‘ರೌಂಡ್ 2’ ಎನ್ನುತ್ತ ಮತ್ತೆ ತಾಯಿಯಾಗ್ತಿದ್ದಾರೆ ನಟಿ ಪ್ರಣೀತಾ ಸುಭಾಷ್; ಹೀಗಿವೆ ಬೇಬಿ ಬಂಪ್ PHOTOS
- ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಶೇರ್ ಮಾಡಿರುವ ಪ್ರಣೀತಾ, ತಮ್ಮ ಫ್ಯಾನ್ಸ್ಗೆ ಸಿಹಿ ಸುದ್ದಿ ರವಾನಿಸಿದ್ದಾರೆ.
- ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಶೇರ್ ಮಾಡಿರುವ ಪ್ರಣೀತಾ, ತಮ್ಮ ಫ್ಯಾನ್ಸ್ಗೆ ಸಿಹಿ ಸುದ್ದಿ ರವಾನಿಸಿದ್ದಾರೆ.
(1 / 7)
ಪ್ರಣೀತಾ ಸುಭಾಷ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. (instagram\ Pranitha Subhash)
(2 / 7)
ಮೊದಲ ಮಗುವಿನ ಹೆರಿಗೆ ಬಳಿಕ, ಫಿಟ್ನೆಸ್ ಕಾಪಾಡಿಕೊಂಡು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರಣೀತಾ, ಇದೀಗ ಮತ್ತೆ ಗರ್ಭಿಣಿ ಆಗಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ನಟಿಯ ಈ ಸಿಹಿ ಸುದ್ದಿಗೆ ಅವರ ಅಭಿಮಾನಿಗಳು, ಶುಭಾಶಯ ರವಾನಿಸುತ್ತಿದ್ದಾರೆ.
(3 / 7)
2021ರ ಮೇ ತಿಂಗಳಲ್ಲಿ ಬಹುಕಾಲದ ಗೆಳೆಯ ನಿತಿನ್ ರಾಜು ಅವರೊಂದಿಗೆ ಪ್ರಣೀತಾ ಸುಭಾಷ್ ವಿವಾಹ ನೆರವೇರಿತ್ತು. ಕೋವಿಡ್ ಕಾಲಘಟ್ಟದಲ್ಲಿಯೇ ತೀರಾ ಖಾಸಗಿಯಾಗಿಯೇ ಈ ಜೋಡಿಯ ಸರಳ ವಿವಾಹ ನಡೆದಿತ್ತು. ಕುಟುಂಬಸ್ಥರು, ಆಪ್ತರಷ್ಟೇ ಮದುವೆಗೆ ಹಾಜರಿ ಹಾಕಿದ್ದರು.
(4 / 7)
2022ರಲ್ಲಿ ಮಗಳನ್ನು ಬರಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಕಳೆದ ಏಪ್ರಿಲ್ನಲ್ಲಿ ಮಗಳ ಬರ್ತ್ಡೇಯನ್ನೂ ಆಚರಿಸಿಕೊಂಡಿದ್ದರು. ಇದೀಗ ಎರಡನೇ ಮಗುವಿನ ಆಗಮನದ ಬಗ್ಗೆ ಪೋಸ್ಟ್ ಮಾಡಿದ್ದಾರೆ.
(5 / 7)
"ರೌಂಡ್ 2.. ಇನ್ಮೇಲೆ ಪ್ಯಾಂಟ್ಗಳ ಅಳತೆ ಸರಿಹೊಂದಲ್ಲ" ಎಂಬ ಕ್ಯಾಪ್ಷನ್ ನೀಡಿ, ಸೈಜ್ ಬಾರದ ಜೀನ್ಸ್ ಪ್ಯಾಂಟ್ ಧರಿಸಿದ ಭಂಗಿಯ ಫೋಟೋಗಳನ್ನು ಶೇರ್ ಮಾಡಿದ್ದರು. ನಟಿಯ ಪೋಟೋಗಳಿಗೆ ಬಗೆಬಗೆ ಕಾಮೆಂಟ್ ಮೂಲಕ ಶುಭಾಶಯ ರವಾನಿಸುತ್ತಿದ್ದಾರೆ ಅವರ ಆಪ್ತರು.
(6 / 7)
ಅಂದಹಾಗೆ ಪ್ರಣೀತಾ ಸುಭಾಷ್ ಅವರ ಮೊದಲ ಹೆರಿಗೆಯನ್ನು ಸ್ತ್ರೀ ರೋಗ ತಜ್ಞೆ ಮತ್ತು ವೈದ್ಯೆಯೂ ಆಗಿರುವ ಅವರ ತಾಯಿ ಡಾ. ಜಯಶ್ರೀ ಮಾಡಿಸಿದ್ದರು. ಇದೀಗ ಎರಡನೇ ಮಗುವಿನ ಆರೈಕೆಯಲ್ಲಿಯೂ ಅಜ್ಜಿ ಭಾಗಿಯಾಗಿದ್ದಾರೆ.
ಇತರ ಗ್ಯಾಲರಿಗಳು