ದರ್ಶನ್ ಜತೆ 10 ವರ್ಷದ ರಿಲೇಷನ್‌ಶಿಪ್; ವಿಡಿಯೋ ರಿಲೀಸ್ ಮಾಡಿದ ಪ್ರೀತಿ ಕಿತಾಬು ನಟಿ ಪವಿತ್ರಾ ಗೌಡ
- Challenging star Darshan and Pavithra Gowda: ಕಾಟೇರ ಎಂಬ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ನಟಿ ಕಂ ಮಾಡೆಲ್ ಪವಿತ್ರಾ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
- Challenging star Darshan and Pavithra Gowda: ಕಾಟೇರ ಎಂಬ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ನಟಿ ಕಂ ಮಾಡೆಲ್ ಪವಿತ್ರಾ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
(1 / 10)
ದರ್ಶನ್ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ನಟಿ ಕಂ ಮಾಡೆಲ್ ಪವಿತ್ರಾ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ, ಫಾರ್‌ಎವರ್ ಟು ಗೋ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
(2 / 10)
ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ, ಫಾರ್‌ಎವರ್ ಟು ಗೋ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ಒಂದು ವಿಡಿಯೋ ರಚಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
(3 / 10)
"ಒಂದು ದಶಕವಾಗಿದೆ. ಪಾರೆವರ್ ಟು ಗೋ" ಎಂದು ಎರಡು ಕಪ್ಪು ಲವ್ ಇಮೋಜಿಯನ್ನು ಹಾಕಿದ್ದಾರೆ. ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ. ಧನ್ಯವಾದಗಳು ಎಂದು ನಟಿ ಪವಿತ್ರಾ ಗೌಡ ಪೋಸ್ಟ್ ಮಾಡಿದ್ದಾರೆ.
(4 / 10)
ದರ್ಶನ್ ಮತ್ತು ಪವಿತ್ರಾಗೌಡ ಜತೆಗಿರುವ ಹಲವು ಫೋಟೋಗಳ ಪೋಸ್ಟ್ ಅನ್ನು ದರ್ಶನ್ ಮತ್ತು ಮಗಳು ಖುಷಿ ಗೌಡರಿಗೆ ಟ್ಯಾಗ್ ಮಾಡಿದ್ದಾರೆ.
(5 / 10)
ಇವರು ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಜನರು ತಮಗೆ ತೋಚಿದಂತೆ ಚರ್ಚಿಸುತ್ತಿದ್ದಾರೆ.
(6 / 10)
ಈ ಹಿಂದೆಯೂ ಹಲವು ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಗಳಾಗಿವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿದೆ ಎಂದು ವರದಿಗಳು ತಿಳಿಸಿವೆ.
(7 / 10)
ಈ ಹಿಂದೆಯೂ ಪವಿತ್ರಾ ಗೌಡ ಮತ್ತು ದರ್ಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸ್ವತಃ ಪವಿತ್ರಾ ಗೌಡ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು.
(8 / 10)
ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್, ಛತ್ರಿಗಳು ಸಾರ್ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ.
(9 / 10)
ಮಗಳು ಖುಷಿ ಗೌಡ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಪವಿತ್ರಾ ಗೌಡ ಅವರು ದರ್ಶನ್ ಇರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲೂ ದರ್ಶನ್ ಮತ್ತು ಖುಷಿ ಗೌಡ ಡ್ಯಾನ್ಸ್ ಮಾಡುವ ದೃಶ್ಯವಿತ್ತು. ಖುಷಿ ಗೌಡ ಜತೆಗೆ ದರ್ಶನ್ ಕೇಕ್ ಕಟ್ ಮಾಡಿದ್ದರು. ಈ ವಿಡಿಯೋವನ್ನು ಪವಿತ್ರಾ ಗೌಡ ಅವರು ದರ್ಶನ್‌ಗೆ ಟ್ಯಾಗ್ ಮಾಡಿದ್ದರು.
ಇತರ ಗ್ಯಾಲರಿಗಳು