ ಸೈಮಾ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿ ಪಡೆದರು.
(5 / 5)
ತಿರುಪತಿ ಎಕ್ಸ್‌ಪ್ರೆಸ್, ಬೆಳ್ಳಿ ಭೂತ್, ಮಿಂಚಾಗಿ ನೀ ಬರಲು ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜ್: ರಿಬೂಟ್ ಚಿತ್ರದ ಮೂಲಕ 2016ರಲ್ಲಿ ಇವರು ಹಿಂದಿ ಸಿನಿಮಾ ರಂಗ ಪ್ರವೇಶಿಸಿದರು. ಯಾಮ್ಲಾ ಪಾಗ್ಲಾ ದೀವಾನ: ಫಿರ್ ಸೇ, ಹೌಸ್‌ಫುಲ್ 4, ತೈಸ್ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ತೈಸ್ ಚಿತ್ರದ ನಟನೆಗಾಗಿ ಒಟಿಟಿ ಐಟಿಎ ಅವಾರ್ಡ್ ಪಡೆದಿದ್ದರು.
ಇತರ ಗ್ಯಾಲರಿಗಳು