Madhavi: ಹಿರಿಯ ಮಗಳು ಟಿಫಾನಿ ಗೌರಿಕಾಗೆ ತಮ್ಮ ಕಂಪನಿಯ ಉಪಾಧ್ಯಕ್ಷೆ ಜವಾಬ್ದಾರಿ ವಹಿಸಿದ ಬಹುಭಾಷಾ ನಟಿ ಮಾಧವಿ; ಶುಭ ಕೋರಿದ ಅಭಿಮಾನಿಗಳು
ಹಿರಿಯ ನಟಿ ಮಾಧವಿ ಸಿನಿಮಾಗಳಿಂದ ದೂರ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ. ತಮ್ಮ ಹಾಗೂ ಕುಟುಂಬದ ಫೋಟೋ, ವಿಡಿಯೋಗಳನ್ನು ಅಬಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
(1 / 15)
ಇತ್ತೀಚೆಗೆ ಮಾಧವಿ ತಮ್ಮ ಎರಡನೇ ಮಗಳ ಸಾಧನೆ ಕೊಂಡಾಡಿ ಪೋಸ್ಟ್ ಹಂಚಿಕೊಂಡಿದ್ದರು. ಮೂರು ವರ್ಷಗಳ ಕಾಲೇಜು ಶಿಕ್ಷಣ ಪೂರೈಸಿದ್ದಕ್ಕೆ ಮಗಳಿಗೆ ಕ್ರಂಗಾಜುಲೇಷನ್ಸ್ ಹೇಳಿದ್ದರು. (PC: Facebook)
(2 / 15)
ಇದೀಗ ಮಾಧವಿ ತಮ್ಮ ಮೊದಲ ಮಗಳಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ಧಾರೆ. ಈ ವಿಚಾರವನ್ನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(3 / 15)
ಸಿನಿಮಾಗಳಲ್ಲಿ ಬೇಡಿಕೆ ನಟಿಯಾಗಿರುವಾಗಲೇ ಮಾಧವಿ ತಮ್ಮ ಆಧ್ಯಾತ್ಮಿಕ ಗುರುಗಳಾದ ಗುರು ಸ್ವಾಮಿ ರಾಮ ಅವರು ನೋಡಿದ ರಾಲ್ಫ್ ಶರ್ಮಾ ಅವರನ್ನು ಮದುವೆ ಆದರು.
(4 / 15)
ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳು ಟಿಫಾನಿ ಗೌರಿಕಾ, ಎರಡನೇ ಪುತ್ರಿ ಪ್ರಿಸೆಲ್ಲಾ ಅರ್ಪಣ, ಮೂರನೇ ಮಗಳು ಎವ್ಲಿನ್ ದಿವ್ಯಾ.
(5 / 15)
ಮಾಧವಿ ಹಾಗೂ ರಾಲ್ಫ್ ಶರ್ಮಾ ಮೊದಲ ಮಗಳು ಟಿಫಾನಿ ಗೌರಿಕಾಗೆ ಈಗ 25 ವರ್ಷ ವಯಸ್ಸು. ಅಮ್ಮನಂತೆ ಮೂವರು ಹೆಣ್ಣು ಮಕ್ಕಳು ಕೂಡಾ ನೋಡಲು ಬಹಳ ಮುದ್ದಾಗಿದ್ದಾರೆ.
(6 / 15)
ವಿದ್ಯಾಭ್ಯಾಸ ಮುಗಿಸಿರುವ ಮೊದಲ ಮಗಳು ಗೌರಿಕಾಗೆ ಮಾಧವಿ ತಮ್ಮ ಕಂಒನಿಯ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದಾರೆ.
