ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಚಂದಕ್ಕಿಂದ ಚಂದ ರಶ್ಮಿಕಾ ಮಂದಣ್ಣ; ಗೆಳತಿ ಯಾತ್ರಾ ದೇಚಮ್ಮಳ ಮದುವೆಗೆ ಬಂದ ನ್ಯಾಷನಲ್‌ ಕ್ರಶ್‌

ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಚಂದಕ್ಕಿಂದ ಚಂದ ರಶ್ಮಿಕಾ ಮಂದಣ್ಣ; ಗೆಳತಿ ಯಾತ್ರಾ ದೇಚಮ್ಮಳ ಮದುವೆಗೆ ಬಂದ ನ್ಯಾಷನಲ್‌ ಕ್ರಶ್‌

  • Rashmika Mandanna in Kodagu: ವಿರಾಟಪೇಟೆಯ ರಶ್ಮಿಕಾ ಮಂದಣ್ಣ ತನ್ನ ತವರು ಕೊಡಗಿಗೆ ಆಗಮಿಸಿದ್ದು, ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಅಭಿಮಾನಿಗಳ ಕ್ರಶ್‌ ನೂರ್ಮಡಿಗೊಳಿಸಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿರುವ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ತನ್ನ ಗೆಳತಿ ಯಾತ್ರಾ ದೇಚಮ್ಮಳ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕೊಡಗಿನ ಶೈಲಿಯಲ್ಲಿ ಸೀರೆಯುಟ್ಟು ಎಲ್ಲರ ಮನ ಕದ್ದಿದ್ದಾರೆ.  
icon

(1 / 9)

ಸ್ಯಾಂಡಲ್‌ವುಡ್‌ ಮೂಲದ ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್‌ಗಳಿವೆ. ತೆಲುಗು ಮಾತ್ರವಲ್ಲದೆ, ತಮಿಳು, ಹಿಂದಿ ಚಿತ್ರರಂಗದಿಂದಲೂ ಇವರಿಗೆ ಸಾಕಷ್ಟು ಬೇಡಿಕೆಯಿದೆ. ಈ ನಡುವೆ ಬಿಡುವು ಮಾಡಿಕೊಂಡು ಗೆಳತಿಯ ಮದುವೆಗೆ ಆಗಮಿಸಿದ್ದಾರೆ. 
icon

(2 / 9)

ರಾಯಲ್‌ ಬ್ಲೂ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಬಲು  ಸುಂದರವಾಗಿ ಕಾಣಿಸುತತಿದ್ದಾರೆ. ಇವರ ಈ ಫೋಟೋ ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ. 
icon

(3 / 9)

"ನಾನು ಮತ್ತು ನನ್ನ ಗೆಳತಿಯರು ಯಾತ್ರಾ ದೇಚಮ್ಮಳ ಜತೆ ಬೆಳೆದೆವು. ನಿನ್ನ ಮದುವೆಯ ಈ ಕ್ಷಣ ನೀನು ಬಿಝಿ ಇದ್ದ ಕಾರಣ ನಿನ್ನ ಜತೆಗೆ ಫೋಟೋ ತೆಗೆದುಕೊಳ್ಳಲಾಗಲಿಲ್ಲ. ಈ ಮೂಲಕ ನಿನಗೆ ನಿನಗೆ ನಿನ್ನ ಸಂಗಾತಿ ಜತೆಗೆ ಅತ್ಯುತ್ತಮ ಆರೋಗ್ಯ, ಜೀವನ ಪೂರ್ತಿ ಸಂತೋಷ ದೊರಕಲಿ" ಎಂದು ರಶ್ಮಿಕಾ ಮಂದಣ್ಣ ಗೆಳತಿಗೆ ಶುಭ ಹಾರೈಸಿದ್ದಾರೆ.  
icon

(4 / 9)

ರಶ್ಮಿಕಾ ಮಂದಣ್ಣ ನಟನೆಯ ಕುಬೇರ, ಸಿಖಂದರ್‌, ಚಾವಾ, ದಿ ಗರ್ಲ್‌ ಫ್ರೆಂಡ್‌, ರೈನ್ಬೋ ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿದೆ. ಇದೇ ಸಮಯದಲ್ಲಿ ಪುಷ್ಪ 2 ದಿ ರೂಲ್‌ ಸಿನಿಮಾ ಮುಂಬರುವ ತಿಂಗಳುಗಳಲ್ಲಿ ರಿಲೀಸ್‌ ಆಗಲಿದೆ. 
icon

(5 / 9)

ಅನಿಮಲ್‌ ಸಿನಿಮಾದ ಮೂಲಕ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದ್ದರು. ಇದಕ್ಕೂ ಮೊದಲು ಅನಿಮಲ್‌, ಮಿಷನ್‌ ಮಂಜ್ನು, ವಾರಿಸು ಸಿನಿಮಾಗಳಲ್ಲಿ ನಟಿಸಿದ್ದರು.
icon

(6 / 9)

ಗುಡ್‌ಬಾಯ್‌, ಸೀತಾ ರಾಮನ್‌, ಅಂದವಲ್ಲು ಮೀಕು ಜೋಹರ್ಲು, ಪುಷ್ಪ ದು ರೈಸ್‌ ಸಿನಿಮಾಗಳಲ್ಲಿ ನಟಿಸಿದ್ದರು. ಪುಷ್ಪ ಪಾನ್‌ ಇಂಡಿಯಾ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣರ ಖ್ಯಾತಿ ಹೆಚ್ಚಾಗಿತ್ತು.
icon

(7 / 9)

ಇದಕ್ಕೂ ಮೊದಲು ಸುಲ್ತಾನ್‌, ಪೊಗರು, ಭೀಷ್ಮ, ಸರಿಲೇರು ನೀಕೆವರು, ಡಿಯರ್‌ ಕಾಮ್ರೆಡ್‌ ಚಿತ್ರಗಳಲ್ಲಿ ನಟಿಸಿದ್ದರು. 
icon

(8 / 9)

ಯಜಮಾನ, ದೇವದಾಸ್‌, ಗೀತಾ ಗೋವಿದಂ, ಚಲೋ, ಚಮಕ್‌, ಅಂಜನಿ ಪುತ್ರ (ಪುನೀತ್‌ ರಾಜ್‌ಕುಮಾರ್‌ ಜತೆಗೆ), ಕಿರಿಕ್‌ ಪಾರ್ಟಿ (ರಕ್ಷಿತ್‌ ಶೆಟ್ಟಿ) ಸಿನಿಮಾಗಳಲ್ಲಿ ನಟಿಸಿದ್ದರು.
icon

(9 / 9)

ಇತರ ಗ್ಯಾಲರಿಗಳು