Darling Movie: ನಭಾ ನಟೇಶ್ ಡಾರ್ಲಿಂಗ್ ಲುಕ್‌ಗೆ ಫ್ಯಾನ್ಸ್ ಫಿದಾ; ಜುಲೈ 19ರಂದು ರಿಲೀಸ್ ಆಗಲಿದೆ ವಜ್ರಕಾಯ ನಟಿಯ ರೊಮ್ಯಾಂಟಿಕ್ ಸಿನಿಮಾ
- Nabha Natesh Darling Movie: ನಟಿ ನಭಾ ನಟೇಶ್ ಹೊಸ ಫೋಟೋಗಳ ಗೊಂಚಲನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಭಾ ನಟೇಶ್ ನಟನೆಯ ಡಾರ್ಲಿಂಗ್ ಸಿನಿಮಾ ಇದೇ ಜುಲೈ 19ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಮೋಷನ್ ಲುಕ್ ಇದಾಗಿದೆ ಎಂದು ನಭಾ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗಿವೆ.

(1 / 8)
ಡಾರ್ಲಿಂಗ್ ಪ್ರಮೋಷನ್ ಲುಕ್ 1 ಎಂಬ ಶೀರ್ಷಿಕೆಯಡಿಯಲ್ಲಿ ನಭಾ ನಟೇಶ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಡಾರ್ಲಿಂಗ್ ಸಿನಿಮಾ ರಿಲೀಸ್ ಆಗುವ ಜುಲೈ 19ರವರೆಗೆ ಇವರು ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ರಿಲೀಸ್ ಮಾಡುವ ಸೂಚನೆ ನೀಡಿದ್ದಾರೆ.
(2 / 8)
ಇವರ ಡಾರ್ಲಿಂಗ್ ಲುಕ್‌ನ ಫೋಟೋಗೆ ಅಭಿಮಾನಿಗಳು ವಾಹ್ ಎಂದಿದ್ದಾರೆ. ನಿಜಕ್ಕೂ ನೀವು ಡಾರ್ಲಿಂಗ್ ರೀತಿ ಕಾಣಿಸುವಿರಿ ಎಂದಿದ್ದಾರೆ ಫ್ಯಾನ್ಸ್. ಉಳಿದಂತೆ, ಇವರ ಫೋಟೋಗಳಿಗೆ ಹಾಟ್, ಕ್ಯೂಟ್, ಲವ್ ಕಾಮೆಂಟ್‌ಗಳು ಸಾಕಷ್ಟು ಬಂದಿವೆ.
(4 / 8)
ವಜ್ರಕಾಯ ಸಿನಿಮಾದಲ್ಲಿ ಪಾರ್ವತಿಯಾಗಿ ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಲೀ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದರು. ಸಾಹೇಬ ಸಿನಿಮಾದಲ್ಲಿ "ಯಾರೇ ನೀನು ರೋಜಾ ಹೂವೇ" ಹಾಡಿಗೆ ವಿಶೇಷ ಪಾತ್ರದಲ್ಲಿ ಹೆಜ್ಜೆ ಹಾಕಿದ್ದರು.
(5 / 8)
ಈ ಮೂರು ಕನ್ನಡ ಚಿತ್ರಗಳ ಬಳಿಕ ನಭಾ ನಟೇಶ್ ಟಾಲಿವುಡ್‌ಗೆ ನೆಗೆದಿದ್ದರು. ನಾನು ದೊಚ್ಚುಕುಂಡವತೆ, ಅಘರೊ, ಐಸ್ಮಾರ್ಟ್ ಶಂಕರ್, ಡಿಸ್ಕೊ ರಾಜಾ, ಸೋಕು ಬ್ರತುಕೆ ಸೋ ಬೆಟರ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.
(6 / 8)
ಅಲ್ಲುಡು ಅಧೂರ್ಸ್, ಮೇಸ್ಟ್ರೋ ಎಂಬ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಡಾರ್ಲಿಂಗ್ ಸಿನಿಮಾ ಇದೇ ಜುಲೈ 19ರಂದು ಬಿಡುಗಡೆಯಾಗಲಿದೆ.
(7 / 8)
ನಭಾ ನಟೇಶ್ ಕರ್ನಾಟಕದ ಶೃಂಗೇರಿ ಮೂಲದವರು. ಉಡುಪಿಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಇತರ ಗ್ಯಾಲರಿಗಳು