(7 / 15)
ರಾಲ್ಫ್ ಶರ್ಮಾ ಅಮೆರಿಕದ ನ್ಯೂಯಾರ್ಕಿನಲ್ಲಿ ಒಂದು ಫಾರ್ಮಾಸ್ಯುಟಿಕಲ್ ಕಂಪನಿ ಹೊಂದಿದ್ದು, ಮದುವೆ ಆದಾಗಿನಿಂದ ಪತಿಯ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
(8 / 15)
ಇದೀಗ ಮಾಧವಿ ತಮ್ಮ ಹಿರಿಯ ಮಗಳಿಗೆ ಕಂಪನಿಯ ಉಪಾಧ್ಯಕ್ಷೆ ಸ್ಥಾನ ವಹಿಸಿಕೊಟ್ಟಿದ್ದಾರೆ. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
(9 / 15)
''ನಮ್ಮ ಫಾರ್ಮಾಸ್ಯುಟಿಕಲ್ ಕಂಪನಿಯ ಉಪಾಧ್ಯಕ್ಷೆಯನ್ನು ನಿಮಗೆ ಪರಿಚಯ ಮಾಡಲು ಇಷ್ಟಪಡುತ್ತೇನೆ. ಇವಳು ನಮ್ಮ ಮೊದಲ ಮಗಳು ಟಿಫಾನಿ ಗೌರಿಕಾ, ನಿನ್ನ ತಂದೆ, ಸಹೋದರಿಯರಾದ ಎವ್ಲಿನ್, ಪ್ರಿಸಿಲ್ಲಾ ಹಾಗೂ ನಾನು ನಿನ್ನ ಯಶಸ್ಸು ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುತ್ತೇವೆ'' ಎಂದು ಮಾಧವಿ ಬರೆದುಕೊಂಡಿದ್ದಾರೆ.
(10 / 15)
ವೆಲ್ಲೆಸ್ಸಿ ಕಾಲೇಜಿನಲ್ಲಿ ಪದವಿ ಪಡೆದಿರುವ ಟಿಫಾನಿ ಗೌರಿಕಾ ಬಹಳ ಜಾಣೆ, ಆದ್ದರಿಂದಲೇ ಇಷ್ಟು ಚಿಕ್ಕ ವಯಸ್ಸಿಗೆ ಮಾಧವಿ ಮಗಳಿಗೆ ತಮ್ಮ ಕಂಪನಿಯ ಜವಾಬ್ದಾರಿ ವಹಿಸಿದ್ದಾರೆ.
(11 / 15)
ಟಿಫ್ನಿ ಗೌರಿಗಾ ಸಿಂಗರ್ ಕೂಡಾ. ವೆಸ್ಟರ್ನ್ ಮ್ಯೂಸಿಕ್ ಕಲಿತಿರುವ ಟಿಫಾನಿ ಅನೇಕ ಕಾರ್ಯಕ್ರಮಗಳಲ್ಲಿ ಕೂಡಾ ಹಾಡಿದ್ದಾರೆ. ಮಾಧವಿ ತಮ್ಮ ಮಗಳು ಹಾಡುತ್ತಿರುವ ವಿಡಿಯೋವನ್ನು ಕೂಡಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
(12 / 15)
25ನೇ ವಯಸ್ಸಿಗೆ ಕಂಪನಿಯ ಜವಾಬ್ದಾರಿ ವಹಿಸಿಕೊಂಡಿರುವ ಟಿಫಾನಿಗೆ ನೆಟಿಜನ್ಸ್ ಕಂಗ್ರಾಜುಲೇಷನ್ಸ್ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ವಿದೇಶದಲ್ಲಿ ನೆಲೆಸುವ ಅನೇಕ ಭಾರತೀಯರು ನಮ್ಮ ಸಂಸ್ಕೃತಿಯನ್ನು ಮರೆಯುತ್ತಾರೆ. ಆದರೆ ಮಾಧವಿ ಆ ರೀತಿ ಅಲ್ಲ.
(13 / 15)
ಸ್ಟಾರ್ ನಟಿ ಆದರೂ ಮಾಧವಿ ಎಂದಿಗೂ ಭಾರತೀಯ ಸಂಸ್ಕೃತಿಯನ್ನು ಮರೆತವರಲ್ಲ. ವಿದೇಶದಲ್ಲಿದ್ದರೂ ಅಲ್ಲಿನ ಸಂಸ್ಕೃತಿ ಜೊತೆಗೆ ಭಾರತದ ಸಂಪ್ರದಾಯವನ್ನು ತಪ್ಪದೆ ಪಾಲಿಸುತ್ತಾ ಬಂದಿದ್ದಾರೆ. ಮಕ್ಕಳನ್ನು ಅದೇ ರೀತಿ ಬೆಳೆಸಿದ್ದಾರೆ.
(14 / 15)
ಮಾಧವಿ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. 1981ರಲ್ಲಿ ತೆರೆ ಕಂಡ 'ಘರ್ಜನೆ' ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಬಂದರು.
ಇತರ ಗ್ಯಾಲರಿಗಳು